ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶುರುವಾಗಲಿದೆ ಫುಡ್ ಕೋರ್ಟ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.
Published: 04th September 2021 01:30 PM | Last Updated: 04th September 2021 02:00 PM | A+A A-

ಕೆಎಸ್ ಆರ್ ರೈಲ್ವೆ ನಿಲ್ದಾಣ
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.
ಸೌಲಭ್ಯ ಮೇಲ್ದರ್ಜೆಗೇರಿಸಲು ಟೆಂಡರ್ ಕರೆಯಲಾಗಿದೆ. ಆಹಾರ, ಪಾನೀಯ, ಮನರಂಜನೆ, ವಿಶ್ರಾಂತಿ ಸ್ಥಳ ಸೇರಿದಂತೆ ಮಿನಿ ಸಿಟಿ ಸೆಂಟರ್ ನಿರ್ಮಿಸಲಾಗುವುದು.
ಭಾರತೀಯ ರೈಲ್ವೇ ನಿಲ್ದಾಣಗಳ ಅಭಿವೃದ್ಧಿ ನಿಗಮ ನಿಯಮಿತ (IRSDC), ದೇಶಾದ್ಯಂತದ ಪ್ರಮುಖ ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿಗೆ ವಹಿಸಲಾಗಿರುವ ರೈಲ್ವೇ ಅಂಗಸಂಸ್ಥೆ, ಬಿಡ್‌ಗಳನ್ನು ಆಹ್ವಾನಿಸಿದೆ. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಆರ್ಕೇಡ್ ಸ್ಥಾಪನೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಒಂಬತ್ತು ತಿಂಗಳ ಅವಧಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
"ಪ್ರಯಾಣಿಕರಿಗೆ ಅತ್ಯುತ್ತಮ ದರ್ಜೆಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ಅವರ ಪ್ರಯಾಣದ ಅನುಭವವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶ" ಎಂದು ಅದು ಹೇಳಿದೆ. ಬೇಡಿಕೆ-ಆಧಾರಿತ ವಿನ್ಯಾಸ, ಅತ್ಯುತ್ತಮ ಗುಣಮಟ್ಟ, ಸುರಕ್ಷತೆ ಮತ್ತು ಭದ್ರತೆ, ಆಕರ್ಷಕ ಆದಾಯ ಗಳಿಸುವುದು ಪ್ರಮುಖ ಉದ್ದೇಶವಾಗಿದೆ.
ರೈಲು ಆರ್ಕೇಡ್ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ ಮತ್ತು ರೈಲ್ವೆ ನಿಲ್ದಾಣಗಳನ್ನು ರೈಲೋಪೋಲಿಸ್ ಆಗಿ ಪರಿವರ್ತಿಸಲು ಇದೊಂದದು ಅಸಾಧಾರಣ ಹೆಜ್ಜೆಯಾಗಿದೆ ಎಂದು ಐಆರ್‌ಎಸ್‌ಡಿಸಿ ಸಿಇಒ ಮತ್ತು ಎಂಡಿ ಎಸ್‌ಕೆ ಲೋಹಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಹಾರ ಮತ್ತು ಪಾನೀಯ, ಪುಸ್ತಕಗಳು ಮತ್ತು ನಿಯತಕಾಲಿಕೆಗಳು, ಕೈಮಗ್ಗ ಮತ್ತು ಕಲಾಕೃತಿಗಳು, ಮತ್ತು ಔಷಧಿ ಸೇರಿದಂತೆ ಗ್ರಾಹಕ ಸರಕುಗಳ ಕಿಯೋಸ್ಕ್‌ಗಳು ಮತ್ತು ಪ್ರಯಾಣಿಕರ ಅನುಕೂಲ ಮಳಿಗೆಗಳು ಇದರಲ್ಲಿ ಸೇರಿವೆ,