ಮೈಸೂರು: ದೇವಸ್ಥಾನ ತೆರವು ವಿರುದ್ಧ ಪ್ರತಿಭಟನೆ ವೇಳೆ ಉರ್ದು ಪತ್ರಿಕೆ ಪತ್ರಕರ್ತನ ಮೇಲೆ ಹಲ್ಲೆ

ನಗರದಲ್ಲಿ ಗುರುವಾರ ದೇವಸ್ಥಾನ ತೆರವು ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಉರ್ದು ಡೈಲಿ ಮತ್ತು ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು.
ಹಲ್ಲೆಗೊಳಗಾದ ಕೌಸರ್ ನ್ಯೂಸ್ ಪ್ರಧಾನ ಸಂಪಾದಕ ಮೊಹಮ್ಮದ್ ಸಪ್ಧಾರ್ ಖೈಸರ್
ಹಲ್ಲೆಗೊಳಗಾದ ಕೌಸರ್ ನ್ಯೂಸ್ ಪ್ರಧಾನ ಸಂಪಾದಕ ಮೊಹಮ್ಮದ್ ಸಪ್ಧಾರ್ ಖೈಸರ್

ಮೈಸೂರು: ನಗರದಲ್ಲಿ ಗುರುವಾರ ದೇವಸ್ಥಾನ ತೆರವು ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಉರ್ದು ಡೈಲಿ ಮತ್ತು ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು.

ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ ಹೇಳಿಕೆಯನ್ನು ರೆಕಾರ್ಡಿಂಗ್ ಮಾಡುವಾಗ ಕೌಸರ್ ನ್ಯೂಸ್ ಪ್ರಧಾನ ಸಂಪಾದಕ ಮೊಹಮ್ಮದ್ ಸಪ್ಧಾರ್ ಖೈಸರ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರತಿಭಟನೆಯನ್ನು ರೆಕಾರ್ಡ್ ಮಾಡಿಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೇದಿಕೆ ಕಾರ್ಯಕರ್ತರು, ವಿಡಿಯೋವನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿ ಮೊಹಮ್ಮದ್ ಮೇಲೆ ಹಲ್ಲೆ ನಡೆಸಿದ್ದಾರೆ.

ತಾನೊಬ್ಬ ಪತ್ರಕರ್ತ ಎಂದು ಹೇಳಿದ್ದರೂ ಪೊಲೀಸರ ಸಮ್ಮುಖದಲ್ಲಿಯೇ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ. ತಕ್ಷಣ ಪೊಲೀಸರು ಕೋಟೆ ಆಂಜನೇಯ ಸ್ವಾಮಿ ದೇವಾಲಯ ಬಳಿಕ ರೂಮ್ ಒಂದಕ್ಕೆ ಕರೆದೊಯ್ದು ಪತ್ರಕರ್ತನನ್ನು ರಕ್ಷಿಸಿದ್ದಾರೆ. 

ಪ್ರತಿಭಟನಾ ಸ್ಥಳದ ಒಳಗಿದ್ದ ಅಪರಿಚಿತರಿಂದ ಈ ಘಟನೆ ನಡೆದಿದೆ ಎಂದು ಅನೇಕ ಪ್ರತಿಭಟನಾಕಾರರು ಹೇಳಿದ್ದಾರೆ. ಪತ್ರಕರ್ತ ಎಂದು ತಿಳಿದ ಮೇಲೂ ಪ್ರತಿಭಟನಾಕಾರರು ಹಲ್ಲೆಯನ್ನು ಮುಂದುವರೆಸಿದ್ದಾಗಿ ಅನೇಕ ಮಾಧ್ಯಮ ಪ್ರತಿನಿಧಿಗಳು ಹೇಳಿದ್ದಾರೆ. 

ಈ ಘಟನೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರನ್ನು ಆಗ್ರಹಿಸಿದೆ. ಧಾರ್ಮಿಕ ಕಾರ್ಯಕ್ರಮಗಳ ಸುದ್ದಿ ಮಾಡುವಾಗ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com