ಮಂಗಳೂರು: ದಸರಾ ಪಾರ್ಟಿಯಲ್ಲಿ ಗಲಾಟೆ; ಯುವಕನ ಹತ್ಯೆ
ದಸರಾ ಹಬ್ಬದ ಪ್ರಯುಕ್ತ ಗೆಳೆಯರೆಲ್ಲಾ ಸೇರಿಕೊಂಡು ಪಾರ್ಟಿ ಮಾಡುತ್ತಿದ್ದ ವೇಳೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಧನುಷ್ ಕೊಲೆಯಾದ ಯುವಕ. ಮಂಗಳೂರಿನ ಪಂಪ್ವೆಲ್ ಬಳಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.
Published: 16th October 2021 04:56 PM | Last Updated: 16th October 2021 05:35 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಗೆಳೆಯರೆಲ್ಲಾ ಸೇರಿಕೊಂಡು ಪಾರ್ಟಿ ಮಾಡುತ್ತಿದ್ದ ವೇಳೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಧನುಷ್ ಕೊಲೆಯಾದ ಯುವಕ. ಮಂಗಳೂರಿನ ಪಂಪ್ವೆಲ್ ಬಳಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಅ.15 ರಂದು ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್ ಮತ್ತು ಪ್ರಜ್ವಲ್ ಸೇರಿ ಒಟ್ಟು ಆರು ಜನ ಗೆಳೆಯರು ಜೊತೆಗೂಡಿ ಲಾಡ್ಜ್ನಲ್ಲಿ ಪಾರ್ಟಿ ಮಾಡುತ್ತಿದ್ದರು.ರಾತ್ರಿ 2 ಗಂಟೆ ಸುಮಾರಿಗೆ ಜೇಸನ್ ಸುರತ್ಕಲ್ ಮತ್ತು ಧನುಷ್ ಪಚ್ಚನಾಡಿ ಎಂಬುವರ ಮಧ್ಯೆ ಜಗಳ ಆರಂಭವಾಗಿದೆ.
ಗಲಾಟೆ ತಾರಕ್ಕೇರಿದ ಪರಿಣಾಮ ಈ ವೇಳೆ ಜೇಸನ್ ಹರಿತವಾದ ಆಯುಧದಿಂದ ಧನುಷ್ಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಧನುಷ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.