ಕೆರೆಗಳ ರಕ್ಷಿಸಲು ಅಧಿಕಾರಿಗಳ ನಿರ್ಲಕ್ಷ್ಯ: ಎನ್'ಜಿಟಿ ಮೊರೆ ಹೋದ ನಾಗರೀಕರು, ಹೋರಾಟಗಾರರು

ಬೆಂಗಳೂರಿನ ಜಲಮೂಲವಾಗಿರುವ ಕೆರೆಗಳ ರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತಿರುವ ನಾಗರೀಕರು ಹಾಗೂ ಹೋರಾಟಗಾರರು ಅಳಿವಿನಂಚಿನಲ್ಲಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ರಕ್ಷಣೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್'ಜಿಟಿ) ಮೊರೆ ಹೋಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ಜಲಮೂಲವಾಗಿರುವ ಕೆರೆಗಳ ರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತಿರುವ ನಾಗರೀಕರು ಹಾಗೂ ಹೋರಾಟಗಾರರು ಅಳಿವಿನಂಚಿನಲ್ಲಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ರಕ್ಷಣೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್'ಜಿಟಿ) ಮೊರೆ ಹೋಗಿದ್ದಾರೆ. 

ನಾಗರೀಕರು ಹಾಗೂ ಹೋರಾಟಗಾರರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕೆರೆ ಜಾಗದ ಅತಿಕ್ರಮಣ, ಮಾಲಿನ್ಯ ಮಟ್ಟ ಹಾಗೂ ಇತರೆ ಪರಿಸರೇತರ ಚಟುವಟಿಕೆಗಳ ಪರಿಶೀಲನೆ ನಡೆಸಲು ಸಮಿತಿ ರಚಿಸಿ, ಅಕ್ಟೋಬರ್ 22 ಅಥವಾ ಅದಕ್ಕೂ ಮುನ್ನ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸೆಪ್ಟೆಂಬರ್ 8 ರಂದೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸೂಚನೆಯನ್ನು ನೀಡಿದೆ. ಆದರೆ, ಈ ವರೆಗೂ ಯಾವುದೇ ಅಧಿಕಾರಿಗಳೂ ಕೂಡ ಕೆರೆ ಜಾಗಕ್ಕೆ ಭೇಟಿ ಅಥವಾ ಪರಿಶೀಲನೆಗಳನ್ನು ನಡೆಸಿಲ್ಲ. 

ಮೇದಹಳ್ಳಿ ಗ್ರಾಮದ ಸರ್ವೆ ನಂ 63 ರಲ್ಲಿ ಈ ಕೆರೆ ಇದ್ದು, ಕರ್ನಾಟಕ ಸಣ್ಣ ನೀರಾವರಿ ಇಲಾಖೆ ಈ ಕೆರೆಯನ್ನು ಬಳಕೆ ಮಾಡಿಕೊಳ್ಳುತ್ತಿದೆ. 

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿರುವ ಜಗನ್ ಕುಮಾರ್ ಎಂಬುವವರು ಮಾತನಾಡಿ, ಈ ಪ್ರದೇಶಗಳಲ್ಲಿ ಹಲವು ಅಪಾರ್ಟ್ ಮೆಂಟ್, ಲೇಔಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಕಟ್ಟಡ ನಿರ್ಮಾಣ ಮಾಡಿದ ತ್ಯಾಜ್ಯಗಳು ಕೆರೆಗೆ ಹೋಗಿವೆ. ಸಂಸ್ಕರಿಸದ ಕೊಳಚೆ ನೀರನ್ನು ಕೆರೆಗೆ ಬಿಡುವುದು ಮಾತ್ರವಲ್ಲ, ಬಫರ್ ವಲಯವನ್ನೂ ಅತಿಕ್ರಮಿಸಲಾಗಿದೆ, ಆದರೂ ಅಧಿಕಾರಿಗಳು ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್‌ಜಿಟಿ ನೀಡಿರುವ ನಿರ್ದೇಶನ ಇಂತಿದೆ...

ಅದರಂತೆ ಮೂಲ ಕಂದಾಯ ದಾಖಲೆಗಳು, ಅತಿಕ್ರಮಣ ವಿವರಗಳು, ಬಫರ್ ವಲಯದಲ್ಲಿ ಪಂಪಿಂಗ್ ನಿಲ್ದಾಣವನ್ನು ನಿರ್ಮಿಸಲಾಗಿದೆಯೇ, ಕೆರೆಯ ವಾಸ್ತವಿಕ ವ್ಯಾಪ್ತಿಯ ವಿವರಗಳ, ನೀರಿನ ಗುಣಮಟ್ಟದ ವಿವರಗಳು ಮತ್ತು ಪರಿಸರ ಹಾನಿಯ ವಿವರಗಳನ್ನು ನ್ಯಾಯಾಧೀಕರಣ ಕೇಳಿದೆ, 

ಇದಷ್ಟೇ ಅಲ್ಲದೆ, ಸಮಿತಿಯಲ್ಲಿ ಉಪ ಆಯುಕ್ತರು, ಬೆಂಗಳೂರು ನಗರ, ಹಿರಿಯ ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಅಧಿಕಾರಿ ಮತ್ತು ಹಿರಿಯ ಕೆಎಸ್‌ಪಿಸಿಬಿ ಅಧಿಕಾರಿಗಳನ್ನು ಒಳಗೊಂಡಿರಬೇಕೆಂದು ತಿಳಿಸಿದೆ. 

ನ್ಯಾಯಾಧೀಕರಣ ಆದೇಶ ನೀಡಿದ್ದರು, ಅಧಿಕಾರಿಗಳು ಈ ವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸಂಸ್ಥೆ ಹಾಗೂ ಅಲ್ಲಿನ ನೌಕರರೇ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದರಿಂದ ಕೆರೆ ಕೆಲಸಗಳು ತಡವಾಗಿ ಸಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಅವರು ಮಾತನಾಡಿ, ಮೂರು ದಿನಗಳ ಹಿಂದೆ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿದ್ದಾರೆಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com