ಬಿಂದಿಗೆಗಳ ಎಸೆಯುತ್ತಿರುವ ಜೆಡಿಎಸ್ ಮುಖಂಡರು.
ರಾಜ್ಯ
ಜೆಡಿಎಸ್ ಪಂಚರತ್ನ ರಥಯಾತ್ರೆ: ಕೆ.ಆರ್.ಪೇಟೆಯಲ್ಲಿ ಸ್ಟೀಲ್ ಬಿಂದಿಗೆಗಾಗಿ ಮುಗಿಬಿದ್ದ ಮಹಿಳೆಯರು!
ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಸ್ಟೀಲ್ ಬಿಂದಿಗಾಗಿ ಮಹಿಳೆಯರು ಮುಗಿಬಿದ್ದ ಘಟನೆ ಕೆ.ಆರ್. ಪೇಟೆಯಲ್ಲಿ ಕಂಡು ಬಂದಿತು.
ಮಂಡ್ಯ: ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಸ್ಟೀಲ್ ಬಿಂದಿಗಾಗಿ ಮಹಿಳೆಯರು ಮುಗಿಬಿದ್ದ ಘಟನೆ ಕೆ.ಆರ್. ಪೇಟೆಯಲ್ಲಿ ಕಂಡು ಬಂದಿತು.
ಟ್ರ್ಯಾಕ್ಟರ್ನಲ್ಲಿ ಹೊಸ ಸ್ಟೀಲ್ ಬಿಂದಿಗೆಗಳನ್ನು ತುಂಬಿಕೊಂಡು ಬಂದ ಜೆಡಿಎಸ್ ಮುಖಂಡರು, ಮಹಿಳೆಯರಿಗೆ ಹಂಚಲು ಮುಂದಾಗಿದ್ದಾರೆ. ಈ ವೇಳೆ ನಾ ಮುಂದು, ತಾ ಮುಂದು ಎಂಬಂತೆ ಮಹಿಳೆಯರು ಮುಗಿಬಿದ್ದಿರುವುದು ಕಂಡು ಬಂದಿದೆ.
ಹೆಚ್ಚೆಚ್ಚು ಜನರು ಆಗಮಿಸಿದ ಹಿನ್ನೆಲೆಯಲ್ಲಿ ಒಂದೊಂದೇ ವಿತರಿಸಲು ಸಾಧ್ಯವಾಗದೇ ಮಹಿಳೆಯರತ್ತ ಬಿಂದಿಗೆಗಳನ್ನು ಎಸೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ ಜೆಡಿಎಸ್ ನಾಯಕರು ಮತ್ತು ಮುಖಂಡರ ವಿರುದ್ಧ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