2 ನೇ ಡೋಸ್ ಕೋವಿಡ್ ಲಸಿಕೆ ಪಡೆದ ಆರು ತಿಂಗಳ ನಂತರವೂ ಪ್ರತಿಕಾಯ ಇರುತ್ತದೆ- ಅಧ್ಯಯನ

ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಪ್ರತಿಕಾಯ ಡೋಸ್‌ಗೆ ಬೇಡಿಕೆ ಸಲ್ಲಿಸುತ್ತಿರುವಾಗ ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋಧನಾ ಸಂಸ್ಥೆಯಲ್ಲಿ ಆರೋಗ್ಯ ಸಿಬ್ಬಂದಿಗೆ ನಡೆಸಿದ ಪ್ರತಿಕಾಯ ಪರೀಕ್ಷೆಯಲ್ಲಿ 2ನೇ ಡೋಸ್ ತೆಗೆದುಕೊಂಡ ಆರು ತಿಂಗಳ ನಂತರವೂ ಅವರ ಪ್ರತಿಕಾಯಗಳು ಕಡಿಮೆಯಾಗಿರಲಿಲ್ಲ ಎಂಬುದು ತಿಳಿದುಬಂದಿದೆ.
ದೇವಾಲಯವೊಂದರಲ್ಲಿ ವೃದ್ಧ ಮಹಿಳೆಗೆ ಲಸಿಕೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತೆ
ದೇವಾಲಯವೊಂದರಲ್ಲಿ ವೃದ್ಧ ಮಹಿಳೆಗೆ ಲಸಿಕೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತೆ

ಬೆಂಗಳೂರು: ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಪ್ರತಿಕಾಯ ಡೋಸ್‌ಗೆ ಬೇಡಿಕೆ ಸಲ್ಲಿಸುತ್ತಿರುವಾಗ ಜಯದೇವ
ಹೃದ್ರೋಗ ವಿಜ್ಞಾನಗಳ ಸಂಶೋಧನಾ ಸಂಸ್ಥೆಯಲ್ಲಿ ಆರೋಗ್ಯ ಸಿಬ್ಬಂದಿಗೆ ನಡೆಸಿದ ಪ್ರತಿಕಾಯ ಪರೀಕ್ಷೆಯಲ್ಲಿ 2ನೇ ಡೋಸ್ ತೆಗೆದುಕೊಂಡ ಆರು ತಿಂಗಳ ನಂತರವೂ ಅವರ ಪ್ರತಿಕಾಯಗಳು ಕಡಿಮೆಯಾಗಿರಲಿಲ್ಲ ಎಂಬುದು ತಿಳಿದುಬಂದಿದೆ.

ಇದು ಎರಡನೇ ಡೋಸ್‌ ಪಡೆದ ಆರು ತಿಂಗಳ ನಂತರ ಬೂಸ್ಟರ್ ಡೋಸ್ ಅಥವಾ ಮೂರನೇ ಡೋಸ್‌ನ ಅಗತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದೇ  ವರ್ಷದ ಫೆಬ್ರವರಿ ತಿಂಗಳಲ್ಲಿ ಕೋವಿಶೀಲ್ಡ್ 2ನೇ ಲಸಿಕೆ ಪಡೆದಿದ್ದ 250 ಆರೋಗ್ಯ ಕಾರ್ಯಕರ್ತರ ಮೇಲೆ ಎಲಿಸಾ ಮಾದರಿಯಿಂದ ಐಜಿಜಿ ತಟಸ್ಥಗೊಳಿಸುವ ಪ್ರತಿಕಾಯ ಮಟ್ಟಕ್ಕಾಗಿ ಸೂಕ್ಷ್ಮ ಜೀವವಿಜ್ಞಾನ ವಿಭಾಗದಿಂದ ರಕ್ತ ಪರೀಕ್ಷೆ ನಡೆಸಲಾಗಿತ್ತು. 

ಏಪ್ರಿಲ್ 2021ರಲ್ಲಿ ನಡೆದ ಅಧ್ಯಯನ ವೇಳೆಯಲ್ಲಿ ಅದೇ ಗುಂಪಿನ ಶೇಕಡಾ 80% ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಉತ್ತಮ ಪ್ರತಿಕಾಯ ಕಂಡುಬಂದಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. ಇದೇ ಗುಂಪಿನ ಆರೋಗ್ಯ ಕಾರ್ಯಕರ್ತರ ಮೇಲೆ ಮತ್ತೆ ಪ್ರತಿಕಾಯ ಪರೀಕ್ಷೆ ನಡೆಸಿದಾಗ ಶೇಕಡಾ 99 ರಷ್ಟು ಪಾಸಿಟಿವ್ ಪ್ರತಿಕಾಯದ ಪ್ರತಿಕ್ರಿಯೆ ಬಂದಿದೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಧನಾತ್ಮಕ ಪ್ರತಿಕಾಯದ  ಪ್ರತಿಕ್ರಿಯೆ ಹೊಂದಿರದ ಶೇಕಡಾ 20 ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಸೆಪ್ಟೆಂಬರ್ ನಲ್ಲಿ ಗಮನಾರ್ಹ ರೀತಿಯಲ್ಲಿ ಸುಧಾರಣೆಯಾಗಿತ್ತು. 250 ಆರೋಗ್ಯ ಕಾರ್ಯಕರ್ತರ ಪೈಕಿ 19 ಕೋವಿಡ್ ಸೋಂಕಿತರು ಹಾಗೂ ಲಸಿಕೆ ಪಡೆದವರಲ್ಲಿ ಹೆಚ್ಚಿನ ಪ್ರತಿಕಾಯ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com