ಹೆಬ್ಬಾಳ ಮೇಲ್ಸೇತುವೆ ನವೀಕರಣ ಕಾಮಗಾರಿ ಪುನಾರಂಭ

ದೀರ್ಘಾವಧಿಯಿಂದ ವಾಹನ ದಟ್ಟಣೆ ಎದುರಿಸುತ್ತಿದ್ದ ಹೆಬ್ಬಾಳ ಮೇಲ್ಸೇತುವೆಯ ನವೀಕರಣ ಕಾಮಗಾರಿ ಪುನಾರಂಭಗೊಳ್ಳುತ್ತಿದೆ.
ಹೆಬ್ಬಾಳ ಮೇಲ್ಸೇತುವೆ
ಹೆಬ್ಬಾಳ ಮೇಲ್ಸೇತುವೆ

ಬೆಂಗಳೂರು: ದೀರ್ಘಾವಧಿಯಿಂದ ವಾಹನ ದಟ್ಟಣೆ ಎದುರಿಸುತ್ತಿದ್ದ ಹೆಬ್ಬಾಳ ಮೇಲ್ಸೇತುವೆಯ ನವೀಕರಣ ಕಾಮಗಾರಿ ಪುನಾರಂಭಗೊಳ್ಳುತ್ತಿದೆ.

ಈ ಕಾಮಗಾರಿ 2019 ರ ಏಪ್ರಿಲ್ ನಿಂದ ನೆನೆಗುದಿಗೆ ಬಿದ್ದಿತ್ತು.  ಬಿಎಂಆರ್ ಸಿಎಲ್, ಫ್ಲೈಓಬರ್ ನ ಮೊದಲ ಹಂತದ ಮೂಲಸೌಕರ್ಯದ ಕಾಮಗಾರಿಗಳನ್ನು ನಡೆಸುವ ತನ್ನ ಮೂಲ ಯೋಜನೆಗೆ ಒಪ್ಪಿಗೆ ನೀಡಿದ್ದು, ಬಿಡಿಎಗೂ ಗ್ರೀನ್ ಸಿಗ್ನಲ್ ನೀಡಿದೆ. 

ಎರಡನೇ ಹಂತದಲ್ಲಿ ನಿರ್ಮಾಣ ಮಾಡುವ ಯೋಜನೆಯನ್ನು ಮೆಟ್ರೋ ಕೈಬಿಟ್ಟಿದೆ. 

ಬಿಡಿಎ ಹಿರಿಯ ಅಧಿಕಾರಿಯ ಪ್ರಕಾರ, ಅಂಡರ್ ಪಾಸ್ ಹೊರತಾಗಿ ಮೊದಲ ಹಂತದಲ್ಲಿ ವಿಮಾನ ನಿಲ್ದಾಣದಿಂದ ನಗರದೆಡೆಗೆ ಬರುವ ಮಾರ್ಗದಲ್ಲಿ ಎರಡು ಲೇನ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ. 

ವಿಮಾನ ನಿಲ್ದಾಣದಿಂದ ಬರುವವರಿಗೆ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಎದುರಾಗುತ್ತದೆ. ಈ ಯೋಜನೆಯಿಂದಾಗಿ, ದೊಡ್ಡಬಳ್ಳಾಪುರ, ಯಲಹಂಕ, ಜಕ್ಕೂರು, ಗೌರಿಬಿದನೂರು, ಸಹಕಾರ ನಗರ, ಕಾಫಿ ಬೋರ್ಡ್ ಲೇಔಟ್, ಸುತ್ತಮುತ್ತಲ ಪ್ರದೇಶಗಳವರಿಗೆ ಇದರಿಂದ ಉಪಯೋಗವಾಗಲಿದೆ ಎಂದು ಹಿರಿಯ ಬಿಡಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಮೇಲ್ಸೇತುವೆ ಮೇಲೆ ಎರಡು ಪ್ರತ್ಯೇಕ ಮೇಟ್ರೋ ಲೈನ್ ಗಳು ಬರಲಿವೆ ಆದ್ದರಿಂದ ಹೊಸ ರಚನೆಗಳಿಂದ ಸಮಸ್ಯೆಯಾಗಲಿದೆ ಎಂಬ ಕಾರಣಕ್ಕೆ ಬಿಎಂಆರ್ ಸಿಲ್ ಬಿಡಿಎ ಈ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳದಂತೆ ತಡೆದಿತ್ತು.

ರಾಜ್ಯದ ಉನ್ನತ ಅಧಿಕಾರ ಸಮಿತಿ (ಏ.28 ಹಾಗೂ ಸೆಪ್ಟೆಂಬರ್ 12) ರಂದು ಎರಡು ಪ್ರತ್ಯೇಕ ಸಭೆಗಳನ್ನು ನಡೆಸಿ, ವಿಷಯ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿತ್ತು. 

ಈಗ ಬಿಎಂಆರ್ ಸಿಎಲ್ ಮೇಲ್ಸೇತುವೆ ನವೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಪತ್ರದ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.

ಮೇಲ್ಸೇತುವೆ ನವೀಕರಣಕ್ಕೆ ಪಿಜೆಬಿ ನಿರ್ಮಾಣ ಸಂಸ್ಥೆಗೆ ಗುತ್ತಿಗೆಯನ್ನು ನೀಡಲಾಗಿದ್ದು, 80 ಕೋಟಿ ರೂಪಾಯಿ ಮೌಲ್ಯದ ಯೋಜನೆಯಾಗಿದೆ, ಬಿಡಿಎ ಈಗಾಗಲೇ 25 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com