ಬೆಳ್ಳಂದೂರು ಫ್ಲೈ ಓವರ್ ಬೀಳಿಸುವ ಯೋಜನೆ ಇಲ್ಲ: ಬಿಎಂಆರ್ ಸಿಎಲ್

ಮೆಟ್ರೋ ಕಾಮಗಾರಿಗಾಗಿ ಹೊರ ವರ್ತುಲ ರಸ್ತೆಯಲ್ಲಿನ ಫ್ಲೈ ಓವರ್ ನ್ನು ಧ್ವಂಸಗೊಳಿಸುವುದಿಲ್ಲ ಎಂದು ಬಿಎಂಆರ್ ಸಿಎಲ್ ಗುರುವಾರ ಖಚಿತಪಡಿಸಿದೆ. ಫ್ಲೈ ಓವರ್ ನಡುವೆ ಲಭ್ಯವಿರುವ ಜಾಗದಲ್ಲಿ ಕಾಮಗಾರಿ ಮಾಡಲಾಗುವುದು ಎಂದು ಅದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೆಟ್ರೋ ಕಾಮಗಾರಿಗಾಗಿ ಹೊರ ವರ್ತುಲ ರಸ್ತೆಯಲ್ಲಿನ ಫ್ಲೈ ಓವರ್ ನ್ನು ಧ್ವಂಸಗೊಳಿಸುವುದಿಲ್ಲ ಎಂದು ಬಿಎಂಆರ್ ಸಿಎಲ್ ಗುರುವಾರ ಖಚಿತಪಡಿಸಿದೆ.  ಫ್ಲೈ ಓವರ್ ನಡುವೆ ಲಭ್ಯವಿರುವ ಜಾಗದಲ್ಲಿ ಕಾಮಗಾರಿ ಮಾಡಲಾಗುವುದು ಎಂದು ಅದು ತಿಳಿಸಿದೆ.

ಇಬ್ಬಲೂರು ಮತ್ತು ಬೆಳ್ಳಂದೂರು ಮೆಟ್ರೋ ನಿಲ್ದಾಣ ನಡುವಿನ ಮೇಲ್ಸುತುವೆ ಮಾರ್ಗವನ್ನು ಅತಿಕ್ರಮಿಸಿದ್ದಲ್ಲಿ ಈಗಿರುವ ಸ್ಥಳದ ಯಾವುದೇ ಒಂದು ಬದಿಯಲ್ಲಿ ಲಭ್ಯವಿರುವ ಸುಮಾರು 60-70 ಮೀಟರ್ ನಷ್ಟು ಜಾಗದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಬಿಎಂಆರ್ ಸಿಎಲ್ ತಿಳಿಸಿದೆ. 

 ಇಬ್ಬಲೂರು ಮತ್ತು ಬೆಳ್ಳಂದೂರು ಮೆಟ್ರೋ ನಿಲ್ದಾಣ ನಡುವಿನ ಮೇಲ್ಸುತುವೆ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಯಾವುದೇ ರೀತಿಯ ಅತಿಕ್ರಮವಾಗಿಲ್ಲ, ಹೀಗಾಗಿ  ಸ್ಥಳಾಂತರವಾಗಲೀ ಅಥವಾ ಧ್ವಂಸಗೊಳಿಸುವ ಅಗತ್ಯತೆ ಉದ್ಬವಿಸದು ಎಂದು ಬಿಎಂಆರ್ ಸಿಲ್ ಹೇಳಿದೆ. 

ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದ ನಂತದ ಪ್ರಸ್ತಾವಿತ ಮೇಲ್ಸುತುವೆ ಪ್ರದೇಶದ ಬಳಿಯ ಮಾರ್ಗದ ಕಾಮಗಾರಿಗಾಗಿ ಸಂಬಂಧಿತ ಕ್ಲಿಯರೆನ್ಸ್ ಗಾಗಿ ಬಿಬಿಎಂಪಿಯಿಂದ ವಿವರಗಳನ್ನು ಬಿಎಂಆರ್ ಸಿಎಲ್ ಕೇಳಿದೆ. 

ಬಿಬಿಎಂಪಿಗೆ ಬರೆದಿರುವ ಪತ್ರದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ. ಆರ್. ಪುರಂ ವರಿಗೆ 2-ಎ ಹಂತದ ಮೆಟ್ರೋ ಯೋಜನೆಗಾಗಿ ಬೆಳ್ಳಂದೂರು ಫ್ಲೈ ಓವರ್ ಧ್ವಂಸಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದು ಬಿಎಂಆರ್ ಸಿಎಲ್ ನ ಎಂಜಿನಿಯರ್ ಒಬ್ಬರು ಮಂಗಳವಾರ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com