ಹಾಸನ: ಮಹಿಳೆಗೆ ಸ್ಫೋಟಕದೊಂದಿಗೆ ಪಾರ್ಸೆಲ್ ಕಳುಹಿಸಿದ ದುಷ್ಕರ್ಮಿ ಬಂಧನ

ಇತ್ತೀಚಿಗೆ ಹಾಸನದಲ್ಲಿ ಸಂಭವಿಸಿದ್ದ ಮಿಕ್ಸರ್ ಸ್ಫೋಟ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಧವೆ ವಸಂತಾಳ ಹತ್ಯೆಗೆ ಸ್ಫೋಟಕವಿದ್ದ ಮಿಕ್ಸರ್ ನ್ನು ಕೊರಿಯರ್ ಮೂಲಕ ಕಳುಹಿಸಿದ ಬೆಂಗಳೂರಿನ ಅನೂಪ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಬುಧವಾರ ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಸ್ಥಳದ ಚಿತ್ರ
ಸ್ಫೋಟ ಸಂಭವಿಸಿದ ಸ್ಥಳದ ಚಿತ್ರ

ಹಾಸನ: ಇತ್ತೀಚಿಗೆ ಹಾಸನದಲ್ಲಿ ಸಂಭವಿಸಿದ್ದ ಮಿಕ್ಸರ್ ಸ್ಫೋಟ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಧವೆ ವಸಂತಾಳ ಹತ್ಯೆಗೆ ಸ್ಫೋಟಕವಿದ್ದ ಮಿಕ್ಸರ್ ನ್ನು ಕೊರಿಯರ್ ಮೂಲಕ ಕಳುಹಿಸಿದ ಬೆಂಗಳೂರಿನ ಅನೂಪ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಬುಧವಾರ ತಿಳಿಸಿದ್ದಾರೆ.

ಮಿಕ್ಸರ್ ಪರೀಕ್ಷಿಸುವಾಗ ಸ್ಫೋಟಗೊಂಡು ಕೋರಿಯರ್ ಕೇಂದ್ರದ ಮಾಲೀಕ ಶಶಿಕುಮಾರ್ ಗಾಯಗೊಂಡಿದ್ದರು. ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ವಾಸವಿರುವ ಅನೂಪ್ ಕುಮಾರ್ ನನ್ನು ಮದುವೆಯಾಗಲು ವಸಂತಾ ತಿರಸ್ಕರಿಸಿದಾಗ ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ. ವಿಚಾರಣೆ ವೇಳೆ ಇದನ್ನು ಆತ ಒಪ್ಪಿಕೊಂಡಿದ್ದಾನೆ ಎಂದರು. ಆಕೆಯ ಮ್ಯಾಟ್ರಿಮೋನಿಯರ್ ಪ್ರಸ್ತಾಪದಿಂದ ಆಕರ್ಷಿತ ನಾಗಿದ್ದ ಅನೂಪ್, ಆರು ತಿಂಗಳ ಹಿಂದೆ  ಬೈಯಪ್ಪನಹಳ್ಳಿ ಬಳಿ ಭೇಟಿಯಾಗಿದ್ದು, ತನ್ನ ಮದುವೆ ಪ್ರಪೋಸಲ್ ತಿರಸ್ಕರಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಎಸ್ಪಿ ತಿಳಿಸಿದರು. 

ಸ್ಫೋಟಕ ವಸ್ತುಗಳ ಬಳಕೆಯನ್ನು ಸ್ಫೋಟಕ ಕಾಯ್ದೆಯಡಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು,  ಅವುಗಳನ್ನು ಪೂರೈಸಿದ ಮತ್ತು ಮಿಕ್ಸರ್‌ಗೆ ಅಳವಡಿಸಿದ ವ್ಯಕ್ತಿ ಅಥವಾ ಏಜೆಂಟ್‌ಗಾಗಿ ಹುಡುಕಾಟ ನಡೆಯುತ್ತಿದೆ. ಮಿಕ್ಸರ್ ಮಾರ್ಪಡಿಸಿದ ವ್ಯಕ್ತಿ ಮತ್ತು ಪಾರ್ಸೆಲ್ ಬುಕ್ ಮಾಡಿದ ವ್ಯಕ್ತಿಗೂ ಸಹ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಅನೂಪ್ ಕುಮಾರ್ ಜೊತೆ ಮೂವರು ಕೈಜೋಡಿಸಿ ಈ ಹಿಂದೆ ಹಾಸನಕ್ಕೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯಿಂದ ಸ್ಫೋಟಕ ಮತ್ತು ನಕಲಿ ಚಿನ್ನ ಮತ್ತು ನಕಲಿ ಕರೆನ್ಸಿಗಳ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com