ಸಾಧನೆಯ ಲಸಿಕಾ ಗುರಿ ತಲುಪಿದ ಕರ್ನಾಟಕ; ಪಡೆದವರಲ್ಲಿ ಮಹಿಳೆಯರೇ ಹೆಚ್ಚು: ಸಚಿವ ಡಾ. ಸುಧಾಕರ್

ಕರ್ನಾಟಕ ರಾಜ್ಯದಲ್ಲಿ ನಿಗದಿತ ಕೋವಿಡ್ ಲಸಿಕಾ ಗುರಿ ತಲುಪಲಾಗಿದ್ದು, ಪುರುಷರಿಗಿಂತ ಹೆಚ್ಚಿನ ಮಹಿಳೆಯರೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಿಗದಿತ ಕೋವಿಡ್ ಲಸಿಕಾ ಗುರಿ ತಲುಪಲಾಗಿದ್ದು, ಪುರುಷರಿಗಿಂತ ಹೆಚ್ಚಿನ ಮಹಿಳೆಯರೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸಚಿವ ಡಾ. ಸುಧಾಕರ್, ಲಿಸಿಕಾ ಅಭಿಯಾನದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಒಂದೇ ದಿನ ಭಾರತದಲ್ಲಿ 2.50 ಕೋಟಿ ಲಸಿಕೆ ನೀಡಲಾಗಿದೆ. ಇಡೀ ವಿಶ್ವದಲ್ಲಿ ಈ ಮಟ್ಟದಲ್ಲಿ ಲಸಿಕೆ ಎಲ್ಲಿಯೂ ಕೊಟ್ಟಿರಲಿಲ್ಲ. ನಮ್ಮ  ರಾಜ್ಯದಲ್ಲಿ 31 ಲಕ್ಷ ವ್ಯಾಕ್ಸಿನ್ ಹಾಕಿದ್ದೇವೆ. 29,50,093 ಹೆಸರು ಕೋವಿಡ್ ಆ್ಯಪ್‌ನಲ್ಲಿ ದಾಖಲಾಗಿದೆ. ಇಂದು 1.87 ಲಕ್ಷ ಹೆಸರನ್ನು ವೆಬ್ ಸೈಟ್ ನಲ್ಲಿ  ಅಪ್ಲೋಡ್ ಮಾಡಲಾಗುತ್ತದೆ ಎಂದರು. 

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯವಾಗಿದೆ.  ನಂತರದ ಸ್ಥಾನದಲ್ಲಿ ಗುಜರಾತ್, ಮಧ್ಯಪ್ರದೇಶ , ಬಿಹಾರ ರಾಜ್ಯಗಳಿವೆ. ಕರ್ನಾಟಕದ 14 ಜಿಲ್ಲೆಗಳಲ್ಲಿ ಟಾರ್ಗೆಟ್ ಗಿಂತ ಹೆಚ್ಚು ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ 62000 ಎರಡನೇ ಲಸಿಕೆ ಕೊಟ್ಟಿದ್ದೇವೆ. ದೇಶದಲ್ಲಿ ಕೋವಿಡ್ ಲಸಿಕೆಯಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದೆ‌ ಎಂದರು.

4 ಜಿಲ್ಲೆಗಳಲ್ಲಿ 70%ರಷ್ಟು ಟಾರ್ಗೆಟ್ ಕಡಿಮೆಯಾಗಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಅತಿ ಕಡಿಮೆ ಲಸಿಕೆ ಪಡೆಯಲಾಗಿದೆ. ಲಸಿಕೆ ಹಾಕುವುದರಲ್ಲಿ‌ ಕಡಿಮೆ ಮಾಡಲಾಗಿದೆ. 1 ಕೋಟಿ ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಲಸಿಕೆ ವಿತರಣೆಯಲ್ಲಿ‌ ಕೊಡಗು‌ ಕೊನೆಯಲ್ಲಿದೆ. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಗುರಿಮುಟ್ಟಿದ್ದೇವೆ. ಇಡೀ ದೇಶದಲ್ಲಿ ಬಿಬಿಎಂಪಿ ಮೊದಲ ಸ್ಥಾನದಲ್ಲಿದೆ. ವ್ಯಾಕ್ಸಿನ್ ಡ್ರೈವ್ ಮಾಡಿರುವುದರಲ್ಲಿಯೂ ಬಿಬಿಎಂಪಿ ಮೊದಲಿದೆ.

