ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹೌಸ್ ಕೀಪರ್ ಶವಪತ್ತೆ

ರವಿ ಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹೌಸ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಹರಿಯಾಣ ಮೂಲದ 30 ವರ್ಷದ ವ್ಯಕ್ತಿಯೊಬ್ಬರು ಶನಿವಾರ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರವಿ ಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹೌಸ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಹರಿಯಾಣ ಮೂಲದ 30 ವರ್ಷದ ವ್ಯಕ್ತಿಯೊಬ್ಬರು ಶನಿವಾರ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ

ಹರ್ಯಾಣದ ಯಮುನಾ ನಗರದ ನಿವಾಸಿಯಾಗಿರುವ ಅಂಕುಶ್ ಶರ್ಮಾ ಆಶ್ರಮದ ಕೊಠಡಿಯೊಂದರಲ್ಲಿ ವಾಸವಿದ್ದು, ಆಶ್ರಮದ ಸ್ಟೋರ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಶವವಾಗಿ ಪತ್ತೆಯಾಗಿದೆ.

ಕಳೆದ ಕೆಲವು ದಿನಗಳಿಂದ ಆತ ಖಿನ್ನತೆಗೆ ಒಳಗಾಗಿದ್ದರು ಮತ್ತು ಅವರು ನಿರಂತರವಾಗಿ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಕಗ್ಗಲೀಪುರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ 16 ವರ್ಷಗಳಿಂದ ಆಶ್ರಮದ ಗೃಹರಕ್ಷಕ ದಳದ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅತುಲ್ ಪುರುಷೋತ್ತಮ್ ದೂರು ದಾಖಲಿಸಿದ್ದಾರೆ.  ಕಳೆದ ಏಳು ವರ್ಷಗಳಿಂದ  ಅಂಕುಶ್ ಶರ್ಮಾ ಮನೆಗೆಲಸಗಾರನಾಗಿ ಕೆಲಸ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ತನ್ನ ಊರಿಗೆ ಹೋಗಿದ್ದ ಎನ್ನಲಾಗಿದೆ.

ಆತ ಆಶ್ರಮದ ಬೃಂದಾವನ ಕಟ್ಟಡದ ಕೊಠಡಿ ಸಂಖ್ಯೆ 3 ರಲ್ಲಿ ತಂಗಿದ್ದರು.  ಅಜಯ್ ಸಿಂಗ್ ಮತ್ತು ಬಿಜಯ್ ಸಿಂಗ್ ಅವರೊಂದಿಗೆ ಕೊಠಡಿಯನ್ನು ಹಂಚಿಕೊಳ್ಳುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತ ಆಶ್ರಮದಲ್ಲಿ ಬ್ರಿಡ್ಜ್ ಕೋರ್ಸ್‌ಗೆ ಹಾಜರಾಗಲು ಎರಡು ತಿಂಗಳ ರಜೆ ತೆಗೆದುಕೊಂಡಿದ್ದ ಎಂದು ಹೇಳಲಾಗಿದೆ.

ಶುಕ್ರವಾರ ಆತ ಬ್ರಿಡ್ಜ್ ಕೋರ್ಸ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಪುರುಷೋತ್ತಮ್  ಅಂಕುಶ್ ಶರ್ಮಾ ಗೆ ಕರೆ ಮಾಡಿದ್ದಾರೆ. ಕರೆಗಳಿಗೆ ಉತ್ತರಿಸದೆ ಹೋದಾಗ, ಕೊಠಡಿಗೆ ಬಂದು ನೋಡಿದ್ದಾರೆ. ಆದರೆ ಅಲ್ಲಿ ಆತ ಇರಲಿಲ್ಲ,  ಅವರು ಸ್ಟೋರ್ ರೂಂ ಸಂಖ್ಯೆ 4 ರಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದಿರುವುದನ್ನು  ನೋಡಿದ್ದಾರೆ.  ಅಂಕುಶ್ ಶರ್ಮಾ ನೇಣು ಹಾಕಿಕೊಳ್ಳಲು ಬೆಡ್ ಶೀಟ್ ಬಳಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸೋಮವಾರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com