ವಿಧಾನಮಂಡಲವನ್ನು ಜನರ ಕಲ್ಯಾಣಕ್ಕಾಗಿ ಸಕಾರಾತ್ಮಕ ಚರ್ಚೆಗೆ ಮೀಸಲಿಡಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ವಿಧಾನಮಂಡಲವನ್ನು ಜನಹಿತಕ್ಕಾಗಿ ಸಕಾರಾತ್ಮಕವಾಗಿ ಚರ್ಚೆಗಾಗಿ ಮೀಸಲಿಟ್ಟಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೆಚ್ಚು ಬಲಶಾಲಿಯನ್ನಾಗಿಸಬಹುದಾಗಿದೆ ಎಂದು ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಅಭಿಪ್ರಾಯಪಟ್ಟರು.
ಓಂ ಬಿರ್ಲಾ
ಓಂ ಬಿರ್ಲಾ

ಬೆಂಗಳೂರು: ವಿಧಾನಮಂಡಲವನ್ನು ಜನಹಿತಕ್ಕಾಗಿ ಸಕಾರಾತ್ಮಕವಾಗಿ ಚರ್ಚೆಗಾಗಿ ಮೀಸಲಿಟ್ಟಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೆಚ್ಚು ಬಲಶಾಲಿಯನ್ನಾಗಿಸಬಹುದಾಗಿದೆ ಎಂದು ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಅಭಿಪ್ರಾಯಪಟ್ಟರು.

ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ 'ಪ್ರಜಾಪ್ರಭುತ್ವ: ಸಂಸದೀಯ ಮೌಲ್ಯಗಳ ರಕ್ಷಣೆ' ಕುರಿತು ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನವನ್ನುದ್ದೇಶಿಸಿ ಅವರು ಮಾತನಾಡಿದರು. ನಾವು ವಿಧಾನಮಂಡಲವನ್ನು ಜನಹಿತಕ್ಕಾಗಿ ಸಕಾರಾತ್ಮಕವಾಗಿ ಚರ್ಚೆಗಾಗಿ ಮೀಸಲಿಟ್ಟಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೆಚ್ಚು ಬಲಶಾಲಿಯನ್ನಾಗಿಸಬಹುದಾಗಿದೆ. ಇದಕ್ಕಾಗಿ ಸದನದ ಸದಸ್ಯರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾರದರ್ಶಕೊಳಿಸಬೇಕು. ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳಲ್ಲಿ ಶಾಸಕರ ಅಧಿಕಾರ ಜವಾಬ್ದಾರಿ ಹೆಚ್ಚಾಗಿರುತ್ತದೆ. ಶಾಸಕರು ನೀತಿವಂತರು ಸತ್ಯವಂತರು ಆಗಬೇಕೆಂಬ ಆಸೆಯದಿಂದ ಶಾಸಕಾಂಗವನ್ನು ರೂಪಿಸಲಾಯಿತು. ಶಾಸಕರ ದಕ್ಷತೆ ಕ್ಷಮತೆಯನ್ನು ಹೆಚ್ಚಿಸಲು ವಿಧಾನಮಂಡಲ ಅಧಿವೇಶನ ಪ್ರಮುಖ ಪಾತ್ರವಹಿಸುತ್ತದೆ.ವ್ಯಾಪಕ ಚರ್ಚೆ ಸಂವಾದಗಳು ಕಾನೂನುಗಳು ರೂಪಿಸುವಾಗ ಸದನದಲ್ಲಿ ಆಗದೇ ಇರುವುದು ಬೇಸರದ ಸಂಗತಿ. ಹೀಗಾಗಿ ಶಾಸಕರ ಪಾತ್ರ ಸದನದಲ್ಲಿ ಅವರ ಸಹಭಾಗಿತ್ವ ಚರ್ಚೆ ಬಹಳ ಅಗತ್ಯವಾಗಿದೆ ಎಂದರು.

ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಸ್ಮರಿಸಿ ಮಾತನಾಡಿದ ಓಂ ಬಿರ್ಲಾ ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬರುವ ಜನ ಸಾಮಾನ್ಯವಾಗಿ ವಿಧಾಸೌಧಕ್ಕೆ ಭೇಟಿ ನೀಡಿ ಇದರಿಂದ ಪ್ರೇರಿತಗೊಳ್ಳುತ್ತಾರೆ. ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರನ್ನು ಭೇಟಿಯಾಗಿ ಬಹಳ ಸಂತಸವಾಗುತ್ತದೆ. ಕರ್ನಾಟಕದ ವಿಧಾನಸಭೆ ಪ್ರಜಾಪ್ರಭುತ್ವದ ಪ್ರತೀಕವಾಗಿದೆ. ಜನರ ಆಸೆಗಳನ್ನು ಪ್ರತಿನಿಧಿಸುವ ಐತಿಹಾಸಿಕ ಭವನ ಇದಾಗಿದೆ. ಕರ್ನಾಟಕ ಸಮೃದ್ಧ ಗೌರವಯುತ ವಿಧಾನಸಭೆ ಹೊಂದಿದೆ. ಬಸವೇಶ್ವರರ ಅನುಭವ ಮಂಟಪವೇ ಸಂಸತ್ತಾಗಿತ್ತು. ರಾಣಿ ಚೆನ್ನಮ್ಮ ಅವರ ತ್ಯಾಗ ಪ್ರೇರಣೀಯ. ಕರ್ನಾಟಕದ ಪ್ರಜಾಪ್ರಭುತ್ವದ ಯಾತ್ರೆಯನ್ನು ಸಮೃದ್ಧಗೊಳಿಸುವಲ್ಲಿ ಕಾರಣೀಭೂತರಾದವರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಸ್ವತಂತ್ರದ ಹಿಂದಿನ ಹೋರಾಟ ಸಂಸದೀಯ ಆಡಳಿತ ನಡೆಸುತ್ತಿದ್ದೇವೆ. ಸಂಸದೀಯ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಬಂದಿದೆ. ನಡೆದು ಬಂದ ದಾರಿ ಏನು ಎಂಬುದರ ಅವಲೋಕನ ಇದಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಕೇಂದ್ರಬಿಂದುವಾಗಿದ್ದಾರೆ. ಮತದಾರರು ಪ್ರತಿಚುನಾವಣೆಯಲ್ಲಿ ಮತ ಹಾಕಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾಕ್ಷಿಯಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಜನರ ಕಲ್ಯಾಣವನ್ನು ಕಾನೂನನ್ನು ಜಾರಿಗೊಳಿಸುತ್ತವೆ. 75 ವರ್ಷದ ಈ ಯಾತ್ರೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನಗಳು ಜನರ ಕಲ್ಯಾಣಕ್ಕಾಗಿ ಹೆಚ್ಚು ಪಾತ್ರವಹಿಸುತ್ತವೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನರನ್ನು ಬಲಿಷ್ಠಗೊಳಿಸಬೇಕಿದೆ. ಜನರ ಆಸೆಗಳನ್ನು ವಿಧಾನಮಂಡಲ ಅಧಿವೇಶನದಿಂದ ಪೂರೈಸಬೇಕು ಎಂದರು.

