ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ: 14 ಮಂದಿ ಟಾಪರ್ ಗಳಲ್ಲಿ ಕರ್ನಾಟಕದ ವಿದ್ಯಾರ್ಥಿ
ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಳೆದ ಜೂನ್ 24 ರಿಂದ 30 ರವರೆಗೆ ನಡೆಸಿದ ಜೆಇಇ-ಮುಖ್ಯ ಪರೀಕ್ಷೆ ಸೆಷನ್ 1ರ ಫಲಿತಾಂಶ ಪ್ರಕಟಿಸಿದೆ. ಅದರಲ್ಲಿ ಒಬಿಸಿ (OBC) ವಿಭಾಗದಲ್ಲಿ ಪರೀಕ್ಷೆ ಬರೆದ ಬೋಯಾ ಹರೇನ್ ಸಾಥ್ವಿಕ್ ಅವರು 14 ಟಾಪರ್‌ಗಳಲ್ಲಿ ಕರ್ನಾಟಕದ ಒಬ್ಬರಾಗಿದ್ದಾರೆ.
ಸೆಷನ್-1, ಪೇಪರ್-1 (ಬಿಇ/ಬಿಟೆಕ್) ನಲ್ಲಿ 100 ಎನ್‌ಟಿಎ ಅಂಕ ಗಳಿಸಿರುವ ನಾಲ್ವರು ಟಾಪರ್‌ಗಳೊಂದಿಗೆ ತೆಲಂಗಾಣ ರಾಜ್ಯದಿಂದ ಅತಿ ಹೆಚ್ಚಿನ ಸಂಖ್ಯೆಯ ಟಾಪರ್ ಗಳು ಹೊಂದಿದ್ದಾರೆ. ನಂತರ ಆಂಧ್ರಪ್ರದೇಶದಲ್ಲಿ ಮೂವರು, ಅಸ್ಸಾಂ, ರಾಜಸ್ಥಾನ, ಹರಿಯಾಣ, ಜಾರ್ಖಂಡ್, ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ಒಬ್ಬರು ಟಾಪರ್ ಗಳಾಗಿದ್ದಾರೆ.
ಅಸ್ಸಾಂನ ಸ್ನೇಹಾ ಪರೀಕ್ 100 NTA ಸ್ಕೋರ್ ಪಡೆದ ಏಕೈಕ ವಿದ್ಯಾರ್ಥಿನಿ. ಹೆಣ್ಣು ಮಕ್ಕಳಿಗೆ ಹೋಲಿಸಿದರೆ 13 ಗಂಡು ಮಕ್ಕಳು 100 NTA ಸ್ಕೋರ್ ಪಡೆದಿದ್ದಾರೆ. OBC ವರ್ಗದಿಂದ ಇಬ್ಬರು ಅಭ್ಯರ್ಥಿಗಳು, ಸಾಮಾನ್ಯ ವರ್ಗದಿಂದ 10, EWS ವರ್ಗದಿಂದ 10 ರಲ್ಲಿ ಇಬ್ಬರು 100 NTA ಸ್ಕೋರ್ ಪಡೆದಿದ್ದಾರೆ. ಕರ್ನಾಟಕದಿಂದ ಎಸ್ಟಿ ವರ್ಗದ ತನ್ಮಯ್ ಗೆಜಪತಿ 99.9456977 ಅಂಕ ಪಡೆದಿದ್ದಾರೆ.
ಈ ವರ್ಷ 8.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪರೀಕ್ಷಾರ್ಥಿಗಳ ಪ್ರತಿ ಸೆಷನ್‌ಗೆ 100 ರಿಂದ 0 ವರೆಗಿನ ಪ್ರಮಾಣದಲ್ಲಿ ಪರಿವರ್ತಿಸಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