ಕೊರೊನಾ ಎಫೆಕ್ಟ್: ಎಂಜಿನಿಯರಿಂಗ್ ಪದವಿಯಲ್ಲಿ ಬಯಾಲಜಿ ಸೇರ್ಪಡೆ; ವಿಟಿಯು ಮಹತ್ವದ ನಿರ್ಧಾರ

ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ(ವಿಟಿಯು) ತನ್ನ ಅಧೀನದಲ್ಲಿರುವ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ವರ್ಷದಿಂದ ಬಯಾಲಜಿ ವಿಷಯವನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ(ವಿಟಿಯು) ತನ್ನ ಅಧೀನದಲ್ಲಿರುವ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ವರ್ಷದಿಂದ ಬಯಾಲಜಿ ವಿಷಯವನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಲಾಗಿರುವ ability enhancement courses ಅಡಿ ಈ ನೂತನ ವಿಷಯವನ್ನು ಸೇರ್ಪಡೆಗೊಳಿಸಲಾಗುತ್ತಿದೆ. 

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಟಿಯು ವೈಸ್ ಚಾನ್ಸೆಲರ್ ಕರಿಸಿದ್ದಪ್ಪ, ಕೊರೊನಾ ಸಾಂಕ್ರಾಮಿಕ ಬಂದಾಗಿನಿಂದ ಎಂಜಿನಿಯರ್ ಉದ್ಯೋಗಿಗಳು ವೈದ್ಯರ ಜೊತೆ ಸೇರಿಕೊಂಡು ಕಾರ್ಯ ನಿರ್ವಹಿಸುವ ಬೆಳವಣಿಗೆ ಕಂಡುಬಂಡಿತ್ತು. ವೈದ್ಯಕೀಯ ಉಪಕರಣ ಅಭಿವೃದ್ಧಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ನಾನ ಮತ್ತಿತರ ಕ್ಷೇತ್ರಗಳಲ್ಲಿ ವೈದ್ಯರ ಜೊತೆ ಎಂಜಿನಿಯರ್ ಗಳೂ ಒಂದಾಗಿದ್ದರು.

ಈ ನೂತನ ಸವಾಲನ್ನು ಸುಲಭವಾಗಿ ಮೆಟ್ಟಿನಿಲ್ಲಲು ಎಂಜಿನಿಯರಿಂಗ್ ಕಲಿಕೆಯ ಮಟ್ಟದಲ್ಲೇ ಬಯಾಲಜಿ ವಿಷಯ ಸೇರ್ಪಡೆಗೊಳಿಸುವುದರಿಂದ ಪ್ರತಿ ಎಂಜಿನಿಯರಿಂಗ್ ವಿದ್ಯಾರ್ಥಿ ವೈದ್ಯಕೀಯ ಕ್ಷೇತ್ರದಲ್ಲಿ ಎದುರಾಗಲಿರುವ ಸವಾಲುಗಳನ್ನು ಎದುರಿಸಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com