ಶೇ.100 ರಷ್ಟು ಮೊದಲ ಕೋವಿಡ್-19 ಲಸಿಕೆ ನೀಡಿಕೆಯ ಗುರಿ ಸಾಧಿಸಲು ಬಿಬಿಎಂಪಿ ಯೋಜನೆ

ಬೆಂಗಳೂರು ನಗರ ಭಾಗದಲ್ಲಿ ಗುರಿ ಹೊಂದಲಾಗಿದ್ದ ಜನಸಂಖ್ಯೆಯ ಶೇ.100 ರಷ್ಟು ಮಂದಿಗೆ ಮೊದಲ ಡೋಸ್ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸಲಾಗಿದ್ದು ಈಗ ಬಿಬಿಎಂಪಿಯೂ ಇಂಥಹದ್ದೇ ಯೋಜನೆಯನ್ನು ರೂಪಿಸಿದೆ.
ಲಸಿಕೆ ಪಡೆಯುತ್ತಿರುವ ಮಹಿಳೆ (ಸಂಗ್ರಹ ಚಿತ್ರ)
ಲಸಿಕೆ ಪಡೆಯುತ್ತಿರುವ ಮಹಿಳೆ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ನಗರ ಭಾಗದಲ್ಲಿ ಗುರಿ ಹೊಂದಲಾಗಿದ್ದ ಜನಸಂಖ್ಯೆಯ ಶೇ.100 ರಷ್ಟು ಮಂದಿಗೆ ಮೊದಲ ಡೋಸ್ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸಲಾಗಿದ್ದು ಈಗ ಬಿಬಿಎಂಪಿಯೂ ಇಂಥಹದ್ದೇ ಯೋಜನೆಯನ್ನು ರೂಪಿಸಿದೆ.

ಮುಂದಿನ 45 ದಿನಗಳಲ್ಲಿ ತನ್ನ ವ್ಯಾಪ್ತಿಯ ಶೇ.100 ರಷ್ಟು ಮಂದಿಗೆ ಕೋವಿಡ್-19 ಮೊದಲ ಡೋಸ್ ಲಸಿಕೆ ನೀಡಲು ಬಿಬಿಎಂಪಿ ಗುರಿ ಹೊಂದಿದೆ.

ಇದಕ್ಕಾಗಿ ಲಸಿಕೆ ನೀಡುವ ಸಮಯವನ್ನು ಸಂಜೆ 4 ರಿಂದ ರಾತ್ರಿ 9 ಗಂಟೆಗೆ ವಿಸ್ತರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎರಡು ಲಸಿಕಾ ಕೇಂದ್ರಗಳು ಪ್ರತಿ ನಿತ್ಯ ಬೆಳಿಗ್ಗೆ 8- ರಾತ್ರಿ 9 ವರೆಗೆ ಕಾರ್ಯನಿರ್ವಹಣೆ ಮಾಡಲಿದ್ದು ಶೇ.50 ಕ್ಕೂ ಹೆಚ್ಚು ಕೇಂದ್ರ ಗಳು ಬೆಳಿಗ್ಗೆ 8 ರಿಂದ ರಾತ್ರಿ 9 ವರೆಗೆ ಕಾರ್ಯನಿರ್ವಹಣೆ ಮಾಡಲಿವೆ.

