ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ನಡುವೆ ಕೈದಿಗಳಲ್ಲಿ ಮಾನಸಿಕ ಒತ್ತಡ ನಿವಾರಣೆಗೆ ನಿಮ್ಹಾನ್ಸ್ ನೆರವು

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅನೇಕ ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರೆ, ಈ ವಿಚಾರದಲ್ಲಿ ಅತ್ಯಂತ ದುರ್ಬಲ ಗುಂಪು ಕೈದಿಗಳಾಗಿದ್ದಾರೆ. ಇವರಿಗೆ ನೆರವು ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ರಾಷ್ಟ್ರೀಯ ಸಂಸ್ಥೆ (ನಿಮ್ಹಾನ್ಸ್) ದೇಶಾದ್ಯಂತ ಜೈಲುಗಳಿಗೆ ಮಾಡ್ಯೂಲ್ ಒಂದನ್ನು ಹೊರತಂದಿದೆ.
Published on

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅನೇಕ ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರೆ, ಈ ವಿಚಾರದಲ್ಲಿ ಅತ್ಯಂತ ದುರ್ಬಲ ಗುಂಪು ಕೈದಿಗಳಾಗಿದ್ದಾರೆ. ಇವರಿಗೆ ನೆರವು ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ರಾಷ್ಟ್ರೀಯ ಸಂಸ್ಥೆ (ನಿಮ್ಹಾನ್ಸ್) ದೇಶಾದ್ಯಂತ ಜೈಲುಗಳಿಗೆ ಮಾಡ್ಯೂಲ್ ಒಂದನ್ನು ಹೊರತಂದಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಕುಟುಂಬ ಸದಸ್ಯರನ್ನು ನೋಡದೆ ಹಾಗೂ ನ್ಯಾಯಾಲಯಗಳಲ್ಲಿ ಕಾನೂನು ಪ್ರಕ್ರಿಯೆ ಕಾರ್ಯಗಳು ನಡೆಯದೆ ಕೈದಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದ್ದವು.

ಬಹುತೇಕ ಕೈದಿಗಳು ವೈದ್ಯರ ತಂಡವೊಂದನ್ನು ಹೊಂದಿರುತ್ತಾರೆ ಆದರೆ, ಅನೇಕ ಮಂದಿ ಮಾನಸಿಕ ಆರೋಗ್ಯ ತಜ್ಞರನ್ನು ಹೊಂದಿರುವುದಿಲ್ಲ, ಕೈದಿಗಳು ಸೇರಿದಂತೆ ಎಲ್ಲಾ ವರ್ಗದ ಜನರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅಂತವರಿಗಾಗಿ ಈ ಮಾಡ್ಯೂಲ್ ಮಹತ್ವದ್ದಾಗಿದೆ ಎಂದು ಮನೋವೈದ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಸಿ.ನವೀನ್ ಕುಮಾರ್ ಹೇಳಿದ್ದಾರೆ.

ವೈದ್ಯರ ತಂಡ ಈ ಮಾಡ್ಯುಲ್ ಓದಿಕೊಂಡು, ಕೈದಿಗಳಲ್ಲಿ ಒತ್ತಡವನ್ನು ನಿವಾರಿಸಬಹುದಾಗಿದೆ. ಆಡಳಿತಗಾರರು ಅಥವಾ ಮೇಲ್ವಿಚಾರ ತರಗತಿ, ಕಾರ್ಯಗಾರಗಳ ಮೂಲಕ ಮಾನಸಿಕ ಆರೋಗ್ಯ ನಿವಾರಣೆ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಡಾ. ಕುಮಾರ್ ತಿಳಿಸಿದ್ದಾರೆ. 

ಕೈದಿಗಳಲ್ಲಿನ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಂಡ ಬಳಿಕ ಕೈದಿಗಳಿಗಾಗಿ ಮಾಡ್ಯೂಲ್ ಒಂದು ತಯಾರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ನಿಮ್ಹಾನ್ಸ್ ಸಂಸ್ಥೆಯನ್ನು ಕೇಳಿಕೊಂಡಿತ್ತು. ನಿಮ್ಹಾನ್ಸ್ ನ ಒಂಬತ್ತು ವೈದ್ಯರನ್ನೊಳಗೊಂಡ ತಂಡ ಕೋವಿಡ್-19 ಸಂದರ್ಭದಲ್ಲಿ ಕೈದಿಗಳಲ್ಲಿ ಮಾನಸಿಕ ಒತ್ತಡ ನಿವಾರಿಸಲು ಹ್ಯಾಂಡ್ ಬುಕ್ ವೊಂದನ್ನು ಸಿದ್ಧಪಡಿಸಿದ್ದರು. ಬೆಂಗಳೂರಿನ ಕೇಂದ್ರ ಕಾರಾಗಾೃಹದ ಮನೋಶಾಸ್ತ್ರಜ್ಞರು ಕೂಡಾ ಈ ಮಾಡ್ಯುಲ್ ಸಿದ್ಧತೆಯಲ್ಲಿ ನೆರವಾಗಿದ್ದಾರೆ. ದೇಶಾದ್ಯಂತ ಇರುವ ಎಲ್ಲಾ ಕಾರಾಗೃಹಗಳಿಗೆ ಈ ಮಾಡ್ಯುಲ್ ನ್ನು ಕಳುಹಿಸಲಾಗುತ್ತಿದೆ.

ಮಾನಸಿಕ ಒತ್ತಡದಿಂದ ಬಳಲುತ್ತಿರುವ ಕೈದಿಗಳು ಕಂಡುಬಂದರೆ ಕಾರಾಗೃಹ ಸಿಬ್ಬಂದಿ ಅವರನ್ನು ವಿಚಾರಿಸಬೇಕು, ಅಗತ್ಯವಾದುದ್ದನ್ನು ಪೂರೈಸಬೇಕು, ಅವರಿಗೆ ದೈಹಿಕ, ಮಾನಸಿಕ, ಸಂಬಂಧಿಕ ಮತ್ತು ಆಧ್ಯಾತ್ಮಿಕತೆ ವಿಚಾರಗಳಲ್ಲಿ ಪ್ರೋತ್ಸಾಹ ನೀಡಬೇಕು, ಪ್ರತಿ ದಿನ 15 ನಿಮಿಷ ಯೋಗ ಅಥಾ ಉಸಿರಾಟದ ವ್ಯಾಯಾಮ ಮಾಡುವುದರಿಂದ ಅವರಲ್ಲಿ ಮನಸ್ಸು ಹಗುರಗೊಳ್ಳಲಿದೆ. ಕೋವಿಡ್-19 ನಿಂದ ಕುಟುಂಬದ ಸದಸ್ಯರು ಮೃತಪಟ್ಟರೆ ಅಂತಹ ಕೈದಿಗಳಿಗೆ ಮಾನಸಿಕ ಆರೋಗ್ಯದ ನೆರವು ನೀಡಬೇಕಾದ ಅಗತ್ಯವಿರುತ್ತದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com