ಬೇಬಿ ಬೆಟ್ಟದಲ್ಲಿ ಪರೀಕ್ಷಾರ್ಥ ಸ್ಫೋಟ: ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಆಕ್ಷೇಪ, ಡಿಸಿಗೆ ಪತ್ರ
ಮೈಸೂರು: ಕೃಷ್ಣರಾಜಸಾಗರ ಅಣೆಕಟ್ಟಿಗೆ ಅಪಾಯ ತಂದೊಡ್ಡುತ್ತಿದೆ ಎಂದು ಹೇಳಲಾಗುತ್ತಿರುವ ಬೇಬಿ ಬೆಟ್ಟದಲ್ಲಿನ ಪರೀಕ್ಷಾರ್ಥ ಸ್ಫೋಟವನ್ನು ಕೂಡಲೇ ನಿಲ್ಲಿಸುವಂತೆ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಹೌದು.. ಮಂಡ್ಯದ ಬೆಬಿ ಬೆಟ್ಟದ ವಿವಾದಕ್ಕೆ ಪ್ರಮೋದಾ ದೇವಿ ಒಡೆಯರ್ ಅವರು ಮಧ್ಯ ಪ್ರವೇಶ ಮಾಡಿದ್ದು, ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಮಂಡ್ಯ ಡಿಸಿಗೆ ಆಕ್ಷೇಪ ಪತ್ರ ಕಳುಸಿದ್ದಾರೆ.
ಮೂಲಗಳ ಪ್ರಕಾರ ಪ್ರಮೋದಾ ದೇವಿ ಒಡೆಯರ್ ಪರ ವಕೀಲ ನರೇಂದ್ರ.ಡಿ.ವಿ.ಗೌಡ ಮೂಲಕ ಡಿಸಿಗೆ ಆಕ್ಷೇಪ ಪತ್ರ ಕಳುಹಿಸಲಾಗಿದ್ದು, ಅಲ್ಲದೆ ಜುಲೈ.22ರಂದು ಮೇಲ್ ಮೂಲಕವೂ ಆಕ್ಷೇಪಣೆ ಮಾಡಿದ್ದು, ಇದೀಗಾ ಖುದ್ದು ಡಿಸಿ ಆಪ್ತ ಶಾಖೆಗೆ ವಕೀಲರ ಮೂಲಕ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಪತ್ರದಲ್ಲಿ ಬೇಬಿ ಬೆಟ್ಟ ಸರ್ವೇ ನಂಬರ್ 1 ಅಮೃತ್ ಮಹಲ್ ಒಟ್ಟು 1,623 ಎಕರೆ ಜಮೀನು ರಾಜಮನೆತನಕ್ಕೆ ಸೇರಿದ್ದಾಗಿದೆ. 1950ರ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಅದು ನಮ್ಮ ಖಾಸಗಿ ಆಸ್ತಿ. ನಮ್ಮ ಅನುಮತಿ ಪಡೆಯದೆ ಟ್ರಯಲ್ ಬ್ಲಾಸ್ಟ್ ಮಾಡೋದು ಕಾನೂನು ಬಾಹಿರವಾಗಿದೆ. ಅಲ್ಲದೇ ನಮ್ಮ ಒಪ್ಪಿಗೆ ಪಡೆಯದೆ ಅನುಮತಿ ಕೊಟ್ಟಿರೋದಕ್ಕೆ ಆಕ್ಷೇಪ ಇದೆ ಎಂದು ಹೇಳಿದ್ದಾರೆ. ಕೂಡಲೇ ಈ ಅನುಮತಿ ಆದೇಶ ಹಿಂಪಡೆಯಬೇಕು. ತಪ್ಪಿದಲ್ಲಿ ಕಾನೂನಿನ ಮೂಲಕ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