ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶೃತಿ; ಕೊನೆಗೂ ಸಿಕ್ತು ವೃದ್ಧ ದಂಪತಿಗೆ ಪರ್ಯಾಯ ಭೂಮಿ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು  2 ವರ್ಷದ ನಂತರ  ವೃದ್ಧ ದಂಪತಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಸ್ತಾಂತರಿಸಿದ 4,150 ಚದರ ಅಡಿ ಭೂಮಿಗೆ ಬದಲಾಗಿ  ಪರ್ಯಾಯ ಭೂಮಿಯನ್ನು ಇತ್ತೀಚೆಗೆ ಅವರ ಹೆಸರಿಗೆ ನೋಂದಾಯಿಸಿದೆ.
ಚಿಕ್ಕ ಬೆಟ್ಟಯ್ಯ ದಂಪತಿ
ಚಿಕ್ಕ ಬೆಟ್ಟಯ್ಯ ದಂಪತಿ
Updated on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು  2 ವರ್ಷದ ನಂತರ  ವೃದ್ಧ ದಂಪತಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಸ್ತಾಂತರಿಸಿದ 4,150 ಚದರ ಅಡಿ ಭೂಮಿಗೆ ಬದಲಾಗಿ  ಪರ್ಯಾಯ ಭೂಮಿಯನ್ನು ಇತ್ತೀಚೆಗೆ ಅವರ ಹೆಸರಿಗೆ ನೋಂದಾಯಿಸಿದೆ.

ನವೆಂಬರ್ 3 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನ್ಯಾಯಕ್ಕಾಗಿ ಒತ್ತಾಯಿಸಿ ಹಿರಿಯ ನಾಗರಿಕ ದಂಪತಿಗಳು ನಾಗರಿಕ ಸಂಸ್ಥೆ ನಿರ್ಮಿಸಿರುವ ವಿಸ್ತಾರವಾದ ನಾಡಪ್ರಭು ಕೆಂಪೇಗೌಡ ಲೇಔಟ್ ಮೂಲಕ ಹಾದುಹೋಗುವ ಮೇಜರ್ ಆರ್ಟಿರಿಯಲ್ ರಸ್ತೆಗೆ (ಎಂಎಆರ್) 100 ಮೀಟರ್‌ಗೂ ಹೆಚ್ಚು ಉದ್ದ ಬೇಲಿ ಹಾಕಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.

ಲೇಔಟ್‌ಗಾಗಿ ನಾವು ನಮ್ಮ 14 ಗುಂಟೆ ಭೂಮಿಯನ್ನು ಹಂಚಿಕೊಂಡಿದ್ದೇವೆ. ನಮ್ಮ ಪೂರ್ವಜರು ರೈತರಾಗಿದ್ದು, ಕಳೆದ 60 ವರ್ಷಗಳಿಂದ ಈ ಭೂಮಿ ನಮ್ಮ ಕುಟುಂಬದ ಒಡೆತನದಲ್ಲಿದೆ. ಈ ಭೂಮಿಗೆ ಬದಲಾಗಿ ನಮಗೆ 4,150 ಚದರ ಅಡಿ ಅಭಿವೃದ್ಧಿ ಪಡಿಸಿದ ಭೂಮಿಯನ್ನು ನೀಡಲಾಗಿದೆ. ಪರಿಹಾರದ ಮೊತ್ತವನ್ನು ನಮಗೆ ಹಸ್ತಾಂತರಿಸಲಾಗಿದೆ. ಆದರೆ, ಭೂಮಿಯನ್ನು ಇನ್ನೂ ನಮ್ಮ ಹೆಸರಿಗೆ ನೋಂದಾಯಿಸಿಲ್ಲ ಎಂದು  ಎಡಗಾಲು ಮತ್ತು ಎಡಗೈ ಪಾರ್ಶ್ವವಾಯುವಿಗೆ ಒಳಗಾಗಿರುವ ಚಿಕ್ಕ ಬೆಟ್ಟಯ್ಯ (75)ಅ ದೂರಿದ್ದರು.

TNIE  ವರದಿಯನ್ನು ಅನುಸರಿಸಿ ಸರ್ಕಾರ ಮತ್ತು ಬಿಡಿಎ ಉನ್ನತ ಅಧಿಕಾರಿಗಳು  ವೃದ್ಧ ದಂಪತಿಗೆ ಶೀಘ್ರದಲ್ಲಿಯೇ ನೋಂದಾಯಿಸಲಾಗುವುದು ಎಂದು ಭರವಸೆ ನೀಡಿದ್ದರು, ತಮ್ಮ ಕಷ್ಟವನ್ನು ಎತ್ತಿ ತೋರಿಸಿ ನ್ಯಾಯ ಒದಗಿಸಿದ ಟಿಎನ್‌ಐಇಗೆ ಬೆಟ್ಟಯ್ಯ ಮತ್ತು ಅವರ ಪತ್ನಿಲಕ್ಷ್ಮಿ ನರಸಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com