ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ; 40 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಬಿಡಿಎ

ಯಶವಂತಪುರ ಹೋಬಳಿಯ ಉಲ್ಲಾಳ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸಿದ  ಎರಡು ಪ್ರತ್ಯೇಕ ಒತ್ತುವರಿ ಕಾರ್ಯಾಚರಣೆಯಲ್ಲಿ 40 ಕೋಟಿ 57 ಲಕ್ಷ ರೂ. ಮೌಲ್ಯದ  ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ.
ಉಲ್ಲಾಳ್ ವಿನಲ್ಲಿ ಅಕ್ರಮ ತೆರವು ಕಾರ್ಯಾಚರಣೆ ಚಿತ್ರ
ಉಲ್ಲಾಳ್ ವಿನಲ್ಲಿ ಅಕ್ರಮ ತೆರವು ಕಾರ್ಯಾಚರಣೆ ಚಿತ್ರ

ಬೆಂಗಳೂರು: ಯಶವಂತಪುರ ಹೋಬಳಿಯ ಉಲ್ಲಾಳ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸಿದ  ಎರಡು ಪ್ರತ್ಯೇಕ ಒತ್ತುವರಿ ಕಾರ್ಯಾಚರಣೆಯಲ್ಲಿ 40 ಕೋಟಿ 57 ಲಕ್ಷ ರೂ. ಮೌಲ್ಯದ  ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ.

 ಈ ಹಿಂದೆ ಸರ್ವೇ ನಂಬರ್ 156/2 ರಲ್ಲಿ 1 ಎಕರೆ ಮತ್ತು 12 ಗಂಟೆ  ಮತ್ತು ಸರ್ವೆ ನಂಬರ್ 156/ 3 ರಲ್ಲಿ 1 ಎಕರೆ 28 ಗುಂಟೆ ಜಾಗದಲ್ಲಿದ್ದ ಎರಡು ಫ್ಲಾಟ್  ಜಾಗಗಳನ್ನು ವಶಕ್ಕೆ ಪಡೆಯಲಾಗಿತ್ತು.  ಈ ಆಸ್ತಿ ಒತ್ತುವರಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯದಲ್ಲಿ ಬಿಡಿಎ ಪರವಾಗಿ ತೀರ್ಪು ಬಂದಿದೆ ಎಂದು ಅಧಿಕೃತ ಹೇಳಿಕೆಗಳು ತಿಳಿಸಿವೆ.

ಈ ತೀರ್ಪಿನ ನಂತರ ಪೊಲೀಸ್ ಅಧೀಕ್ಷಕ ಭಾಸ್ಕರ್ ಮತ್ತು ಎಕ್ಸಿಕ್ಯೂಟಿವ್ ಎಂಜಿನಿಯರ್ ಸುಷ್ಮಾ ನೇತೃತ್ವದಲ್ಲಿನ ಬಿಡಿಎ ಅಧಿಕಾರಿಗಳು ಗುರುವಾರ ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸಿದ್ದು, ತನ್ನ ಭೂಮಿಯನ್ನು ವಶಕ್ಕೆ ಪಡೆದಿದೆ.

ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 6 ನೇ ಬ್ಲಾಕ್ ನಲ್ಲಿ ನಡೆದ ಎರಡನೇ ಕಾರ್ಯಾಚರಣೆಯಲ್ಲಿ ನಿವೇಶನಗಳ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಆದಾಗ್ಯೂ,  ಉಲ್ಲಾಳದಲ್ಲಿ 30x40 ಚದರ ಅಡಿ ಅಳತೆಯ 7 ಬ್ಲಾಕ್‌ಗಳಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಕೋರ್ಟ್ ಆದೇಶದಂತೆ ನ್ಯಾಯಾಲಯ ಈ ಜಾಗವನ್ನು ತೆರವುಗೊಳಿಸಿದೆ.  ಪ್ರಸ್ತುತ ಇದರ ಮಾರುಕಟ್ಟೆ ಮೌಲ್ಯ 6.05 ಕೋಟಿ ಆಗಿದೆ.  ಎರಡು ಜಮೀನಿನ ಪ್ರಸ್ತುತ ಮಾರುಕಟ್ಟೆ ಮೌಲ್ಯ 34.52 ಕೋಟಿ ರೂ. ಆಗಿದೆ. 

ವಿವಿಧ ಕಡೆಗಳಲ್ಲಿ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಬಿಡಿಎ ವಶಕ್ಕೆ ಪಡೆದಿದೆ. ಕಾರ್ಯಾಚರಣೆ ನಿರಂತರವಾಗಿರುತ್ತದೆ ಮತ್ತು ಯಾವುದೇ ಅತಿಕ್ರಮಣಕಾರರ ಪ್ರಭಾವವಿದ್ದರೂ, ಅವರ ಬಳಿ ಇರುವ ಬಿಡಿಎ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com