ಕೋವಿಡ್-19: BF.7 ರೂಪಾಂತರಿ ಭಾರತಕ್ಕೆ ಆತಂಕಕಾರಿಯಲ್ಲ: ತಜ್ಞ ವಿಜ್ಞಾನಿ ರಾಕೇಶ್ ಮಿಶ್ರಾ
ಬೆಂಗಳೂರು: ಕೊರೊನಾವೈರಸ್‌ನ BF.7 ರೂಪಾಂತರಿ ಓಮಿಕ್ರಾನ್ ಉಪ ರೂಪಾಂತರಿಯಾಗಿದ್ದು, ಜನರ ಮೇಲಿನ ಅದರ ತೀವ್ರತೆ ಬಗ್ಗೆ ಭಾರತವು ಹೆಚ್ಚು ಚಿಂತಿಸಬೇಕಾಗಿಲ್ಲ ಎಂದು ದೇಶದ ಖ್ಯಾತ ವಿಜ್ಞಾನಿಗಳು ಶುಕ್ರವಾರ ಹೇಳಿದ್ದಾರೆ.
ಫೇಸ್ ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಜನಸಂದಣಿಯನ್ನು ತಪ್ಪಿಸುವುದು ಯಾವಾಗಲೂ ಸೂಕ್ತ ಎಂದು ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ (ಟಿಐಜಿಎಸ್) ನಿರ್ದೇಶಕ ರಾಕೇಶ್ ಮಿಶ್ರಾ ಎಚ್ಚರಿಸಿದ್ದಾರೆ.ನೆರೆಯ ದೇಶ ಚೀನಾ ಭಾರತ ಎದುರಿಸಿದ ಸೋಂಕಿನ ವಿವಿಧ ಅಲೆಗಳನ್ನು ಎದುರಿಸದ ಕಾರಣ ಇದೀಗ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದು ಓಮಿಕ್ರಾನ್ ನ ಉಪ-ರೂಪವಾಗಿದೆ. ಕೆಲವು ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿ ಮುಖ್ಯ ವೈಶಿಷ್ಟ್ಯಗಳು ಓಮಿಕ್ರಾನ್ ನಂತೆ ಇರುತ್ತದೆ, ಯಾವುದೇ ದೊಡ್ಡ ವ್ಯತ್ಯಾಸವಿಲ್ಲ. ನಮ್ಮಲ್ಲಿ ಹೆಚ್ಚಿನವರು ಓಮಿಕ್ರಾನ್ ಅಲೆ ನೋಡಿದ್ದೇವೆ. ಆದ್ದರಿಂದ, ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಹೆಚ್ಚು ಕಡಿಮೆ ಇದೇ ಆ ವೈರಸ್ ಎನ್ನುತ್ತಾರೆ.
ಚೀನಾ ತನ್ನ ಶೂನ್ಯ ಕೋವಿಡ್ ನೀತಿ ಯಿಂದ ಸೋಂಕುಗಳ ಉಲ್ಬಣವನ್ನು ಅನುಭವಿಸುತ್ತಿದೆ. ಚೀನಾದ ಜನರು ನೈಸರ್ಗಿಕ ಸೋಂಕಿಗೆ ಒಳಗಾಗಿರಲಿಲ್ಲ ಅಲ್ಲದೇ ವಯಸ್ಸಾದ ಜನರಿಗೆ ಲಸಿಕೆ ಹಾಕಲು ಸಮಯವನ್ನು ಬಳಸಲಿಲ್ಲ. ಲಸಿಕೆ ಹಾಕದ ಕಾರಣ, ಅವರ ರೋಗಲಕ್ಷಣಗಳು ತೀವ್ರವಾಗಿವೆ. ಕಿರಿಯರಿಗೆ ಇನ್ನೂ ಯಾವುದೇ ಸಮಸ್ಯೆ ಇಲ್ಲ. ಆದರೆ ಲಸಿಕೆ ಹಾಕದ ವಯಸ್ಸಾದವರಲ್ಲಿ ಇದು ಬಹಳ ವೇಗವಾಗಿ ಹರಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