ಛತ್ತೀಸ್ ಗಢ ಮಾದರಿಯಲ್ಲಿ ರೈತರಿಂದ 'ಗೋಮೂತ್ರ' ಖರೀದಿಸಲು ರಾಜ್ಯ ಸರ್ಕಾರ ಒಲವು

ಛತ್ತೀಸ್‌ಗಢ ಸರ್ಕಾರದ ಮಾದರಿಯನ್ನು ಅನುಸರಿಸಿ ಕರ್ನಾಟಕ ಪಶುಸಂಗೋಪನಾ ಇಲಾಖೆಯು ರೈತರಿಗೆ ಹೆಚ್ಚುವರಿ ಆದಾಯಕ್ಕೆ ಸಹಾಯ ಮಾಡಲು ಹಸುಗಳನ್ನು ಸಾಕುವ ರೈತರಿಂದ ಗೋಮೂತ್ರ ಖರೀದಿಸಲು ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಛತ್ತೀಸ್‌ಗಢ ಸರ್ಕಾರದ ಮಾದರಿಯನ್ನು ಅನುಸರಿಸಿ ಕರ್ನಾಟಕ ಪಶುಸಂಗೋಪನಾ ಇಲಾಖೆಯು ರೈತರಿಗೆ ಹೆಚ್ಚುವರಿ ಆದಾಯಕ್ಕೆ ಸಹಾಯ ಮಾಡಲು ಹಸುಗಳನ್ನು ಸಾಕುವ ರೈತರಿಂದ ಗೋಮೂತ್ರ ಖರೀದಿಸಲು ಮುಂದಾಗಿದೆ. ಆರಂಭದಲ್ಲಿ, ಇಲಾಖೆಯು ಉದ್ದೇಶಿತ ಗೋಶಾಲೆಗಳಿಂದ ಅವುಗಳನ್ನು ಪಡೆಯುತ್ತದೆ. ಗೋಮೂತ್ರ ಮತ್ತು ಸಗಣಿ ಬಳಸಿ ಹಲವು ಉತ್ಪನ್ನಗಳನ್ನು ತಯಾರಿಸಿ ಆ ಮೂಲಕ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಯೋಜನೆಯಾಗಿದೆ. 

ಪ್ರಸ್ತುತ ಕೆಲವು ಖಾಸಗಿ ಗೋಶಾಲೆಗಳಿಗೆ ಅನುದಾನ ನೀಡುತ್ತಿರುವ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಕನಿಷ್ಠ 100 ಗೋಶಾಲೆಗಳನ್ನು ಸ್ಥಾಪಿಸಲು ಮುಂದಾಗಿದೆ. ಅವುಗಳಲ್ಲಿ ಕೆಲವು ಈಗಾಗಲೇ ಪ್ರಾರಂಭವಾಗಿವೆ. ಇಲಾಖೆಯು ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆಗಳಿಗಾಗಿ ಭೂಮಿಯನ್ನು ಗುರುತಿಸಿದ್ದು, ಜಾನುವಾರುಗಳನ್ನು ಮೇಯಿಸಲು ಗೋಮಾಳಗಳನ್ನು ಸಹ ಹೊಂದಿದೆ. 

ಇತ್ತೀಚೆಗೆ ಛತ್ತೀಸ್‌ಗಢ ಸರ್ಕಾರವು ಗೋಮೂತ್ರವನ್ನು ಲೀಟರ್‌ಗೆ 4 ರೂಪಾಯಿಗೆ ಮತ್ತು ಹಸುವಿನ ಸಗಣಿ ಕೆಜಿಗೆ 2 ರೂಪಾಯಿಗೆ ಜಾನುವಾರುಗಳನ್ನು ಸಾಕುತ್ತಿರುವ ರೈತರಿಂದ ಖರೀದಿಸಲು ನಿರ್ಧರಿಸಿತ್ತು. 

ಈ ಬಗ್ಗೆ TNIE ಯೊಂದಿಗೆ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಪ್ರಸ್ತುತ ಗೋಶಾಲೆಗಳಂತಹ ಸೌಲಭ್ಯಗಳನ್ನು ಸ್ಥಾಪಿಸುತ್ತಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ತು ಸೇರಿದಂತೆ ಹಲವು ಖಾಸಗಿ ಮಠಗಳು ಮತ್ತು ಸಂಸ್ಥೆಗಳು ಗೋಮೂತ್ರ ಮತ್ತು ಗೋವಿನ ಸಗಣಿಗಳನ್ನು ಜೈವಿಕ ಅನಿಲ, ದೀಪಗಳು, ಶಾಂಪೂಗಳು, ಕೀಟನಾಶಕಗಳು, ಮುಲಾಮುಗಳು ಮತ್ತು ಇನ್ನೂ ಅನೇಕ ಉಪಯುಕ್ತ ಉತ್ಪನ್ನಗಳನ್ನು ತಯಾರಿಸುತ್ತವೆ. ಮುಂದಿನ ದಿನಗಳಲ್ಲಿ ನಮ್ಮದೇ ಆದ ಗೋಶಾಲೆಗಳನ್ನು ಹೊಂದಿದ ನಂತರ, ನಾವು ಈ ಸ್ಥಳಗಳಲ್ಲಿ ಗೋಮೂತ್ರ ಮತ್ತು ಹಸುವಿನ ಸಗಣಿ ಎರಡನ್ನೂ ಸಂಗ್ರಹಿಸಬಹುದು ಎಂದರು.

ಹಸುವಿನ ಸಗಣಿ ಸಂಗ್ರಹಿಸಲು ಮತ್ತು ಉತ್ಪನ್ನಗಳನ್ನು ತಯಾರಿಸಲು ಘಟಕಗಳಾಗಿ ಪರಿವರ್ತಿಸಲು ನಮಗೆ 20 ರಿಂದ 100 ಎಕರೆ ಭೂಮಿ ಇದೆ. ಕರ್ನಾಟಕದ ತಂಡ ಛತ್ತೀಸ್‌ಗಢ ಮಾದರಿಯನ್ನು ಅಧ್ಯಯನ ಮಾಡಲಿದೆ ಎಂದು ಸಚಿವರು ಹೇಳಿದರು. 

ನಾನು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ವಾರಣಾಸಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ಜೈವಿಕ ಇಂಧನವನ್ನು ತಯಾರಿಸುವುದನ್ನು ನೋಡಿದೆನು. ಮಹಾರಾಷ್ಟ್ರದ ಕಿನ್ನೇರಿ ಮಠದಲ್ಲಿ 35 ಉತ್ಪನ್ನಗಳನ್ನು ತಯಾರಿಸುತ್ತಾರೆ, ಅದು ಲಾಭದಾಯಕವಾಗಿದೆ. ನಮ್ಮದೇ ಆದ ಘಟಕಗಳಿದ್ದರೆ ರೈತರಿಗೆ ನೆರವಾಗಬಹುದು ಯೋಜನೆಗಳು ಆರಂಭಿಕ ಹಂತದಲ್ಲಿವೆ ಎಂದರು. 

ವಯಸ್ಸಾದ ಜಾನುವಾರುಗಳನ್ನು ಸಾಕಲು ಹೊರೆಯಾಗುತ್ತಿದೆ ಎಂದು ಹಳ್ಳಿ ಪ್ರದೇಶಗಳಲ್ಲಿ ಬೇಸರಿಸುವ ರೈತರಿಗೆ ಸರ್ಕಾರದ ಈ ಯೋಜನೆ ಸಹಾಯವಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com