ವಿಧಾನ ಮಂಡಲದೊಳಗೆ ಶಾಸಕರ ಹಿರಿಮೆ ಹೆಚ್ಚಲು ಕಾಲಕಾಲಕ್ಕೆ ಸಂವಾದಗಳು ನಡೆದಿವೆ. ಪ್ರಧಾನಿಗಳು ಮುಖ್ಯಮಂತ್ರಿಗಳು ಮಂತ್ರಿಗಳು ವ್ಯಾಪಕ ಚರ್ಚೆ ನಡೆಸಿ ಅನುಭವಿ ರಾಜಕಾರಣಿ ಸಂಸದೀಯ ಪಟುಗಳು ಇದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಗೊಂಡ ಶಾಸಕರು ಸದನದ ಗೌರವ ಹೆಚ್ಚಿಸುವಂತೆ ಹಾಗೂ ಸಾಮಾಜಿಕ ಬದುಕಿನಲ್ಲಿ ಕೂಡ ಗೌರವ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳುವ ಪರಿಸರ ರೂಪಿತವಾಗಬೇಕು. ಈ ಹಿಂದೆ ಸದನಗಳನ್ನು ದೇವಸ್ಥಾನಗಳಂತೆ ಭಾವಿಸಲಾಗುತ್ತಿತ್ತು.ಆದರೆ ಪ್ರಸಕ್ತ ದಿನಗಳಲ್ಲಿ ಸದನಗಳಲ್ಲಿ ನಡೆಯುತ್ತಿರುವ ಅಹಿತಕರ ವ್ಯವಸ್ಥೆ ರಾಜಕೀಯ ಕಚ್ಚಾಟ ಹೆಚ್ಚುತ್ತಿರುವುದು ಬೇಸರಕ್ಕೆ ಕಾರಣವಾಗಿದೆ. ಸ್ವಾತಂತ್ರ ಬಳಿಕ ಸದನದಲ್ಲಿ ವಾದ ವಿವಾದ, ಸಂವಾದ ಮತ ಬದಲಾವಣೆ ಸಂವಾದ ನಡೆಯಬೇಕೆಂಬ ಉದ್ದೇಶದಿಂದ ಕಾನೂನು ರೂಪಿಸಲಾಗಿತ್ತಾದರೂ ಇಂದಿನ ದಿನಗಳಲ್ಲಿ ಸಂವಾದ ನಡೆಯದೇ ಕೇವಲ ರಾಜಕೀಯ ಕೆಸರೆರಚಾಟ ನಡೆಯುತ್ತಿರುವುದು ಬೇಸರದ ಸಂಗತಿ. 

ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಪ್ರಶ್ನೆಗಳು ಎದ್ದಿವೆ.ನಮ್ಮ ನಮ್ಮ ಸದನಗಳಲ್ಲಿ ವ್ಯಾಪಕ ಚರ್ಚೆ ಉತ್ತಮ ಕಾನೂನು ರೂಪಿತವಾಗಬೇಕು, ಶಾಸಕರು ತಪ್ಪದೇ ಸದನದಲ್ಲಿ ಹಾಜರಾಗಬೇಕಿದೆ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸಂಸದೀಯ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತೇವೆಯೋ ವ್ಯಾಪಕ ಚರ್ಚೆ ನಡೆಸುತ್ತೇವೋ ಅಷ್ಟು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳುತ್ತದೆ. ದೇಶದ ಜನರ ಸಾಮೂಹಿಕ ಕಲ್ಯಾಣವಾಗಬೇಕು. ಹೀಗಾಗಿ ಸಾಮೂಹಿಕ ಕಲ್ಯಾಣಕ್ಕಾಗಿ ಒತ್ತು ನೀಡಬೇಕು.ಪಂಚಾಯತಿ, ನಗರಸಭೆ, ವಿಧಾನಸಭೆ ಯಾವುದೇ ಸಂಸತ್ ಇರಲಿ ಎಲ್ಲಾ ಸದನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳಬೇಕು. ಸಂಸದೀಯ ವ್ಯವಸ್ಥೆ ರಾಜವ್ಯವಸ್ಥೆಯ ಮೂಲವಾಗಿದೆ. ಹೀಗಾಗಿ ಸಂಸದೀಯ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕೆಂದು ಓಂ ಬಿರ್ಲಾ ಕರೆ ನೀಡಿದರು.

ಬಿ.ಎಸ್.ಯಡಿಯೂರಪ್ಪಅವರಿಗೆ ವಿಧಾನಸಭೆಯಲ್ಲಿ ಉತ್ತಮ ಶಾಸಕ ಪ್ರಶಸ್ತಿ ನೀಡುವ ಅವಕಾಶ ಸಿಕ್ಕಿರುವುದು ಪುಣ್ಯ.ಯಡಿಯೂರಪ್ಪ ರೈತರ ಸಾಲಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದು ಯಡಿಯೂರಪ್ಪ ಅವರನ್ನ ಲೋಕಸಭಾ ಸ್ಪೀಕರ್ ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com