ಬೆಂಗಳೂರು: ಉದ್ಯಮಿಯೋರ್ವರಿಗೆ ಸೇರಿದ್ದ ಮರ್ಸಿಡಿಸ್ ಬೆಂಝ್ ಕಾರೊಂದನ್ನು ಸದಾಶಿವನಗರ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿ ರಾತ್ರಿ ಗಟ್ಟಿಯಾಗಿ ಸಂಗೀತ ಪ್ಲೇ ಮಾಡಿಕೊಂಡು ಅಜಾಗರೂಕ ಚಾಲನೆ ಮಾಡಿದ್ದೇ ಅಲ್ಲದೆ ರಾತ್ರಿ ಕರ್ಫ್ಯೂ ನಿಯಮ ಉಲ್ಲುಂಘ್ಹಿಸಿದ್ದು ಪೊಲೀಸರ ಗಮನಕ್ಕೆ ಬಂದಿತ್ತು.
ಉದ್ಯಮಿಗೆ ಸೇರಿದ ಈ ಕಾರನ್ನು ಆ ಸಂದರ್ಭ ಆತವ ಸ್ನೇಹಿತರ ಗುಂಪು ಚಾಲನೆ ಮಾಡುತ್ತಿದ್ದರು ಎಂಬುದು ವಿಚಾರಣೆ ಸಂದರ್ಭ ತಿಳಿದುಬಂದಿತ್ತು.
ಅಲ್ಲದೆ ವಾಹನದ ಮೇಲೆ 'ಅಗತ್ಯ ಸೇವೆ ಕರ್ತವ್ಯದಲ್ಲಿ'(on duty essential service) ಎನ್ನುವ ಸ್ಟಿಕ್ಕರ್ ಅಂಟಿಸಲಾಗಿತ್ತು. ಅದನ್ನೂ ಕಾನೂನಿನ ಉಲ್ಲಂಘನೆ ಎಂದು ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುತ್ತಮುತ್ತಲ ನಿವಾಸಿಗಳು ತಮಗೆ ತೊಂದರೆಯಾಗುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಉದ್ಯಮಿಯ ಸ್ನೇಹಿತರು ಜಾಯ್ ರೈಡ್ ಮಾಡಲೆಂದು ಉದ್ಯಮಿ ಕಾರನ್ನು ಪಡೆದಿದ್ದರು.
3 ಹಸುಳೆ ಸೇರಿ 19 ಮಂದಿ ಬಲಿ ಪಡೆದಿದ್ದ ವಿಮಾನ ಅಪಘಾತಕ್ಕೆ ಮಬ್ಬು, ವಿಂಡ್ ಶೀಲ್ಡ್ ವೈಪರ್ ಕಾರಣ
ಕೋರಮಂಗಲ ಆಡಿ ಕಾರು ದುರಂತ: ಭೀಕರ ಅಪಘಾತಕ್ಕೆ ಕಾರಣ ಶೋಧಿಸುತ್ತಿರುವ ಆರ್ ಟಿಒ ಅಧಿಕಾರಿಗಳು
ಟೋಲ್ ಪ್ಲಾಜಾದಲ್ಲಿ ಬ್ರೇಕ್ ವಿಫಲತೆ ನಂತರ ಸಮಯ ಪ್ರಜ್ಞೆ ಮೆರೆದು ಅಪಘಾತವನ್ನು ತಪ್ಪಿಸಿದ ಟ್ರಕ್ ಚಾಲಕ! ವಿಡಿಯೋ
ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಟಿಪ್ಪರ್ ಟ್ರಕ್ ಮಗುಚಿ 13 ಮಂದಿ ಸಾವು, 2 ಸ್ಥಿತಿ ಗಂಭೀರ
Advertisement