ಬೆಂಗಳೂರು: ಮಾಜಿ ಗೆಳತಿಯ ಜೊತೆಗಿನ ರಹಸ್ಯ ಸಂಬಂಧ ಬಯಲು; ಪ್ರೇಯಸಿಯ ಪತಿ ಸಾಯುತ್ತಾನೆಂದು ಹೆದರಿ ಪ್ರೇಮಿ ಆತ್ಮಹತ್ಯೆ!
ಬೆಂಗಳೂರು: ತ್ರಿಕೋನ ಪ್ರೇಮ ಕಥೆಯೊಂದು ಸಾವಿನಲ್ಲಿ ಅಂತ್ಯವಾಗಿದೆ. ಮಾಜಿ ಗೆಳತಿಯ ಪತಿ ಸಾಯುತ್ತಾನೆಂದು ಹೆದರಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಸಾರಿಗೆ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಅರುಣ್ ಎಂಬಾತ ನೇಣಿಗೆ ಶರಣಾಗಿದ್ದಾರೆ.
ಅರುಣ್ ಮತ್ತು ಪೂಜಾ (ಹೆಸರು ಬದಲಿಸಲಾಗಿದೆ) ಪರಸ್ಪರ ಪ್ರೇಮಿಸುತ್ತಿದ್ದರು. ಅರುಣ್ ಸಹೋದರಿಯ ವಿವಾಹವಾದ ನಂತರ ತಾವಿಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಪೋಷಕರ ಒತ್ತಾಯದ ಮೇರೆಗೆ ಪೂಜಾ ಶ್ರವಣ್ ಎಂಬುವರನ್ನು ವಿವಾಹವಾಗಿದ್ದಳು.
ಮದುವೆಯ ನಂತರವೂ ಪೂಜಾ ಅರುಣ್ ಜೊತೆ ಸಂಬಂಧ ಮುಂದುವರಿಸಿದ್ದಳು. ಆದರೆ ಕೆಲವೇ ದಿನಗಳಲ್ಲಿ ಶ್ರವಣ್ ಗೆ ಪೂಜಾ ಅರುಣ್ ಜೊತೆ ಸಂಬಂಧ ಹೊಂದಿರುವ ಬಗ್ಗೆ ತಿಳಿಯಿತು. ಆತನನ್ನು ಬೈಯ್ಯುವ ಬದಲು ನಾನೇ ಸಾಯುತ್ತೇನೆ ಎಂದು ಶ್ರವಣ್ ತನ್ನ ಪತ್ನಿ ಪೂಜಾ ಬಳಿ ಹೇಳಿದ್ದಾನೆ.
ಶ್ರವಣ್ ತನ್ನ ಡೆತ್ ನೋಟ್ ನಲ್ಲಿ ನನ್ನ ಹೆಸರು ಬರೆದು ನಿಜವಾಗಿಯೂ ಸಾಯುತ್ತಾನೆಂದು ಹೆದರಿದ ಅರುಣ್ ನೆಲಮಂಗಲದ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುರುಬರಹಳ್ಳಿ ನಿವಾಸಿಯಾದ ಅರುಣ್ 16 ವರ್ಷ ವಯಸ್ಸಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಅದಾದ ನಂತರ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಸಾಕುವ ಜವಾಬ್ಜಾರಿ ವಹಿಸಿಕೊಂಡಿದ್ದರು.
ಅರುಣ್ ಗೆ ಕರೆ ಮಾಡಿದ್ದ ಶ್ರವಣ್ ಪತ್ನಿಯಿಂದ ದೂರವಿರುವಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಜೊತೆಗೆ ಅರುಣ್‌ಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಲು ಪತ್ನಿ ಪೂಜಾಗೆ ಒತ್ತಾಯಿಸಿದ್ದ ಎಂಬ ಆರೋಪವು ಕೇಳಿ ಬಂದಿದೆ. ತನ್ನನ್ನು ಹೆದರಿಸಲು ಶ್ರವಣ ಮಾಡಿದ ಸಂಚು ತಿಳಿಯದ ಅರುಣ್ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾನೆ. ನೆಲಮಂಗಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