ಬೆಂಗಳೂರು: ಕೋವಿಡ್-19 ಟೆಸ್ಟ್ ಮಾಡಿಸದಿದ್ದರೂ ಮಾಡಿಸಿರುವುದಾಗಿ ಜನರಿಗೆ ಎಸ್ಎಂಎಸ್ ಸಂದೇಶ!

ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಆರೋಗ್ಯ ಇಲಾಖೆಯಿಂದ ಬರುತ್ತಿರುವ ಸಂದೇಶದಿಂದ ನಾಗರಿಕರು ಇದೀಗ ಚಿಂತೆಗೀಡಾಗಿದ್ದಾರೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಆರೋಗ್ಯ ಇಲಾಖೆಯಿಂದ ಬರುತ್ತಿರುವ ಸಂದೇಶದಿಂದ ನಾಗರಿಕರು ಇದೀಗ ಚಿಂತೆಗೀಡಾಗಿದ್ದಾರೆ.  ಸ್ಯಾಂಪಲ್ಸ್ ಗಳನ್ನು ತೆಗೆದುಕೊಂಡಿದ್ದು, ವರದಿ ಬರುವವರೆಗೂ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರುವಂತೆ ಸಂದೇಶದಲ್ಲಿ ಹೇಳಲಾಗುತ್ತಿದೆ.

ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲೂ ಇದೇ ರೀತಿಯ ಸಂದೇಶ ಕಳುಹಿಸಲಾಗುತಿತ್ತು. ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ತೆಗೆದುಕೊಂಡಿರುವುದಾಗಿ ಅನೇಕರಿಗೆ ಮೆಸೇಜ್ ಕಳುಹಿಸಲಾಗಿದೆ. 

'ನಾನು ಚೆನ್ನಾಗಿದ್ದು, ಆಫೀಸ್ ಗೆ ಹೋಗುತ್ತಿದ್ದೇನೆ. ಇದ್ದಕ್ಕಿದ್ದಂತೆ ಆರ್ ಟಿ- ಪಿಸಿಆರ್ ಸ್ಯಾಂಪಲ್ಸ್ ಕೊಟ್ಟಿದ್ದು, ವರದಿ ಬರುವವರೆಗೂ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರುವಂತೆ ಹೇಳಲಾಗಿದೆ. ಮೊದಲ ಅಲೆ ವೇಳೆಯಲ್ಲಿ ನನ್ನ ಸ್ಯಾಂಪಲ್ಸ್ ಕೊಟ್ಟಿದೆ. ಕಳೆದ ಐದು ದಿನಗಳಲ್ಲಿ ಯಾವುದೇ ಸ್ಯಾಂಪಲ್ಸ್ ಕೊಟ್ಟಿಲ್ಲ ಎಂದು ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುವ ಕೆ. ನಯನ ಹೇಳಿದರು.

ನಯನ ರೀತಿಯಲ್ಲಿ ಅನೇಕ ಮಂದಿ ಸಂದೇಶ ಪಡೆದಿದ್ದಾರೆ. ನನ್ನ ರೂಮ್ ಮೇಟ್ ಸಹೋದ್ಯೋಗಿಯೊಬ್ಬರಿಗೆ ಕೋವಿಡ್-19 ಪಾಸಿಟಿವ್ ಬಂದ ನಂತರ ಆತ ಸ್ಯಾಂಪಲ್ಸ್ ನೀಡಿದ್ದ. ನೆಗೆಟಿವ್ ರಿಪೋರ್ಟ್ ಬಂದಿತ್ತು. ನಾನು ಯಾವುದೇ ರೀತಿಯ ಸ್ಯಾಂಪಲ್ಸ್ ನೀಡಿರಲಿಲ್ಲ, ಆದರೆ, ನನ್ನ ಸ್ಯಾಂಪಲ್ಸ್ ಕೂಡಾ ಸಂಗ್ರಹಿಸಲಾಗಿದೆ ಎಂಬ ಮೆಸೇಜ್ ಬಂದಿದೆ ಎಂದು ಖಾಸಗಿ ಸಂಸ್ಥೆಯ ನೌಕರ ಆಶಿಶ್ ತಿಳಿಸಿದರು. 

ಲಸಿಕೆಯೇ ಪಡೆಯದ ಚಿರಾಗ್ (19) ಗೆ ಈಗಾಗಲೇ ಎರಡನೇ ಡೋಸ್ ಹಾಗೂ ಸಂಪೂರ್ಣ ಲಸಿಕೆ ಪಡೆದಿರುವುದಾಗಿ ಬಂದಿರುವ ಮೆಸೇಜ್ ನಿಂದ ಆತಂಕಗೊಂಡಿದ್ದಾರೆ. ಎರಡು ಕೇಸ್ ಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಆರೋಗ್ಯ ಆಯುಕ್ತ ಡಿ ರಂದೀಪ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದರು.

ಸ್ಯಾಂಪಲ್ಸ್ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಲಸಿಕೆ ಪಡೆಯದಿದ್ದರೂ ಪಡೆದಿರುವುದಾಗಿ ಸಂದೇಶ ಬಂದಿರುವ ನಾಗರಿಕರು ಕೂಡಲೇ 1533 ಅಥವಾ 104 ಸಂಪರ್ಕಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ವಿ. ತ್ರಿಲೋಕಚಂದ್ರ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com