ವಿಶೇಷ ಆಯುಕ್ತ ರಣ್ದೀಪ್ ಡಿ.  ಈ ಬಗ್ಗೆ ಮಾತನಾಡಿದ್ದು "ಗುರಿ ಹೊಂದಲಾಗಿರುವ ಜನಸಂಖ್ಯೆಗೆ ಮುಂದಿನ 45 ದಿನಗಳಲ್ಲಿ ಮೊದಲ ಡೋಸ್ ಲಸಿಕೆಯನ್ನು ಪೂರ್ಣಗೊಳಿಸುತ್ತೇವೆ.  ಪ್ರತಿ ನಿತ್ಯ1 ಲಕ್ಷ ಲಸಿಕೆ ಪೂರೈಕೆ ಲಭ್ಯವಿದೆ. ಇದಕ್ಕೂ ಮೊದಲು 35,000-50,000 ಲಸಿಕೆಗಳು ದಿನವೊಂದಕ್ಕೆ ಲಭ್ಯವಿರುತ್ತಿದ್ದವು. ಈಗ ನಾವು ದಿನವೊಂದಕ್ಕೆ 1 ಲಕ್ಷಕ್ಕಿಂತಲೂ ಹೆಚ್ಚಿನ ಮಂದಿಗೆ ಲಸಿಕೆ ನೀಡಬಹುದಾಗಿದೆ" ಎಂದು ತಿಳಿಸಿದ್ದಾರೆ.

"ಬಿಬಿಎಂಪಿ ವ್ಯಾಪ್ತಿಯಲ್ಲಿ ಆ.29 ರ ವರೆಗೆ ಶೇ.75 ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದ್ದು, 2 ನೇ ಡೋಸ್ ಲಸಿಕೆಯನ್ನು ಶೇ.27 ರಷ್ಟು ಮಂದಿಗೆ ನೀಡಲಾಗಿದೆ.

ಪಿಹೆಚ್ ಸಿ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಶಾಶ್ವತ ಲಸಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2:30 ವರೆಗೆ ಲಸಿಕೆ ನೀಡಲಾಗುತ್ತದೆ. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತರೆ ಮಧ್ಯಾಹ್ನ 2:30 ರ ನಂತರವೂ ಲಸಿಕೆ ನೀಡುವ ಸಮಯವನ್ನು ವಿಸ್ತರಣೆ ಮಾಡಲಾಗುವುದು" ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.

"ಬಿಬಿಎಂಪಿ ವತಿಯಿಂದ ಮಲ್ಲೇಶ್ವರಂ ಆಟದ ಮೈದಾನ, ಎಪಿಡೆಮಿಕ್ ರೋಗಗಳ ಆಸ್ಪತ್ರೆ, ಯೆಲಹಂಕ ನ್ಯೂ ಟೌನ್, ಅಂಬೇಡ್ಕರ್ ಭವನಗಳಲ್ಲಿ ಬೃಹತ್ ಲಸಿಕ ಶಿಬಿರ ಎಂಬ ಮೆಗಾ ಕ್ಯಾಂಪ್ ನ್ನು ಪ್ರಾರಂಭಿಸಲಾಗಿದ್ದು ಬೆಳಿಗ್ಗೆ 8 ರಿಂದ 9 ವರೆಗೆ ಇರಲಿದೆ.

ಸ್ಲಮ್ ನಿವಾಸಿಗಳಿಗೆ, ಕಡಿಮೆ ಆದಾಯವಿರುವ ಪ್ರದೇಶಗಳಲ್ಲಿರುವವರಿಗೆ ಲಸಿಕೆ ಅಭಿಯಾನ ನಡೆಯದೇ ಇರುವ ಪ್ರದೇಶಗಳಲ್ಲಿ ವಿಶೇಷ ಕ್ಯಾಂಪ್ ಗಳನ್ನು ನಡೆಸಿ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರ್ಕೆಟ್ ಸರ್ಕಾರಿ ಕಚೇರಿಗಳು ಟೆಕ್ ಪಾರ್ಕ್, ಹಿರಿಯ ನಾಗರಿಕರ ಮನೆಗಳು, ಅನಾರೋಗ್ಯ ಎದುರಿಸುತ್ತಿರುವವರ ಮೆನೆಗಳ ಹತ್ತಿರ ಜನತೆಗೆ ಲಸಿಕೆ ನೀಡಲು ಮೊಬೈಲ್ ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು ಪ್ರತಿ ಬುಧವಾರ ಲಸಿಕಾ ಮೇಳ ನಡೆಯಲಿದ್ದು 1.5-2 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ" ಎಂದು ವಿಶೇಷ ಆಯುಕ್ತ ರಣ್ದೀಪ್ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com