ಹಳೆಯ ಬೋರ್‌ವೆಲ್‌ಗಳನ್ನು ನೋಂದಾಯಿಸಿಲ್ಲವೇ? ಸಿಕ್ಕಿಬಿದ್ದರೆ 1 ಲಕ್ಷ ದಂಡ!

ತಮ್ಮ ಹಳೆಯ ಬೋರ್‌ವೆಲ್‌ಗಳನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಥವಾ ಕೇಂದ್ರ ಅಂತರ್ಜಲ ಪ್ರಾಧಿಕಾರ(ಸಿಜಿಡಬ್ಲ್ಯೂಎ)ಯಲ್ಲಿ ನೋಂದಾಯಿಸದಿರುವ ನಿವಾಸಗಳು ಮತ್ತು ವಾಣಿಜ್ಯ ಸಂಸ್ಥೆಗಳು ವಿಳಂಬಕ್ಕಾಗಿ 1 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಿಜಿಡಬ್ಲ್ಯೂಎ ಪ್ರಕಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಮ್ಮ ಹಳೆಯ ಬೋರ್‌ವೆಲ್‌ಗಳನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಥವಾ ಕೇಂದ್ರ ಅಂತರ್ಜಲ ಪ್ರಾಧಿಕಾರ(ಸಿಜಿಡಬ್ಲ್ಯೂಎ)ಯಲ್ಲಿ ನೋಂದಾಯಿಸದಿರುವ ನಿವಾಸಗಳು ಮತ್ತು ವಾಣಿಜ್ಯ ಸಂಸ್ಥೆಗಳು ವಿಳಂಬಕ್ಕಾಗಿ 1 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಿಜಿಡಬ್ಲ್ಯೂಎ ಪ್ರಕಟಿಸಿದೆ.

2022ರ ಮಾರ್ಚ್ 31ರೊಳಗೆ ನೋಂದಾಯಿಸದಿದ್ದರೆ ಅಂತಹ ಬೋರ್‌ವೆಲ್ ಮಾಲೀಕರು ಹೆಚ್ಚುವರಿ ಪರಿಸರ ಪರಿಹಾರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಸೆಪ್ಟೆಂಬರ್ 6ರಂದು ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ, ಬೋರ್‌ವೆಲ್‌ಗಳಿಂದ ನೀರು ತೆಗೆಯುವ ಮೊದಲು ಏಜೆನ್ಸಿಯೊಂದರಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್(NOC) ಪಡೆಯುವುದು ಕಡ್ಡಾಯ. ಬಹುಮಹಡಿ ಕಟ್ಟಡಗಳು, ಗ್ರೂಪ್ ಹೌಸಿಂಗ್ ಸೊಸೈಟಿಗಳು, ನಗರ ಪ್ರದೇಶಗಳಲ್ಲಿನ ಸರ್ಕಾರಿ ನೀರು ಸರಬರಾಜು ಏಜೆನ್ಸಿಗಳು ಮತ್ತು ಕೈಗಾರಿಕಾ, ಮೂಲಸೌಕರ್ಯ ಮತ್ತು ಗಣಿಗಾರಿಕೆ ಯೋಜನೆಗಳು ಮತ್ತು ಈಜುಕೊಳಗಳು, ಅಸ್ತಿತ್ವದಲ್ಲಿರುವ ಅಥವಾ ಹೊಸದಾಗಿ ಕೊರೆಸಲಿರುವ ಬೋರ್ ವೇಲ್ ಗಳಿಗಾಗಿ ಎನ್ಒಸಿ ಪಡೆಯುವುದು ಅತ್ಯವಶ್ಯಕ.

ಸಿಜಿಡಬ್ಲ್ಯೂಎಯ ನಿವೃತ್ತ ವಿಜ್ಞಾನಿ ಟಿ. ರಾಜೇಂದ್ರನ್ ಅವರು, ಹೊಸ ಸಿಜಿಡಬ್ಲ್ಯೂಎ ಸೂಚನೆಯು ಜ್ಞಾಪನೆಯಾಗಿದೆ. ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಮಾರ್ಗಸೂಚಿಗಳಿಗೆ ಅನುಗುಣವಾಗಿದೆ. ಹೊಸ ಬೋರ್‌ವೆಲ್‌ಗಳನ್ನು ಕೊರೆದವರಿಗೆ ದಂಡ ಅನ್ವಯಿಸುವುದಿಲ್ಲ. ಹೊಸ ಬೋರ್‌ವೆಲ್‌ಗಳನ್ನು ಕೊರೆದವರಿಗೆ ದಂಡ ಅನ್ವಯಿಸುವುದಿಲ್ಲ. ಹೊಸವುಗಳನ್ನು 500 ರೂಪಾಯಿ ಶುಲ್ಕ ಪಾವತಿಸಿ ಮತ್ತು ಎನ್ಒಸಿ ಪಡೆಯುವ ಮೂಲಕ ನೋಂದಾಯಿಸಿಕೊಳ್ಳಬೇಕು.

ಸೆಪ್ಟೆಂಬರ್ 24, 2020 ರಿಂದ ಅಂತರ್ಜಲ ವಿಸರ್ಜನೆ ಮತ್ತು ಮರುಸ್ಥಾಪನೆಗಾಗಿ 1 ಲಕ್ಷ ರೂಪಾಯಿ ಶುಲ್ಕವನ್ನು ಘೋಷಿಸಲಾಗುತ್ತದೆ. ಆದಾಗ್ಯೂ, ಸಾಂಕ್ರಾಮಿಕ ರೋಗದಿಂದಾಗಿ, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿಲ್ಲ ಎಂದು ಅವರು ಹೇಳಿದರು.

ಇನ್ನು 2022 ಮಾರ್ಚ್ 31 ರೊಳಗೆ ಎನ್ಒಸಿಗೆ ಅರ್ಜಿ ಸಲ್ಲಿಸಲು ವಿಫಲರಾದವರು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಪರಿಸರ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಆದರೆ ಆ ಪರಿಹಾರ ಮೊತ್ತ ಎಷ್ಟು ಎಂದು ತಿಳಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com