ಗಡಿಯಲ್ಲಿ ಐಟಿಬಿಪಿ ಯೋಧರಿದ್ದರೆ ನಮ್ಮ ಒಂದು ಇಂಚು ಭೂಮಿಯನ್ನು ಅತಿಕ್ರಮಿಸಲು ಸಾಧ್ಯವಿಲ್ಲ: ಅಮಿತ್ ಶಾ

ಇಂಡೋ-ಟಿಬೆಟ್ ಗಡಿ ಪೊಲೀಸರನ್ನು(ಐಟಿಬಿಪಿ) ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರನ್ನು 'ಹಿಮವೀರ್' (ಹಿಮ ಧೈರ್ಯಶಾಲಿಗಳು) ಎಂದು ಕರೆದಿದ್ದಾರೆ ಮತ್ತು ಅವರು ಗಡಿಯಲ್ಲಿದ್ದಾಗ ನಮ್ಮ ಒಂದು ಇಂಚು ಭೂಮಿಯನ್ನು...
ಅಮಿತ್ ಶಾ
ಅಮಿತ್ ಶಾ

ಬೆಂಗಳೂರು: ಇಂಡೋ-ಟಿಬೆಟ್ ಗಡಿ ಪೊಲೀಸರನ್ನು(ಐಟಿಬಿಪಿ) ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರನ್ನು 'ಹಿಮವೀರ್' (ಹಿಮ ಧೈರ್ಯಶಾಲಿಗಳು) ಎಂದು ಕರೆದಿದ್ದಾರೆ ಮತ್ತು ಅವರು ಗಡಿಯಲ್ಲಿದ್ದಾಗ ನಮ್ಮ ಒಂದು ಇಂಚು ಭೂಮಿಯನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಶನಿವಾರ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಐಟಿಬಿಪಿಯ ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಶಾ, ITBP ಸಿಬ್ಬಂದಿ ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಗಡಿಯನ್ನು ಕಾಪಾಡುತ್ತಾರೆ ಮತ್ತು ಅವರಿಗೆ 'ಹಿಮವೀರ್' ಎಂಬ ಬಿರುದು ಪದ್ಮಶ್ರೀ ಮತ್ತು ಪದ್ಮವಿಭೂಷಣಕ್ಕಿಂತ ದೊಡ್ಡದಾಗಿದೆ ಎಂದು ಹೇಳಿದರು.

"ಮೈನಸ್ 42 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಅವರು ನಮ್ಮ ಗಡಿಯನ್ನು ಹೇಗೆ ಕಾಪಾಡುತ್ತಾರೆಂದು ನಾವು ಊಹಿಸಲೂ ಸಾಧ್ಯವಿಲ್ಲ. ಇದು ಬಲವಾದ ಇಚ್ಛಾಶಕ್ತಿ ಮತ್ತು ಅತ್ಯುನ್ನತ ಮಟ್ಟದ ದೇಶಭಕ್ತಿಯಿಂದ ಮಾತ್ರ ಸಾಧ್ಯ ಎಂದರು. 

ಅರುಣಾಚಲ ಪ್ರದೇಶ, ಲಡಾಖ್ ಅಥವಾ ಜಮ್ಮು ಮತ್ತು ಕಾಶ್ಮೀರದ ವ್ಯತಿರಿಕ್ತ ಭೌಗೋಳಿಕ ಪರಿಸ್ಥಿತಿಗಳಲ್ಲಿ ITBP ಕಾರ್ಯನಿರ್ವಹಿಸುತ್ತದೆ. ಭಾರತದ ಜನ ITBP ಸೈನಿಕರನ್ನು 'ಹಿಮವೀರ್' ಎಂದು ಕರೆಯುತ್ತಾರೆ. ಈ ಪ್ರಶಸ್ತಿಯು ಪದ್ಮಶ್ರೀ ಮತ್ತು ಪದ್ಮವಿಭೂಷಣ ನಾಗರಿಕ ಪ್ರಶಸ್ತಿಗಳಿಗಿಂತ ದೊಡ್ಡದಾಗಿದೆ. ನಾಗರಿಕ ಪ್ರಶಸ್ತಿಗಳು ಸರ್ಕಾರಿ ಬಿರುದು ಆಗಿದ್ದರೆ, 'ಹಿಮವೀರ್' ಎಂಬುದು ಭಾರತದ ಜನರು ನೀಡಿದ ಬಿರುದು" ಎಂದು ಶಾ ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com