ಬೆಂಗಳೂರು: ಸಾದಹಳ್ಳಿ ಜಂಕ್ಷನ್ ಓವರ್ ಪಾಸ್ ಅಂತಿಮಗೊಳಿಸಿದ ಎನ್ ಹೆಚ್ಎಐ, ಏರ್ ಪೋರ್ಟ್ ಮೇಟ್ರೋ ಮಾರ್ಗದ ಮೇಲೆ ಪರಿಣಾಮ ಇಲ್ಲ 

ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಾದಹಳ್ಳಿ ಜಂಕ್ಷನ್ ನಲ್ಲಿ ಕೆಳಸೇತುವೆ ನಿರ್ಮಿಸುವ ಯೋಜನೆಯನ್ನು ಬದಲಾವಣೆ ಮಾಡಲಾಗಿದ್ದು, ಎನ್ ಹೆಚ್ಎಐ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಅಂತಿಮಗೊಳಿಸಿದೆ. 
ಮೇಲ್ಸೇತುವೆ ನಿರ್ಮಾಣವಾಗಲಿರುವ ಪ್ರದೇಶ
ಮೇಲ್ಸೇತುವೆ ನಿರ್ಮಾಣವಾಗಲಿರುವ ಪ್ರದೇಶ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಾದಹಳ್ಳಿ ಜಂಕ್ಷನ್ ನಲ್ಲಿ ಕೆಳಸೇತುವೆ ನಿರ್ಮಿಸುವ ಯೋಜನೆಯನ್ನು ಬದಲಾವಣೆ ಮಾಡಲಾಗಿದ್ದು, ಎನ್ ಹೆಚ್ಎಐ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಅಂತಿಮಗೊಳಿಸಿದೆ.
 
ಕೆಐಎಯಿಂದ 7 ಕಿ.ಮೀ ದೂರದಲ್ಲಿರುವ ಸಾದಹಳ್ಳಿ ಜಂಕ್ಷನ್ ನಲ್ಲಿ ಈ ಮೇಲ್ಸೇತುವೆ ನಿರ್ಮಾಣವಾಗುವುದರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸುವ ಮಂದಿಗೆ ವಾಹನ ದಟ್ಟಣೆಯಿಂದ ರಿಲೀಫ್ ದೊರೆಯಲಿದೆ.
 
ಕೆಳಸೇತುವೆ ನಿರ್ಮಾಣಕ್ಕೆ 38 ಕೋಟಿ ರೂಪಾಯಿ ಖರ್ಚಾಗುತ್ತಿತ್ತು. ನಮ್ಮ ಹೊಸ ಯೋಜನೆಗೆ ಬಿಎಂಆರ್ ಸಿಎಲ್ ಸಹ ಒಪ್ಪಿಗೆ ಸೂಚಿಸಿದೆ ಹಾಗೂ 2-3 ತಿಂಗಳಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ. ಇಂತಹ ಯೋಜನೆಗಳು ಪೂರ್ಣಗೊಳ್ಲುವುದಕ್ಕೆ 2 ವರ್ಷಗಳಾದರೂ ಬೇಕು ಆದರೆ ನಾವು ಡಿಸೆಂಬರ್ 2024 ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಎನ್ ಹೆಚ್ಎಐ ಹೇಳಿದೆ.

ಯೋಜನೆಗೆ ಹೊಸ ಟೆಂಡರ್ ಗಳನ್ನು ಕರೆಯುವ ಅಗತ್ಯವಿಲ್ಲ ಹಾಗೂ ಈ ಹಿಂದಿನಂತೆ ಅಂಥಾಂಗ್ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ ಕಾಮಗಾರಿಯನ್ನು ಪ್ರಾರಂಭಿಸಲಿದೆ.
 
ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಓವರ್ ಪಾಸ್ 500 ಮೀಟರ್ ಗಳಷ್ಟು ಉದ್ದ ಇರಲಿದೆ. ವಾಹನ ಸಂಚಾರವನ್ನು ಸುಗಮಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com