ಐಟಿ ಕಂಪನಿಗಳು ನೀಡುವ ಕೊಡುಗೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಬೇಕು: ಸಿಎಂ ಬೊಮ್ಮಾಯಿ

ಐಟಿ ಕಂಪನಿಗಳು ಸಮಾಜಕ್ಕೆ ನೀಡುವ ಕೊಡುಗೆಯಿಂದ ಸಾಮಾನ್ಯರಿಗೆ ಅನುಕೂಲವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಐಟಿ ಕಂಪನಿಗಳು ಸಮಾಜಕ್ಕೆ ನೀಡುವ ಕೊಡುಗೆಯಿಂದ ಸಾಮಾನ್ಯರಿಗೆ ಅನುಕೂಲವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
 
ನ್ಯಾಸ್ಕಾಂ ಹಾಗೂ ಫಾರ್ವರ್ಡ್ ಪ್ರತಿಷ್ಠಾನ ಆಯೋಜಿಸಿದ್ದ ಸಿಎಸ್ ಆರ್ ಪ್ರಾಯೋಜಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬೊಮ್ಮಾಯಿ, ಸರ್ಕಾರಿ ಶಾಲೆಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಅತ್ಯಂತ ಉಪಯುಕ್ತ ಹಾಗೂ ಮಹತ್ವದ ಕಾರ್ಯಕ್ರಮ. ಕರ್ನಾಟಕದಲ್ಲಿ ಐಟಿ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 1984ರಲ್ಲಿ ಮೊದಲ ಐಟಿ ಕಂಪನಿ ಪ್ರಾರಂಭವಾದ ನಂತರ ಬೆಂಗಳೂರು ಹಿಂತಿರುಗಿ ನೋಡಿಯೇ ಇಲ್ಲ. ಇಂದು ಕರ್ನಾಟಕ ಅತಿ ಹೆಚ್ಚು ಸ್ಟಾರ್ಟ್ ಅಪ್, ಯುನಿಕಾರ್ನ್, ಆರ್ ಆಂಡ್ ಸಿ ಸಂಸ್ಥೆಗಳನ್ನು ಹೊಂದಿರುವ ರಾಜ್ಯವಾಗಿದೆ ಎಂದರು. 

ಐಟಿ ಕಂಪನಿಗಳು ನಮಗೆ ಅನುಕೂಲಕರ
ಪ್ರತಿಯೊಂದು ಐಟಿ ಕಂಪನಿ ಬೆಂಗಳೂರಿನಲ್ಲಿಯೇ ಪ್ರಾರಂಭಿಸಲು ಮುಂದಾಗುತ್ತಾರೆ‌. ಬೆಂಗಳೂರು 1.25 ಕೋಟಿ ಜನ ಸಂಖ್ಯೆ ಇದೆ. ಪ್ರತಿ ದಿನ ಐದು ಸಾವಿರು ಇಂಜಿನಿಯರ್ ಗಳು ಬೆಂಗಳೂರಿಗೆ ಬರುತ್ತಾರೆ. ಪ್ರತಿ ದಿನ ಸುಮಾರು 5000 ಹೊಸ ಕಾರ್ ಗಳು ರಸ್ತೆಗಿಳಿಯುತ್ತವೆ. ಐಟಿ ಕಂಪನಿಗಳು ನಮಗೆ ಅನುಕೂಲಕರ. ಆದರೆ ಅಷ್ಟೆ ಸಮಸ್ಯೆಗಳೂ ಇವೆ ಎಂದರು. 

ನೆರವು ನೀಡಿ
ವಿಶ್ವದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೆ ಭಾರತದಲ್ಲಿ ಆರ್ಥಿಕತೆ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಕಾರಾತ್ಮಕ ಪ್ರೇರಣೆ ಕಾರಣವಾಗಿದೆ. ನೀವು ಸೂಕ್ತ ದೇಶದಲ್ಲಿದ್ದೀರಿ. ಐಟಿ ಸಂಸ್ಥೆಗಳು ದೇಶವೇ ಹೆಮ್ಮೆ ಪಡುವಂತ ಕೆಲಸಗಳಲ್ಲಿ ತೊಡಗಿರುವುದು ಶ್ಲಾಘನೀಯ. ಸಾಧ್ಯವಾದಷ್ಟು ಅಕ್ಕಪಕ್ಕದವರಿಗೆ ಸಹಾಯ ಮಾಡಿ, ಸಹಾಯ ಮಾಡುವವರ ಜೊತೆ ಸರ್ಕಾರ ಇದೆ‌ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com