ಎಲ್ಲಾ ಕೋವಿಡ್-19 ಲಸಿಕೆಗಳು ಪರಿಣಾಮಕಾರಿ, ಸುಲಭವಾಗಿ ದೊರೆಯುವ ಲಸಿಕೆ ಪಡೆಯಿರಿ: ತಜ್ಞರ ಸಲಹೆ

ಶೇಕಡವಾರುವಿನಲ್ಲಿ ವ್ಯತ್ಯಾಸವಿದ್ದರೂ ಎಲ್ಲಾ ಲಸಿಕೆಗಳು ಕೋವಿಡ್-19 ವಿರುದ್ಧ ಪರಿಣಾಮಕಾರಿಯಾಗಿವೆ ಮತ್ತು ಎಲ್ಲಾ ಲಸಿಕೆಗಳು ಉತ್ತಮವಾಗಿ ಎಂದು ಸಲಹೆ ನೀಡಿರುವ ವೈದ್ಯರು, ಯಾವುದು ಸುಲಭವಾಗಿ ಲಭ್ಯವಾಗುತ್ತದೆಯೋ ಆ ಲಸಿಕೆಯನ್ನು ಜನರು ಕಡ್ಡಾಯವಾಗಿ ಪಡೆಯಬೇಕು ಎಂದಿದ್ದಾರೆ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ಬೆಂಗಳೂರು: ಶೇಕಡವಾರುವಿನಲ್ಲಿ ವ್ಯತ್ಯಾಸವಿದ್ದರೂ ಎಲ್ಲಾ ಲಸಿಕೆಗಳು ಕೋವಿಡ್-19 ವಿರುದ್ಧ ಪರಿಣಾಮಕಾರಿಯಾಗಿವೆ ಮತ್ತು ಎಲ್ಲಾ ಲಸಿಕೆಗಳು ಉತ್ತಮವಾಗಿ ಎಂದು ಸಲಹೆ ನೀಡಿರುವ ವೈದ್ಯರು, ಯಾವುದು ಸುಲಭವಾಗಿ ಲಭ್ಯವಾಗುತ್ತದೆಯೋ ಆ ಲಸಿಕೆಯನ್ನು ಜನರು ಕಡ್ಡಾಯವಾಗಿ ಪಡೆಯಬೇಕು ಎಂದಿದ್ದಾರೆ.

ಪರಿಣಾಮಕಾರಿತ್ವ ಒಂದೇ ಆಗಿದ್ದರೂ ಕೋವಿಶೀಲ್ಡ್ ಗಿಂತ ಕೋವಾಕ್ಸಿನ್ ಉತ್ತಮ ಎಂದು ಭಾರತೀಯ ಅಧ್ಯಯನಗಳು ಹೇಳುತ್ತವೆ. ಆದಾಗ್ಯೂ, ಈ ಅಧ್ಯಯನಗಳು ಮಿತಿಗೆ ಒಳಪಟ್ಟಿವೆ.  ವಿದೇಶಕ್ಕೆ ತೆರಳುವವರು ಕೋವಿಶೀಲ್ಡ್ ತೆಗೆದುಕೊಳ್ಳುವುದು ಉತ್ತಮ ಎಂಬುದು ಅನೇಕ ರಾಷ್ಟ್ರಗಳಿಂದ ಅನುಮೋದನೆಯಾಗಿದೆ ಎಂದು ಸಕ್ರ ವರ್ಲ್ಡ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಸುಬ್ರಾತಾ ದಾಸ್ ಹೇಳಿದ್ದಾರೆ.

