
ದಾವಣಗೆರೆ: ದಾವಣೆಗೆರೆಯಲ್ಲಿ ಹಾಡುಗಲೇ ಯುವತಿಗೆ ಮನಬಂದಂತೆ ಚುಚ್ಚಿ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ದಾವಣಗೆರೆ ನಗರದ ಬಿಜೆ ಬಡಾವಣೆಯಲ್ಲಿ ಬುರ್ಖಾ ಧರಿಸಿ ಕೆಲಸಕ್ಕೆ ತೆರಳುತ್ತಿದ್ದ ಮುಸ್ಲಿಂ ಯುವತಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ ವ್ಯಕ್ತಿಯೋರ್ವ ಆಕೆಗೆ ಮನಬಂದಂತೆ ಚಾಕುವಿನಿಂದ ಚುಚ್ಚಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಯುವತಿ ಕೂಗಾಡಿದ್ದಾಳೆ. ಇದನ್ನು ಲೆಕ್ಕಿಸದೆ ಪಾಗಲ್ ಪ್ರೇಮಿ ಆಕೆ ಸಾಯುವವರೆಗೂ ಹಲ್ಲೆ ನಡೆಸಿದ್ದಾನೆ.
ಮೃತ ಯುವತಿ ವಿನೋಭ ನಗರದ ನಿವಾಸಿ 28 ವರ್ಷದ ಚಾಂದ್ ಸುಲ್ತಾನಾ ಎಂದು ಗುರುತಿಸಲಾಗಿದೆ. ಎಂಕಾಂ ಮುಗಿಸಿದ್ದ ಆಕೆ ಮಹ್ಮದ್ ಬಾಷಾ ಎಂಬುವರ ಬಳಿ ಸಿಎ ಗಾಗಿ ತರಬೇತಿ ಪಡೆಯುತ್ತಿದ್ದಳು. ಅಲ್ಲದೆ ಇತ್ತೀಚೆಗಷ್ಟೆ ಆಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದರಿಂದ ಕೆರಳಿದ ಪಾಗಲ್ ಪ್ರೇಮಿ ಚಾಂದ್ ಫೀರ್ ಆಕೆಯನ್ನು ನಡು ರಸ್ತೆಯಲ್ಲೇ ಕೊಂದು ಹಾಕಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಂತರ ಚಾಂದ್ ಫೀರ್ ವಿಷ ಸೇವಿಸಿದ್ದು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement