Online Desk
ಬೆಂಗಳೂರು: ಚನ್ನಪಟ್ಟಣದ ಓವರ್ ಹೆಡ್ ನೀರಿನ ಟ್ಯಾಂಕ್ ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಒಟ್ಟಾರೆ ಪೈಪ್ ಲೈನ್ ಬದಲಾವಣೆ ಮಾಡಿ ಹೊಸ ಪೈಪ್ ಲೈನ್ ಅಳವಡಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ನಂಬಿದ ನಾಯಕರ ವಿಶ್ವಾಸ ದ್ರೋಹದ ನಡುವೆಯೂ ಜೆಡಿಎಸ್ ಕಟ್ಟುತ್ತಾ ಬಂದಿದ್ದೇವೆ: ಕುಮಾರಸ್ವಾಮಿ ಕಣ್ಣೀರು
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಒಂದು ವಾರದಲ್ಲಿ ಹೊಸ ಪೈಪ್ ಲೈನ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು. ನಿನ್ನೆ ಪೈಪ್ ಲೈನ್ ನಲ್ಲಿ ಶವದ ಕುರುಹುಗಳು ಪತ್ತೆಯಾಗಿತ್ತು. ಕೂಡಲೇ ಸಿಂಧಗಿ ವಿಧಾನಸಭಾ ಕ್ಷೇತ್ರದ ಪ್ರಚಾರದಲ್ಲಿದ್ದ ಮಾಜಿ ಮುಖ್ಯಮಂತ್ರಿಯವರು ಅಲ್ಲಿಂದಲೇ ಅಧಿಕಾರಿಗಳ ಜತೆ ಮಾತನಾಡಿ, ಇಡೀ ಪೈಪ್ ಲೈನ್ ಅನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಅವರು ಸೂಚಿಸಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಗುಡುಗಿಗೆ ನಡುಗಿದ ನಾಯಕರು: ಜೆಡಿಎಸ್ ಕಾರ್ಯಾಗಾರಕ್ಕೆ ಹಾಜರು; ಸಾ.ರಾ. ಮಹೇಶ್ ಮಧ್ಯಸ್ಥಿಕೆ!
ಈಗಾಗಲೇ ಮಾಜಿ ಮುಖ್ಯಮಂತ್ರಿಗಳ ಆದೇಶದಂತೆ ಟ್ಯಾಂಕ್ ನೀರು ಸರಬರಾಜಾಗುವ ವಾರ್ಡುಗಳಿಗೆ ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಆರ್ ಎಸ್ ಎಸ್ ವಿರುದ್ಧ ಅಟ್ಯಾಕ್; ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್: ಮುಂದಿನ ವಿಧಾನಸಭೆ ಚುನಾವಣೆಯ ಸೆಕ್ಯುಲರ್ ತಂತ್ರ!