ಎಚ್ ಡಿ ರೇವಣ್ಣ
ಎಚ್ ಡಿ ರೇವಣ್ಣ

ಹಾಮುಲ್ ಹಾಲು ಮತ್ತು ಅದರ ಉತ್ಪನ್ನಗಳು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು: ಎಚ್‌.ಡಿ.ರೇವಣ್ಣ

ಹಾಸನ ಸಹಕಾರಿ ಮಿಲ್ಕ್ ಯೂನಿಯನ್ ಲಿಮಿಟೆಡ್ [ಹಾಮುಲ್] ನಲ್ಲಿ ತಯಾರಾಗುವ ಹಾಲು ಮತ್ತು ಅದರ ಉತ್ಪನ್ನಗಳನ್ನು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಎಚ್ ಡಿ ರೇವಣ್ಣ ಸೋಮವಾರ ಹೇಳಿದ್ದಾರೆ.

ಹಾಸನ: ಹಾಸನ ಸಹಕಾರಿ ಮಿಲ್ಕ್ ಯೂನಿಯನ್ ಲಿಮಿಟೆಡ್ [ಹಾಮುಲ್] ನಲ್ಲಿ ತಯಾರಾಗುವ ಹಾಲು ಮತ್ತು ಅದರ ಉತ್ಪನ್ನಗಳನ್ನು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಎಚ್ ಡಿ ರೇವಣ್ಣ ಸೋಮವಾರ ಹೇಳಿದ್ದಾರೆ.

ಹಾಸನಗಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿ ರೇವಣ್ಣ ಅವರು, ಯುಎಚ್‌ಟಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಜನವರಿ 2023 ರಿಂದ ವಿದೇಶಕ್ಕೆ ರಫ್ತು ಮಾಡಲಿದೆ. ವಿದೇಶದಲ್ಲಿ ಮಾರುಕಟ್ಟೆಯನ್ನು ಹೆಚ್ಚಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಮಧ್ಯಪ್ರಾಚ್ಯ ದೇಶಗಳೊಂದಿಗೆ ಹಾಮುಲ್ ಎಂಒಯು (ಒಪ್ಪಂದ) ಹೊಂದಿದೆ ಎಂದು ಮಾಹಿತಿ ನೀಡಿದರು.

ಅಂತೆಯೇ MOU ಪ್ರಕಾರ 500 ಕೋಟಿ ಮೌಲ್ಯದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡಲಾತ್ತದೆ. ದಿನಕ್ಕೆ 50 ಸಾವಿರ ಲೀಟರ್ ಹಾಲು ರಫ್ತು ಮಾಡುತ್ತದೆ ಎಂದು ಹೇಳಿದ ರೇವಣ್ಣ ಹಾಮುಲ್ ವಿಮಾ ಯೋಜನೆಗೆ 2.50 ಕೋಟಿ ಮೀಸಲಿಟ್ಟಿದೆ ಮತ್ತು ಹೊಸ ಆರೋಗ್ಯ ಯೋಜನೆಯಿಂದ ಒಂದು ಲಕ್ಷ ಹಾಲು ಉತ್ಪಾದಕರಿಗೆ ಪ್ರಯೋಜನವಾಗಲಿದೆ ಎಂದರು.

ಅಂತೆಯೇ  ಹಾಮುಲ್ 25 ಕೋಟಿ ಲಾಭ ಗಳಿಸಿದ್ದು, ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಖರ್ಚು ಮಾಡಲು ನಿರ್ಧರಿಸಿದೆ. ಹಾಲು ಉತ್ಪಾದಕರ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳನ್ನು ಸನ್ಮಾನಿಸಲು ಹಾಮುಲ್ ನಿರ್ಧರಿಸಿದ್ದು, ಪ್ರತಿ ವಿದ್ಯಾರ್ಥಿಗೆ ಶೀಘ್ರವೇ 6 ಸಾವಿರ ರೂ ಮೌಲ್ಯದ ಸ್ಕಾಲರ್ ಷಿಪ್ ಪಡೆಯಲಿದ್ದಾರೆ ಎಂದು ಅವರು ಹೇಳಿದರು. 

ಇದೇ ವೇಳೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಬೆಂಗಳೂರು ಹಾಲು ಒಕ್ಕೂಟ ನಿಯಮಿತವು 100 ಕೋಟಿ ರೂಪಾಯಿ ನಷ್ಟದ ಹೊರತಾಗಿಯೂ ಖಾಲಿ ಇರುವ 400 ಹುದ್ದೆಗಳಿಗೆ ನೇಮಕಾತಿ ಮಾಡಲು ನಿರ್ಧರಿಸಿದೆ ಎಂದು ಎಚ್‌ಡಿ ರೇವಣ್ಣ ಆರೋಪಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಟ್ಟುನಿಟ್ಟಿನ ನಿರ್ದೇಶನದ ನಡುವೆಯೂ ಕೆಎಂಎಫ್ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದೆ ಎಂದು ಅವರು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com