120 ದಿನಗಳಲ್ಲಿ 3 ಸಾವಿರ ಕಿ.ಮೀ: ನಡಿಗೆ ಮೂಲಕ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಗೆ ಅಭಿಮಾನಿಯ ಗೌರವ!

ಕಳೆದ ವರ್ಷ ಅಂದರೆ 2021ರ ಅಕ್ಟೋಬರ್ 29ರಂದು ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನರಾದಾಗ ಇಡೀ ಚಿತ್ರರಂಗ ಆಘಾತಕ್ಕೀಡಾಗಿತ್ತು. ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಗಲುವಿಕೆಯ ದುಃಖದಿಂದ ಹೊರಬರಲು ಹಲವು ತಿಂಗಳುಗಳೇ ಬೇಕಾಯಿತು. 
ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ಅಭಿಮಾನಿ ರವಿ ಕುಮಾರ್ ಒತ್ತಾಸೆ
ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ಅಭಿಮಾನಿ ರವಿ ಕುಮಾರ್ ಒತ್ತಾಸೆ
Updated on

ಕಳೆದ ವರ್ಷ ಅಂದರೆ 2021ರ ಅಕ್ಟೋಬರ್ 29ರಂದು ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneet Rajkumar) ಅಕಾಲಿಕ ನಿಧನರಾದಾಗ ಇಡೀ ಚಿತ್ರರಂಗ ಆಘಾತಕ್ಕೀಡಾಗಿತ್ತು. ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಗಲುವಿಕೆಯ ದುಃಖದಿಂದ ಹೊರಬರಲು ಹಲವು ತಿಂಗಳುಗಳೇ ಬೇಕಾಯಿತು. 

ಪುನೀತ್ ರಾಜ್ ಕುಮಾರ್ ಅವರ ಹಲವು ಅಭಿಮಾನಿಗಳಲ್ಲಿ ರವಿ ಕುಮಾರ್ ಕೂಡ ಒಬ್ಬರು. ಪುನೀತ್ ನಿಧನ ನಂತರ ಅವರ ಅಭಿಮಾನಿಗಳು ಹಲವು ರೀತಿಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ರವಿ ಕುಮಾರ್ ಅವರು ನಡಿಗೆಯ ಮೂಲಕ ತಮ್ಮ ಆರಾಧ್ಯ ದೈವದಂತೆ ಕಾಣುವ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ರವಿ ಕುಮಾರ್ ಅವರು ಸಾಮಾನ್ಯ ವ್ಯಕ್ತಿಯಲ್ಲ. ಈ 56ರ ವಯಸ್ಸಿನಲ್ಲಿ ಹಲವು ದಾಖಲೆಗಳನ್ನು ಹೊಂದಿದ್ದಾರೆ. ತಮ್ಮ 54ನೇ ವಯಸ್ಸಿನಲ್ಲಿ 24 ಗಂಟೆಗಳಲ್ಲಿ 1 ಲಕ್ಷ ಹೆಜ್ಜೆಗಳನ್ನು ನಡೆದು ದಾಖಲೆ ನಿರ್ಮಿಸಿದ್ದರು. ಸಿಆರ್ ಪಿಎಫ್ ನ ನಿವೃತ್ತ ಇನ್ಸ್ ಪೆಕ್ಟರ್ ಆಗಿರುವ ಹೈದರಾಬಾದ್ ಮೂಲದ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಪ್ರತಿದಿನ ಬೆಳಗ್ಗೆ 5.30ಕ್ಕೆ ನಡಿಗೆ ಆರಂಭಿಸಿದರು. ಕಳೆದ ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ನಡಿಗೆಯನ್ನು ಆರಂಭಿಸಿ ಅಲ್ಲಿಂದ ಇಲ್ಲಿಯವರೆಗೆ 3 ಸಾವಿರ ಕಿಲೋ ಮೀಟರ್ ನಡಿಗೆ ಕೈಗೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ಏಕೆ ಇಷ್ಟ ಎಂದು ಕೇಳಿದಾಗ ಪುನೀತ್ ಅವರ ಡ್ಯಾನ್ಸ್ ಕೌಶಲ್ಯದಿಂದ ನನಗೆ ಆ ನಟನ ಮೇಲೆ ಪ್ರೀತಿ ಹುಟ್ಟಿತು. ಗುಣದಲ್ಲಿ ನಿಜಕ್ಕೂ ಅಪರಂಜಿ. ಅವರ ಬಗ್ಗೆ ತಿಳಿಯುತ್ತಾ ಹೋದಂತೆ ಅವರು ಮದರ್ ತೆರೆಸಾ ಅವರಂತೆ ಎಂದು ಗೊತ್ತಾಯಿತು ಎನ್ನುತ್ತಾರೆ.

