ಕೋವಿಡ್ ನಿಂದ ರಾಜ್ಯದಲ್ಲಿ 115 ಮಕ್ಕಳು ಅನಾಥ; ಬಾಲ ಸೇವಾ ಯೋಜನೆಗೆ 113 ಮಕ್ಕಳು ಅರ್ಹ!

ಕೋವಿಡ್-19 ಮಕ್ಕಳ ಮೇಲೆ ತೀವ್ರವಾದ ಪರಿಣಾಮ ಬೀರಿದ್ದು, ಈ ಸಾಂಕ್ರಾಮಿಕದ ಕಾರಣದಿಂದಾಗಿ ಹಲವಾರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. 
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಬೆಂಗಳೂರು: ಕೋವಿಡ್-19 ಮಕ್ಕಳ ಮೇಲೆ ತೀವ್ರವಾದ ಪರಿಣಾಮ ಬೀರಿದ್ದು, ಈ ಸಾಂಕ್ರಾಮಿಕದ ಕಾರಣದಿಂದಾಗಿ ಹಲವಾರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. 

ಸರ್ಕಾರಿ ಅಂಕಿ-ಅಂಶಗಳ ಪ್ರಕಾರ 115 ಮಕ್ಕಳು 2020 ರ ಮಾರ್ಚ್ 1 ರಿಂದ ಈ ವರ್ಷ ಆಗಸ್ಟ್ ವರೆಗೆ ಕೋವಿಡ್-19 ನಿಂದಾಗಿ ಅನಾಥರಾಗಿದ್ದಾರೆ. 

ಇಬ್ಬರು ಮಕ್ಕಳನ್ನು ಹೊರತುಪಡಿಸಿ- (ಮಕ್ಕಳ ಆರೈಕೆ ಸಂಸ್ಥೆ ಸಿಸಿಐ) ನಲ್ಲಿ ಇರಿಸಲಾಗಿದ್ದು ಉಳಿದವರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆ ಮಕ್ಕಳ ಕುಟುಂಬ ಸದಸ್ಯರಿಗೆ ಒಪ್ಪಿಸಿದೆ. 115 ಮಕ್ಕಳಲ್ಲಿ 113 ಮಕ್ಕಳು ಬಾಲ ಸೇವಾ ಯೋಜನೆಗೆ ಅರ್ಹರಾಗಿದ್ದಾರೆ. ಬಾಲ ಸೇವಾ ಯೋಜನೆಯನ್ನು ಕೋವಿಡ್-19 ನಿಂದ ಅನಾಥರಾದ ಮಕ್ಕಳಿಗಾಗಿ ಈ ವರ್ಷ ಮೇ ತಿಂಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. 

103 ಮಕ್ಕಳಿಗೆ ಈ ಯೋಜನೆಯಡಿ ಆರ್ಥಿಕ ನೆರವನ್ನು ನೀಡುವುದು ಪ್ರಾರಂಭವಾಗಿದ್ದು, ಉಳಿದ 10 ಮಕ್ಕಳಿಗೆ ಆರ್ಥಿಕ ನೆರವು ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ನಗರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಕ್ಕಳು 12 ಅನಾಥರಾಗಿದ್ದು, ನಂತರದ ಸ್ಥಾನದಲ್ಲಿ ಕೋಲಾರ-7, ಬೀದರ್, ಯಾದಗಿರಿ, ಹಾಸನದಲ್ಲಿ 6 ಮಂದಿ, ಬಾಗಲಕೋಟೆ, ತುಮಕೂರು, ಶಿವಮೊಗ್ಗ, ಗದಗ, ದಕ್ಷಿಣ ಕನ್ನಡಗಳಲ್ಲಿ ತಲಾ 5, ಧಾರವಾಡ, ಕೊಡಗು, ಮೈಸೂರು, ರಾಮನಗರಗಳಲ್ಲಿ ತಲಾ 4, ವಿಜಯಪುರ, ದಾವಣಗೆರೆ, ಚಿತ್ರದುರ್ಗಗಳಲ್ಲಿ ತಲಾ 2, ಮಂಡ್ಯ, ಬೆಳಗಾವಿ, ಬಳ್ಳಾರಿಯಲ್ಲಿ ತಲಾ 3, ಚಾಮರಾಜನಗರ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ತಲಾ 1 ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಬಾಲ ಸೇವಾ ಯೋಜನೆಗಳು ಕೇಂದ್ರ ಸರ್ಕಾರದ ಸಲಹೆಗಳ ಆಧಾರದಲ್ಲಿ ರೂಪಿಸಲಾಗಿದ್ದು, ಮಕ್ಕಳಿಗೆ ಪದವಿ ಪೂರ್ಣಗೊಳಿಸುವವರೆಗೂ ಮಾಸಿಕ 3,500 ರೂಪಾಯಿ ಆರ್ಥಿಕ ನೆರವು ಹಾಗೂ ಲಾಜಿಸ್ಟಿಕಲ್ ನೆರವು ಸಿಗಲಿದೆ 

ಏ.1, 2020 ರಿಂದ 2021 ರ ಅ.23 ವರೆಗೆ ದೇಶಾದ್ಯಂತ 1,01,032 ಮಂದಿ ಮಕ್ಕಳು ಕೋವಿಡ್-19 ನಿಂದ ಓರ್ವ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಪೈಕಿ 8,161 ಮಂದಿ ಮಕ್ಕಳು ಅನಾಥರಾಗಿದ್ದು 396 ಮಂದಿ ಮಕ್ಕಳನ್ನು ಪರಿತ್ಯಜಿಸಲಾಗಿದೆ. 92,475 ಮಂದಿ ಮಕ್ಕಳು ಪೋಷಕರ ಪೈಕಿ ಒಬ್ಬರನ್ನು ಕಳೆದುಕೊಂಡಿದ್ದಾರೆ ಎಂದು ಎನ್ ಸಿಪಿ ಸಿಆರ್ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com