ಬೆಂಗಳೂರು: ವೇತನ ವಿಳಂಬ; ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರು ಸಂಕಷ್ಟದಲ್ಲಿ

ವೇತನವನ್ನು ಸಕಾಲಕ್ಕೆ ಪಾವತಿಸುತ್ತಿಲ್ಲ ಎಂದು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲವು ಆರೋಗ್ಯ ಕಾರ್ಯಕರ್ತರು ದೂರಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೇತನವನ್ನು ಸಕಾಲಕ್ಕೆ ಪಾವತಿಸುತ್ತಿಲ್ಲ ಎಂದು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲವು ಆರೋಗ್ಯ ಕಾರ್ಯಕರ್ತರು ದೂರಿದ್ದಾರೆ. ನಮಗೆ ಮಾಸಿಕ ಸಂಬಳ ಬರುತ್ತಿಲ್ಲ. ಕೆಲವೊಮ್ಮೆ ಆರು ತಿಂಗಳ ತಿಂಗಳ ಅವಧಿಯಲ್ಲಿ ಒಂದೆರಡು ತಿಂಗಳ ಸಂಬಳ ಮಾತ್ರ ಸಿಗುತ್ತದೆ ಎಂದು ಯಮಲೂರು ಯುಪಿಎಚ್‌ಸಿಯ ಡಾ.ಆರ್ . ಜೆ. ಅಶ್ವಿನಿ ಹೇಳಿದರು.

ಆಶಾ ಕಾರ್ಯಕರ್ತೆಯರ ಮೂಲ ವೇತನ ಮಾಸಿಕ 5,000 ರೂ. ಜೊತೆಗೆ ಪ್ರೋತ್ಸಾಹಧನವಿದೆ.  ಕಳೆದ ಮೂರು ತಿಂಗಳಿನಿಂದ ಸಂಬಳ ಇನ್ನೂ ಬಂದಿಲ್ಲ ಎಂದು ಹೇಳಿದ ವಿಭೂತಿಪುರ ಪಿಎಚ್‌ಸಿಯ ಆಶಾ ಕಾರ್ಯಕರ್ತೆ ಬಾಲಕೃಷ್ಣಮ್ಮ (38) ಮನೆ ಬಾಡಿಗೆ, ಮಗಳ ಶಾಲಾ ಶುಲ್ಕ ಇತ್ಯಾದಿ ಮಾಸಿಕ ಖರ್ಚು ಭರಿಸುವುದೇ ಕಷ್ಟಕರವಾಗಿದೆ ಎಂದರು.  ಸಕಾಲಕ್ಕೆ ಸಂಬಳ  ಬರಲ್ಲ, ಕೆಲವೊಮ್ಮೆ ಆರು ತಿಂಗಳ ಬಾಕಿ ಇರುತ್ತದೆ  ಪಿಎಚ್‌ಸಿಯ ಮತ್ತೊಬ್ಬ ಕ್ಷೇತ್ರ ಕಾರ್ಯಕರ್ತೆ ರಾಧಮ್ಮ ಆರ್ (42) ದೂರಿದರು

ಪಿಎಚ್‌ಸಿಯಲ್ಲಿ ಇಬ್ಬರು ನರ್ಸ್‌ಗಳು ಮತ್ತು ಇಬ್ಬರು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗುತ್ತದೆ.  ಅವರು ತುಂಬಾ ಕೆಲಸದ ಹೊರೆ ಹೊಂದಿದ್ದು, ಆರೋಗ್ಯವು ಹದಗೆಡುತ್ತಿದೆ ಎಂದು ಅವರು ವಿವರಿಸಿದರು. ಇಬ್ಬರೂ ನರ್ಸ್‌ಗಳಿಗೆ  1.2 ಲಕ್ಷ ಜನಸಂಖ್ಯೆಯನ್ನು ಒಳಗೊಳ್ಳುವ ಪ್ರದೇಶದ ಹೊಣೆ ವಹಿಸಲಾಗುತ್ತದೆ.  ತಮ್ಮ ಸ್ವಂತ ಖರ್ಚಿನಲ್ಲಿ ಇಡೀ ದಿನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಬೇಕಾಗಿದೆ ಎಂದು ಸ್ಟಾಫ್ ನರ್ಸ್‌ಗಳು ಮೂಲಸೌಕರ್ಯಗಳ ಕೊರತೆ ಮತ್ತು ಸಿಬ್ಬಂದಿ ಕೊರತೆಯ ಬಗ್ಗೆಯೂ ದೂರಿದರು.

 ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್.ಬಾಲಸುಂದರ್, ಕಳೆದ ಎರಡ್ಮೂರು ತಿಂಗಳಿನಿಂದ ಈ ಸಮಸ್ಯೆ ಇದೆ.  ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಇತ್ತೀಚೆಗೆ ಮುಚ್ಚಿ ಒಂದೇ ನೋಡಲ್ ಖಾತೆಯನ್ನು ರಚಿಸಿರುವುದರಿಂದ ಸಮಸ್ಯೆ ತಲೆದೋರಿದೆ. ಅದರ ಮೂಲಕ ಸಂಬಳವನ್ನು ವರ್ಗಾಯಿಸಲಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com