ಅಕ್ರಮ ಬಿಲ್ಡರ್‌ಗಳು ಮನೆ ಖರೀದಿದಾರರಿಗೆ ಪರಿಹಾರವಾಗಿ 268 ಕೋಟಿ ರೂ. ಪೈಕಿ ಕೊಟ್ಟಿದ್ದು ಕೇವಲ 16 ಕೋಟಿ ರೂ. ಮಾತ್ರ!

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ಕೆ-ರೇರಾ) ನಿನ್ನೆಗೆ ಆರನೇ ವರ್ಷಕ್ಕೆ ಕಾಲಿಟ್ಟಿದ್ದು ರಾಜ್ಯದಲ್ಲಿ ಅದರ ಪ್ರಭಾವದ ವಿಮರ್ಶಾತ್ಮಕ ಮೌಲ್ಯಮಾಪನವು ಶಕ್ತಿಯುತವಾಗಿ ಬದಲಾಗಲು ಬಹಳ ದೂರ ಪ್ರಯಾಣಿಸಬೇಕಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು(ಕೆ-ರೇರಾ) ನಿನ್ನೆಗೆ ಆರನೇ ವರ್ಷಕ್ಕೆ ಕಾಲಿಟ್ಟಿದ್ದು ರಾಜ್ಯದಲ್ಲಿ ಅದರ ಪ್ರಭಾವದ ವಿಮರ್ಶಾತ್ಮಕ ಮೌಲ್ಯಮಾಪನವು ಶಕ್ತಿಯುತವಾಗಿ ಬದಲಾಗಲು ಬಹಳ ದೂರ ಪ್ರಯಾಣಿಸಬೇಕಾಗಿದೆ. 

ರೇರಾ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಈ ಅಂಕಿಅಂಶಗಳ ಪ್ರಕಾರ, ನ್ಯಾಯಕ್ಕಾಗಿ ಕೆ-ರೇರಾ ನ್ಯಾಯಾಲಯದ ಮೊರೆ ಹೋದ ಮನೆ ಖರೀದಿದಾರರಿಗೆ ಅಕ್ರಮ ಬಿಲ್ಡರ್‌ಗಳು ಪರಿಹಾರವಾಗಿ 268 ಕೋಟಿ ರೂಪಾಯಿ ಪಾವತಿಸಲು ಆದೇಶಿಸಿತ್ತು. ಆದರೆ ಇಲ್ಲಿಯವರೆಗೂ ಕೇವಲ 16 ಕೋಟಿ ರೂಪಾಯಿ ಮಾತ್ರ ಪಾವತಿಯಾಗಿದೆ. 664 ಪ್ರಕರಣಗಳಲ್ಲಿ ಕೇವಲ 48 ಪ್ರಕರಣಗಳಲ್ಲಿ ಮಾತ್ರ ಖರೀದಿದಾರರಿಗೆ ಹಣ ಸಿಕ್ಕಂತಾಗಿದೆ. 

ಪ್ರಾಧಿಕಾರಕ್ಕೆ ಸುಮಾರು 6,993 ದೂರುಗಳು ಬಂದಿದ್ದು ಆ ಪೈಕಿ ಇದುವರೆಗೆ ಕೇವಲ 3,381 ದೂರುಗಳನ್ನು ಮಾತ್ರ ಆಲಿಸಲಾಗಿದೆ. ಇದನ್ನು ಗಮನಿಸದರೆ 50 ಪ್ರತಿಶತಕ್ಕಿಂತ ಕಡಿಮೆ ಮನೆ ಖರೀದಿದಾರರಿಗೆ ಇದರ ಪ್ರಯೋಜನವಾಗಿದೆ. ಮನೆ ಖರೀದಿದಾರರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೀಪಲ್ಸ್ ಕಲೆಕ್ಟಿವ್ ಎಫರ್ಟ್ಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಶಂಕರ್, ಮುಖ್ಯಮಂತ್ರಿ ಮತ್ತು ವಸತಿ ಸಚಿವರಿಗೆ ಸಲ್ಲಿಸಿದ ಪತ್ರದಲ್ಲಿ, 'ಕಳೆದ ಐದು ವರ್ಷಗಳಲ್ಲಿ  ರೇರಾದ ವೈಫಲ್ಯಗಳು ಮತ್ತು ನ್ಯೂನತೆಗಳನ್ನು ವಿವರಿಸಲಾಗಿದೆ ಎಂದರು. 

ಕೆ-ರೇರಾ ಕಾರ್ಯವೈಖರಿಯನ್ನು ಪರಿಶೀಲಿಸಿ ಸರಿಪಡಿಸಲು ಸರ್ಕಾರಕ್ಕೆ ಮನವಿ ಮಾಡಿರುವ ಅವರು, ರೇರಾ ವಿಲೇವಾರಿ ಮಾಡಿರುವ 3,381 ಪ್ರಕರಣಗಳನ್ನು ಉಲ್ಲೇಖಿಸಿದ ಅವರು, 'ಬಿಲ್ಡರ್‌ಗಳು ಆದೇಶವನ್ನು ಪಾಲಿಸಿದ್ದಾರೆ ಎಂಬುದರ ಕುರಿತು ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇಲ್ಲ. ಅಂತಹ ತೀರ್ಪನ್ನು ಕಾರ್ಯಗತಗೊಳಿಸದಿದ್ದಾಗ ಅಥವಾ ನಿಗದಿತ ಸಮಯದೊಳಗೆ ಮರುಪಾವತಿ ಮಾಡದಿದ್ದರೆ ಆಗ ಆ ತೀರ್ಪಿನ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.

ರಿಯಲ್ ಎಸ್ಟೇಟ್ ವಲಯದ ನಿಯಂತ್ರಣ ಮತ್ತು ಉತ್ತೇಜನವನ್ನು ಸಮರ್ಥ, ಪಾರದರ್ಶಕ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಖಚಿತಪಡಿಸಿಕೊಳ್ಳಲು ಮತ್ತು ಮನೆ ಖರೀದಿದಾರರ ಹಿತಾಸಕ್ತಿಗಳನ್ನು ರಕ್ಷಿಸಲು ರೇರಾ ವನ್ನು ಪರಿವರ್ತಕ ಶಾಸನವೆಂದು ಹೇಳಲಾಗುತ್ತಿದೆ ಎಂದು ಶಂಕರ್ ಹೇಳಿದರು. 'ಆದರೆ K-RERA ವೆಬ್‌ಪುಟದಲ್ಲಿ ಯಾವುದೇ ಪಾರದರ್ಶಕ ಮತ್ತು ಜವಾಬ್ದಾರಿಯುತ ಡೇಟಾ ಇಲ್ಲ' ಎಂಬುದರ ಬಗ್ಗೆ ಗಮನ ಸೆಳೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com