ಕರ್ನಾಟಕ ಹೈಕೋರ್ಟ್'ನ 10 ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿದ ಕೇಂದ್ರ ಸರ್ಕಾರ

ಕರ್ನಾಟಕ ಹೈಕೋರ್ಟ್‌ನ 10 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ 10 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. 

ನ್ಯಾಯಮೂರ್ತಿಗಳಾದ ಮರಳೂರ್‌ ಇಂದ್ರಕುಮಾರ್‌ ಅರುಣ್, ಇಂಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್, ರವಿ ವೆಂಕಪ್ಪ ಹೊಸಮನಿ, ಸವಣೂರು ವಿಶ್ವಜಿತ್‌ ಶೆಟ್ಟಿ, ಶಿವಶಂಕರ್‌ ಅಮರಣ್ಣವರ್‌, ಮಕ್ಕಿಮನೆ ಗಣೇಶಯ್ಯ ಉಮಾ, ವೇದವ್ಯಾಸಾಚಾರ್‌ ಶ್ರೀಶಾನಂದ, ಹಂಚಾಟೆ ಸಂಜೀವ್‌ಕುಮಾರ್‌, ಪದ್ಮರಾಜ್‌ ನೇಮಚಂದ್ರ ದೇಸಾಯಿ, ಪಂಜಿಗದ್ದೆ ಕೃಷ್ಣ ಭಟ್‌ ಅವರ ಸೇವೆಯನ್ನು ಕಾಯಂಗೊಳಿಸಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಆದೇಶ ಹೊರಡಿಸಿದೆ. 

2020ರ ಜ.7ರಂದು ನ್ಯಾ.ಎಂ.ಐ.ಅರುಣ್, ನ್ಯಾ.ಇ.ಎಸ್.ಇಂದಿರೇಶ್ ಹಾಗೂ ನ್ಯಾ.ರವಿ.ವೆಂಕಪ್ಪ ಹೊಸಮನಿ, 2020ರ ಏ.28 ರಂದು ವಿಶ್ವಜಿತ್ ಶೆಟ್ಟಿ 2020ರ ಮೇ.4ರಂದು ಶಿವಶಂಕ ಅರಣ್ಣನವರ್, ಉಮಾ, ಶ್ರೀಷಾನಂದ, ಸಂಜೀವ್ ಕುಮಾರ್, ದೇಸಾಯಿ ಹಾಗೂ 2020ರ ಮೇ.21ರಂದು ಕೃಷ್ಣ ಭಟ್ ಅವರು ಹೈಕೋರ್ಟ್'ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದರು. 

ಸುಪ್ರೀಂ ಕೋರ್ಟ್‌ ಕೊಲಿಜಿಯಂ ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಒಟ್ಟು 42 ಕಾಯಂ ನ್ಯಾಯಮೂರ್ತಿಗಳು ಸದ್ಯ ಕರ್ನಾಟಕ ಹೈಕೋರ್ಟ್ ನಲ್ಲಿದ್ದಾರೆ. ಹಾಗೂ ಇನ್ನೂ 3 ಹೆಚ್ಚುವರಿ ನ್ಯಾಯಮೂರ್ತಿಗಳು ಇದ್ದಾರೆ. ಒಟ್ಟಾರೆ ಕರ್ನಾಟಕ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳಿದ್ದಾರೆ. ಅಲ್ಲದೇ ಸದ್ಯ 17 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com