ಕೊನೆಗೂ ಬೆಂಗಳೂರಿಗೆ ಬಂತು ಇ-ಬಸ್: ಸಚಿವ ಶ್ರೀರಾಮುಲು ಚಾಲನೆ

ಬೆಂಗಳೂರು ಮಹಾನಗರ ಸಾರಿಗೆಯ(ಬಿಎಂಟಿಸಿ) ಬಹುನಿರೀಕ್ಷೆಯ ವಿದ್ಯುತ್‌ ಚಾಲಿತ ಬಸ್‌ಗೆ ಗುರುವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದ್ದಾರೆ.
ಇ-ಬಸ್
ಇ-ಬಸ್

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆಯ(ಬಿಎಂಟಿಸಿ) ಬಹುನಿರೀಕ್ಷೆಯ ವಿದ್ಯುತ್‌ ಚಾಲಿತ ಬಸ್‌ಗೆ ಗುರುವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದ್ದಾರೆ.

ಕೆಂಗೇರಿಯ ಬಸ್‌ ಡಿಪೋದಲ್ಲಿ ಈ ವಾಹನಕ್ಕೆ ಹಸಿರು ನಿಶಾನೆ ದೊರೆತಿದೆ. ಉತ್ತರ ಪ್ರದೇಶ ಮೂಲದ ಜೆಬಿಎಂ ಆಟೋ ಲಿಮಿಟೆಡ್‌ ಕಂಪನಿ ತಯಾರಿಸಿರುವ ಈ ಬಸ್‌, ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸರಾಸರಿ 220 ಕಿಮೀ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ತಯಾರಾಗಿರುವ ಈ ಬಸ್‌ ಒಂದಕ್ಕೆ ಸುಮಾರು 90 ಲಕ್ಷ ರೂ. ವೆಚ್ಚವಾಗಿದೆ. ಒಟ್ಟು 130 ಕೋಟಿ ರೂ. ಈ ಬಸ್‌ಗಳಿಗಾಗಿ ಮೀಸಲಿಡಲಾಗಿದ್ದು, ಡಿಸೆಂಬರ್‌ ವೇಳೆಗೆ ಇನ್ನೂ 93 ಬಸ್‌ಗಳು ರೋಡಿಗಿಳಿಯುವ ನಿರೀಕ್ಷೆಯಿದೆ.

ಆರ್‌ಟಿಓ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ 33 ಸೀಟುಗಳ ಈ ಬಸ್ ಪ್ರಾಯೋಗಿಕವಾಗಿ ಕೆಂಗೇರಿಯಿಂದ ಚಾಲನೆ ಆರಂಭಿಸಲಿದೆ. ನಂತರ, ಯಶವಂತಪುರ ಮತ್ತು ಕೆ.ಆರ್‌.ಪುರಂ ಡಿಪೋಗಳಲ್ಲಿ ಕೂಡ ಬಸ್‌ಗಳು ಸಂಚರಿಸಲಿವೆ. ಪ್ರತಿನಿತ್ಯ ಈ ಬಸ್‌ಗಳು 180 ಕಿಮೀ ವೇಗ ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ.

ಈ ಬಸ್‌ ಅಟೊಮೆಟಿಕ್‌ ತಂತ್ರಜ್ಞಾನದ ಜೊತೆಗೆ, ಸಿಸಿಟಿವಿ ಕ್ಯಾಮೆರಾ, ಲೈಟ್‌, ಸ್ಟಾಪ್‌ ಸಿಗ್ನಲ್‌ ಹೀಗೆ ಹಲವಾರು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಕೇವಲ ಬ್ರೇಕ್‌ ಹಾಗೂ ಆಟೊಮೆಟಿಕ್‌ ಗೇರ್‌ ಆಗಿರೋದ್ರಿಂದ ಚಾಲನೆ ಅತ್ಯಂತ ಸುಲಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com