ಪುನೀತ್ ಅವರ ಮೇಲಿನ ಗೌರವದಿಂದ ದಕ್ಷಿಣ ಭಾರತದಾದ್ಯಂತ ಬರಿಗಾಲಿನಲ್ಲಿ ನಡೆದುಕೊಂಡು ಹೋಗಬೇಕೆಂದು ಆರಂಭದಲ್ಲಿ ಬಯಸಿದ್ದರು. ಆದರೆ ಜನವರಿಯಲ್ಲಿ ಓಮಿಕ್ರಾನ್ ಕೊರೋನಾ ರೂಪಾಂತರಿಯಿಂದ ನಿರ್ಬಂಧ ವಿಧಿಸಿದ್ದರಿಂದ ಅವರ ಯೋಜನೆ ನಿಂತುಹೋಯಿತು. ಕೊನೆಗೆ ಪುನೀತ್ ಹುಟ್ಟುಹಬ್ಬದ ದಿನ ಮಾರ್ಚ್ 17ರಂದು ಬೆಂಗಳೂರಿನಲ್ಲಿಯೇ ಡಾ ರಾಜ್ ಕುಮಾರ್ ಅವರ ತವರೂರಲ್ಲಿ ನಡಿಗೆ ಕೈಗೊಳ್ಳಲು ನಿರ್ಧರಿಸಿದರು. ವೈದ್ಯರು ಮಂಡಿಯ ಸಮಸ್ಯೆಯಿಂದ ಸಾಧ್ಯವಿಲ್ಲ ಎಂದು ಹೇಳಿದರೂ ಸವಾಲಿನಿಂದ ಹಠಪಟ್ಟು ಕೈಗೊಂಡಿದ್ದಾರೆ.

ಅಪ್ಪು ಅಂದರೆ ಪುನೀತ್ ರಾಜ್ ಕುಮಾರ್ ಅವರ ಹೆಗ್ಗಳಿಕೆ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನಲ್ಲಿ ಹಲವರು ಅವರಿಂದ ಸ್ಪೂರ್ತಿ ಪಡೆದಿದ್ದಾರೆ. ಕೊಹಿನೂರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಅವರೊಬ್ಬ ವಜ್ರವಾಗಿದ್ದು, ಎಲ್ಲಾ ವರ್ಗದ ಜನರು ಅವರನ್ನು ಪ್ರೀತಿಸುತ್ತಾರೆ. ಅದು ಅವರ ಸಿನೆಮಾಗಳಿಂದ ಮಾತ್ರವಲ್ಲ, ಬಡವರಿಗೆ ಮಾಡುತ್ತಿಲ್ಲ ಸಹಾಯದಿಂದ. ಅವರಿಗೆ ನಿಜಕ್ಕೂ ಭಾರತ ರತ್ನ (Bharat Ratna) ನೀಡಬೇಕು ಎಂದು ಹೇಳುತ್ತಾ ತಮ್ಮ ದೈನಂದಿನ 25 ಕಿಲೋ ಮೀಟರ್ ನಡಿಗೆಗೆ ಅಣಿಯಾಗುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com