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯವಾಗಿದೆ. ದೇಶದಲ್ಲಿ ಬೆಳಗಾವಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನ ಬಿಹಾರದ ಈಸ್ಟ್ ಚಂಪಾರಣ್ ಇದೆ. ಕರ್ನಾಟಕದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆದ್ದಾರೆ. 14.27ಲಕ್ಷ ಪುರುಷರು ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ 5 ಕೋಟಿ ಲಸಿಕೆ ಗುರಿ ತಲುಪಿದ್ದೇವೆ. ಆಯುಷ್ಮಾನ್ ಆರೋಗ್ಯ ಕಾರ್ಡ್ ಅನ್ನು ಮೂರು ತಿಂಗಳಲ್ಲಿ ಎಲ್ಲರ‌ ಮನೆ ತಲುಪಿಸುವ ಗುರಿಯನ್ನು ಆರೋಗ್ಯ ಇಲಾಖೆ ಇಟ್ಟುಕೊಂಡಿದೆ ಎಂದು ತಿಳಿಸಿದರು.

ಕಲ್ಬುರ್ಗಿಯಲ್ಲಿ ಕೋವಿಡ್ ಲಸಿಕೆಯಲ್ಲಿ ಕೊನೆಯ ಸ್ಥಾನ ಬಂದಿರುವುದನ್ನು ಆಡಳಿತದ ವೈಫಲ್ಯ ಎನ್ನಲಾಗುವುದಿಲ್ಲ. ಇದು ಅಲ್ಲಿನ ನಾಗರೀಕರಿಗೆ ಹಿಂಜರಿಕಾ ಭಾವನೆಯಿಂದಾಗಿರುವುದು. ಅಮೆರಿಕಾ ದೇಶದಲ್ಲಿಯೇ ಕೆಲವೆಡೆ ಲಸಿಕೆ ಪಡೆಯುವಲ್ಲಿ ಇನ್ನೂ ಹಿಂಜರಿಕೆ ಇದೆ ಎನ್ನುವುದಾದರೆ, ಕಲ್ಬುರ್ಗಿ ಭಾಗದ ಜನರಿಗೆ ಹೆದರಿಕೆ ಇರುವುದು ಸಹಜಯವೇ. ಲಸಿಕೆ ಬಗ್ಗೆ ಕಲ್ಬುರ್ಗಿ ಜಿಲ್ಲೆಯಲ್ಲಿ ಅರಿವು ಮೂಡಿಸಿ ಲಸಿಕೆ ನೀಡುವ ಜವಾಬ್ದಾರಿಯಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಸ್ಪತ್ರೆಗಳಲ್ಲಿ ನೆಗಡಿ, ಜ್ವರ ರೋಗಿಗಳ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸುಧಾಕರ್, ಇದು ಹವಾಮಾನ ಬದಲಾವಣೆಯ ವೈರಲ್ ಪ್ಲ್ಯೂ ಹೆಚ್ಚಾಗಿದೆ. ಎಲ್ಲಿಯೂ ಕೋವಿಡ್ ಸೋಂಕು ಹೆಚ್ಚಳ ಕಂಡು ಬಂದಿಲ್ಲ ಆದರೆ ಜನ ಜಾಗೃತರಾಗಿಯೇ ಇರಬೇಕು ಎಂದರು.

ಎರಡೂ ಡೋಸ್ ಆದ ನಂತರ ಬೂಸ್ಟರ್ ಕೊಡುವ ವಿಚಾರದ ಬಗ್ಗೆ ಇನ್ನು ಕ್ಲಾರಿಟಿ ಇಲ್ಲ. ಮಾರ್ಗಸೂಚಿ ಕೇಂದ್ರದಿಂದ ಬರಬೇಕು. ಮಾರ್ಗಸೂಚಿ ಬಂದ ನಂತರ ಕ್ರಮ ತೆಗದುಕೊಳ್ಳುವುದಾಗಿ ಸುಧಾಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com