ರೋಗ ನಿರೋಧಕ ಶಕ್ತಿ ವೃದ್ದಿ ಗುರಿಯೊಂದಿಗೆ ಈ ಎಲ್ಲಾ ಲಸಿಕೆಗಳು ಬೇರೆ ಬೇರೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಫಿಜಾರ್ ಲಸಿಕೆ ಸಂಗ್ರಹ ದೇಶದಲ್ಲಿ  ತುಂಬಾ ಕಠಿಣವಾಗಿರುತ್ತದೆ. ಇದನ್ನು -15 ಡಿಗ್ರಿ ಸೆಲ್ಸಿಯಸ್ ನಿಂದ -18 ಡಿಗ್ರಿ ಸೆಲ್ಸಿಯಸ್  ಉಷ್ಣಾಂಶದಲ್ಲಿ ಸಂಗ್ರಹಿಸಿಡಬೇಕಾಗುತ್ತದೆ. ಸ್ಪುಟ್ನಿಕ್ ಲಸಿಕೆ ಶೇ. 90 ರಷ್ಟು ಪರಿಣಾಮಕಾರಿತ್ವ ಹೊಂದಿರುವುದಾಗಿ ರಷ್ಯಾ ದೇಶದ ಅಧ್ಯಯನಗಳು ಹೇಳಿವೆ ಎಂದು ಡಾ. ದಾಸ್, ಸ್ಟ್ರೋಕ್, ಹೃದಯಾಘಾತ, ಮತ್ತಿತರ ಸಮಸ್ಯೆಗಳನ್ನು ಹೊಂದಿರುವವರು ಕೋವಿಶೀಲ್ಡ್ ಯೇತರ ಲಸಿಹೆ ಪಡೆಯಬೇಕೆಂದು ಸಲಹೆ ನೀಡಿದ್ದಾರೆ.

ವಾಸ್ತವವಾಗಿ ಲಸಿಕೆಗಳ ಪರಿಣಾಮಕಾರಿತ್ವದಲ್ಲಿ ದೊಡ್ಡ ವ್ಯತ್ಯಾಸವೇನಿಲ್ಲ, ಎರಡು ಡೋಸ್ ತೆಗೆದುಕೊಂಡ ಬಳಿಕ ಕಾಯಿಲೆಯ ತೀವ್ರತೆ, ಮರಣ ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯನ್ನು ಗಮನಿಸಿದರೆ ಲಸಿಕೆ ಪರಿಣಾಮಕಾರಿತ್ವ ಹೊಂದಿವೆ ಎಂಬುದು ಕಂಡುಬರುತ್ತದೆ. ಕೋವಿಡ್ -19 ಮೊದಲ ಹಾಗೂ ಎರಡನೇ ಅಲೆ ವೇಳೆಯಲ್ಲಿ ಈ ಲಸಿಕೆಗಳ ಪ್ರಯೋಗ ನಡೆದಿದ್ದು, ರೂಪಾಂತರಗಳ ವಿರುದ್ಧದ ಅವುಗಳ ಪರಿಣಾಮಕಾರಿತ್ವ ಬಗ್ಗೆ ಇನ್ನೂ ಅಧ್ಯಯನವಾಗಬೇಕಿದೆ ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯ ಹಾಗೂ ರಾಜ್ಯ ತುರ್ತು ನಿಗಾ ನೆರವು ತಂಡದ ಸದಸ್ಯ ಡಾ. ಅನೂಪ್ ಅಮರನಾಥ್ ಹೇಳಿದ್ದಾರೆ.

ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ನ ಪ್ರಾಥಮಿಕ ಪರಿಣಾಮಕಾರಿತ್ವ ಶೇ.65 ರಿಂದ ಶೇ.80 ರಷ್ಟಿದ್ದರೆ, ಸ್ಪುಟ್ನಿಕ್ ಶೇ. 85 ರಿಂದ 90, ಮಾಡರ್ನಾ ಮತ್ತು ಫೈಜರ್ ಶೇ. 90 ರಷ್ಟು ವರದಿಯಾಗಿದೆ ಎಂದು ಅಪೊಲೋ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ರವೀಂದ್ರ ಮೆಹ್ತಾ ತಿಳಿಸಿದ್ದಾರೆ.

ಲಸಿಕೆ ----------- ಪರಿಣಾಮಕಾರಿತ್ವ
ಸ್ಪುಟ್ನಿಕ್ -------- ಶೇ. 97. 8
ಸ್ಪುಟ್ನಿಕ್ ಲೈಟ್ ---- ಶೇ.  93. 5
ಕೋವಾಕ್ಸಿನ್ ------- ಶೇ. 63.6 ಯಿಂದ ಶೇ. 100
ಮಾಡರ್ನಾ ------ ಶೇ.. 94.1
ಫೈಜರ್ --------- ಶೇ. 94 ರಿಂದ 95
ಜಿಕೋವ್ -ಡಿ --- ಶೇ. 66.6 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com