ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಸಿ-ಸೆಕ್ಷನ್ ಹೆರಿಗೆಗಳ ಏರಿಕೆ; ತುಮಕೂರಿನಲ್ಲೇ ಅಧಿಕ

ಕರ್ನಾಟಕದ ಗ್ರಾಮೀಣ ಜಿಲ್ಲೆಗಳು 2019 ರಿಂದ ಸಿ-ಸೆಕ್ಷನ್ ಹೆರಿಗೆಗೆ ಒಳಗಾಗುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಮಾಧ್ಯಮಿಕ ಆರೋಗ್ಯ ವ್ಯವಸ್ಥೆಯಲ್ಲಿನ ಸೌಲಭ್ಯಗಳ ಕೊರತೆಯೇ ಕಾರಣವೆಂದು ತಜ್ಞರು ಹೇಳುತ್ತಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಗ್ರಾಮೀಣ ಜಿಲ್ಲೆಗಳು 2019 ರಿಂದ ಸಿ-ಸೆಕ್ಷನ್ ಹೆರಿಗೆಗೆ ಒಳಗಾಗುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಮಾಧ್ಯಮಿಕ ಆರೋಗ್ಯ ವ್ಯವಸ್ಥೆಯಲ್ಲಿನ ಸೌಲಭ್ಯಗಳ ಕೊರತೆಯೇ ಕಾರಣವೆಂದು ತಜ್ಞರು ಹೇಳುತ್ತಾರೆ.

ಕೋಲಾರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಉಡುಪಿ, ಮಂಡ್ಯ, ಹಾಸನ ಮತ್ತು ದಾವಣಗೆರೆಯಂತಹ ಜಿಲ್ಲೆಗಳಲ್ಲಿ ಹೆಚ್ಚಿನ ಮಟ್ಟದ ಸಿಸೇರಿಯನ್ ಹೆರಿಗೆಗಳು ಆಗಿರುವುದನ್ನು ಕರ್ನಾಟಕ ಆರೋಗ್ಯ ವಿವರ 2019-2021 ತೋರಿಸಿದೆ.

ತುಮಕೂರಿನಲ್ಲಿ ಶೇ 52.1 ರಷ್ಟು ಶಿಶುಗಳು ಸಿ-ಸೆಕ್ಷನ್ ಮೂಲಕ ಜನಿಸಲ್ಪಟ್ಟಿದ್ದು, ಇದು ರಾಜ್ಯದಲ್ಲಿಯೇ ಅಧಿಕ ಎಂದು ಅಂಕಿಅಂಶಗಳು ತೋರಿಸುತ್ತವೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ 43.16 ರಷ್ಟಿದ್ದು, ಇದು ಬೆಂಗಳೂರು ನಗರಕ್ಕಿಂತ ಶೇ 13.16 ರಷ್ಟು ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ 2021 ರಲ್ಲಿ ಕುಸಿತದ ನಂತರ ಇದೀಗ ಏರಿಕೆ ಕಂಡಿವೆ.

ತಾಯಿ ಮತ್ತು ಮಕ್ಕಳ ಆರೋಗ್ಯ ಗುಣಮಟ್ಟ ವಿಭಾಗದ ಉಪನಿರ್ದೇಶಕ ಡಾ.ಎನ್‌. ರಾಜ್‌ಕುಮಾರ್‌, ಕರ್ನಾಟಕವು ಸರಾಸರಿ ಶೇ 32 ರಷ್ಟು (ಸಾರ್ವಜನಿಕ ಮತ್ತು ಖಾಸಗಿ) ಸಿ-ಸೆಕ್ಷನ್ ದರವನ್ನು ಹೊಂದಿದೆ ಮತ್ತು ಇತರ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸ್ಥಾನದಲ್ಲಿದೆ. ಹೆಚ್ಚಿನ ಶೇಕಡಾವಾರು ಸಿ-ಸೆಕ್ಷನ್ ಹೆರಿಗೆಗಳಿಗೆ ಪ್ರಮುಖ ಕಾರಣವೆಂದರೆ, ಶಸ್ತ್ರಚಿಕಿತ್ಸೆಯ ಬಗ್ಗೆ ಕಡಿಮೆ ಮಟ್ಟದ ಭಯ ಮತ್ತು ಸಾಮಾನ್ಯ ಹೆರಿಗೆಗೆ ಹೋಲಿಸಿದರೆ, ಶಿಶು ಮತ್ತು ತಾಯಿ ಸಾಯುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5ರ ಪ್ರಕಾರ, ತೆಲಂಗಾಣದಲ್ಲಿ ಶೇ 60.7 ಸಿ-ಸೆಕ್ಷನ್ ಹೆರಿಗೆಗಳು ದಾಖಲಾಗಿದ್ದರೆ, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಶೇ 42.4 ರಷ್ಟು ದಾಖಲಾಗಿವೆ. ಹೆಚ್ಚಿನ ಸಿ-ಸೆಕ್ಷನ್ ದರವು ಹೊರಗಿನ ಪ್ರದೇಶಗಳಲ್ಲಿ ಹೆಚ್ಚಿನ ರೆಫರಲ್‌ಗಳಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ತಾಲೂಕು ಮಟ್ಟದಲ್ಲಿ ತಜ್ಞರು ಲಭ್ಯವಿಲ್ಲದಿದ್ದಾಗ, ಇತರ ವೈದ್ಯರು ಸಿಸೇರಿಯನ್ ಹೆರಿಗೆಗೆ ಮುಂದಾಗುತ್ತಾರೆ. ಈಗಾಗಲೇ ಹೆರಿಗೆ ನೋವಿನಿಂದ ಬಳಲುತ್ತಿರುವ ಮಹಿಳೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರೆ, ಸಾವಿನ ಪ್ರಕರಣಗಳನ್ನು ಕಡಿಮೆ ಮಾಡಲು ಅವರು ಸಿ-ಸೆಕ್ಷನ್ ಹೆರಿಗೆಗೆ ಮುಂದಾಗುತ್ತಾರೆ ಎಂದು ಡಾ. ರಾಜ್‌ಕುಮಾರ್ ಹೇಳಿದರು.

ಬೆಂಗಳೂರಿನ ಸಾರ್ವಜನಿಕ ಆರೋಗ್ಯ ವೈದ್ಯೆ ಮತ್ತು ಸಂಶೋಧಕಿ ಡಾ. ಸಿಲ್ವಿಯಾ ಕರ್ಪಗಂ ಅವರು ದ್ವಿತೀಯ ಆರೋಗ್ಯ ವ್ಯವಸ್ಥೆಯಲ್ಲಿನ ಅಂತರವನ್ನು ಎತ್ತಿ ತೋರಿಸಿದರು. ಗ್ರಾಮೀಣ ಪ್ರದೇಶದ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞರು ಅಥವಾ ಮೂಲ ಸೌಕರ್ಯಗಳ ಅಲಭ್ಯತೆಯು ಜನರು ದೂರದ ಪ್ರಯಾಣಕ್ಕೆ ಕಾರಣವಾಗುತ್ತದೆ. ಹೀಗಾಗಿ ಕುಟುಂಬಗಳು ಸಿ-ಸೆಕ್ಷನ್ ಹೆರಿಗೆ ಮೂಲಕ ತ್ವರಿತವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಯಸುತ್ತಾರೆ.

ಸಿ-ಸೆಕ್ಷನ್ ಹೆರಿಗೆಗೆ ಒಳಗಾಗುವ ಒಳಗಾಗುವ ಬಗ್ಗೆ ಜ್ಞಾನದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com