ಟಿ-20 ವಿಶ್ವಕಪ್: ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಬೆನ್ನುಬಿದ್ದ ಸಿಸಿಬಿ, ಬೆಂಗಳೂರಿನಲ್ಲಿ ಮೂವರ ಬಂಧನ

ದುಬೈನ ಶೇಖ್ ಗಳ ನಾಡಿನಲ್ಲಿ ಟಿ-20 ವಿಶ್ವಕಪ್ ಭರ್ಜರಿ ಶುಭಾರಂಭ ಕಂಡಿದ್ದರೆ, ಇತ್ತ ಬೆಂಗಳೂರಲ್ಲಿ ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಹಾವಳಿ ಮಿತಿ ಮೀರಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಸಿಸಿಬಿ ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದುಬೈನ ಶೇಖ್ ಗಳ ನಾಡಿನಲ್ಲಿ ಟಿ-20 ವಿಶ್ವಕಪ್ ಭರ್ಜರಿ ಶುಭಾರಂಭ ಕಂಡಿದ್ದರೆ, ಇತ್ತ ಬೆಂಗಳೂರಲ್ಲಿ ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಹಾವಳಿ ಮಿತಿ ಮೀರಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಸಿಸಿಬಿ ಪೊಲೀಸರು, ಆನ್ ಲೈನ್ ಬೆಟ್ಟಿಂಗ್ ದಂಧೆಕೋರರನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ನಗರದಲ್ಲಿ ವಿವಿಧ ಆಪ್ ಗಳ ಮೂಲಕ ಆನ್ ಲೈನ್ ಬೆಟ್ಟಿಂಗ್ ನಲ್ಲಿ ಮೂವರು ಆರೋಪಿಗಳು ತೊಡಗಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು, ಓ ಪ್ರಕಾಶ್, ಸತ್ಪಾಲ್ ಸಿಂಗ್ ಮತ್ತು ಗೇವರ್ ಚಂದ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 3.5 ಲಕ್ಷ ರೂಪಾಯಿ ನಗದು ಹಾಗೂ 3 ಮೊಬೈಲ್ ಫೋನ್ ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. 

ಲಾರ್ಡ್ಸ್ ಎಕ್ಸ್ ಚೇಂಜ್ ಡಾಟ್ ಕಾಮ್, ಜೆಟ್ ಎಕ್ಸ್ ಚೇಂಜ್ 9 ಡಾಟ್ ಕಾಮ್ ಮತ್ತು ಸ್ಕೈ ಎಕ್ಸ್ ಚೇಂಜ್ ಡಾಟ್ ಕಾಮ್ (Lords Exchange.com, Jet Exchange 9.com & sky Exchange.Com) ಹೆಸರಿನ ಆಪ್ ಗಳ ಮೂಲಕ ಈ ಆರೋಪಿಗಳು ಆನ್ ಲೈನ್ ಬೆಟ್ಟಿಂಗ್ ಮಾಡುತ್ತಿರುವುದು ಗೊತ್ತಾಗಿದೆ. 

ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com