ತಮಿಳುನಾಡಿನ ಬಳಿಕ ಕರ್ನಾಟಕದಲ್ಲೂ ಆನ್ ಲೈನ್ ಜೂಜು ನಿಷೇಧ

ತಮಿಳುನಾಡಿನ ಬಳಿಕ ಕರ್ನಾಟಕದಲ್ಲೂ ಆನ್ ಲೈನ್ ಜೂಜಿಗೆ ಸರ್ಕಾರ ನಿಷೇಧ ವಿಧಿಸಿದೆ. 
ಜೂಜು ಅಡ್ಡೆ(ಸಾಂಕೇತಿಕ ಚಿತ್ರ)
ಜೂಜು ಅಡ್ಡೆ(ಸಾಂಕೇತಿಕ ಚಿತ್ರ)

ಬೆಂಗಳೂರು: ತಮಿಳುನಾಡಿನ ಬಳಿಕ ಕರ್ನಾಟಕದಲ್ಲೂ ಆನ್ ಲೈನ್ ಜೂಜಿಗೆ ಸರ್ಕಾರ ನಿಷೇಧ ವಿಧಿಸಿದೆ. 

ಆದರೆ ಲಾಟರಿ, ಕುದುರೆ ರೇಸಿಂಗ್ ಗೆ ನಿಷೇಧ ವಿಧಿಸಲಾಗಿಲ್ಲ. ಆನ್ ಲೈನ್ ಜೂಜು, ಬೆಟ್ಟಿಂಗ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ  ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ. 

ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿರುವ ಮಾಧುಸ್ವಾಮಿ, ಸರ್ಕಾರ ಆನ್ ಲೈನ್ ಜೂಜನ್ನು ನಿಷೇಧಿಸಲಾಗಿದ್ದು ಇದಕ್ಕಾಗಿ ಕರಡು ಮಸೂದೆ ತಯಾರಿಸಲಾಗಿದೆ. ಮಸೂದೆಯಲ್ಲಿ ಜೂಜು ಹಾಗೂ ಬೆಟ್ಟಿಂಗ್ ಸೇರಿದಂತೆ ಹಣದ ನೀಡಿ ಗಳಿಸುವ ಟೋಕನ್ ಗಳನ್ನು ಬಳಕೆ ಮಾಡಿ ಆಡುವ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಸಾಧನದ ಮೂಲಕ ನಡೆಯುವ ಜೂಜನ್ನು ನಿಷೇಧಿಸಲಾಗುವುದು ಎಂಬ ಅಂಶವನ್ನು ಸೇರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸೆ.13 ರಿಂದ ಪ್ರಾರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com