ಬೆಂಗಳೂರು: ಪಿಎಂ ಮೋದಿ ಪಾಲ್ಗೊಳ್ಳುವ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ 200 ಕಾರ್ಮಿಕರು ಕೆಲಸ!

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ನಗರದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮಕ್ಕಾಗಿ ಕೊಮ್ಮಘಟ್ಟದ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.
ವೇದಿಕೆ ಸಿದ್ದತೆಯಲ್ಲಿರುವ ಕಾರ್ಮಿಕರ ಚಿತ್ರ
ವೇದಿಕೆ ಸಿದ್ದತೆಯಲ್ಲಿರುವ ಕಾರ್ಮಿಕರ ಚಿತ್ರ
Updated on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ನಗರದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮಕ್ಕಾಗಿ ಕೊಮ್ಮಘಟ್ಟದ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಕೆಲವು ಅದ್ಧೂರಿ ಕಾರ್ಯಕ್ರಮಗಳು ಸೇರಿದಂತೆ ಹಲವು ಸಮಾರಂಭಗಳಿಗೆ ಅಚ್ಚುಕಟ್ಟಾದ ವೇದಿಕೆ ವ್ಯವಸ್ಥೆ ಮಾಡುವಲ್ಲಿ ಹೆಸರುವಾಸಿಯಾಗಿರುವ ಕೆ.ವಿ.ರಾಜಾ ಅವರಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ, ಬೆಂಗಳೂರು ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಲೋಕಾರ್ಪಣೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಚಾಮರಾಜಪೇಟೆಯಲ್ಲಿರುವ ರಾಜಾ ಎಂಟರ್‌ಪ್ರೈಸಸ್‌ನ ಮಾಲೀಕ ರಾಜಾ, ವೇದಿಕೆ ಸಿದ್ಧಪಡಿಸಲು ಸುಮಾರು 200 ಕಾರ್ಮಿಕರನ್ನು ಒಳಗೊಂಡಿರುವ ತನ್ನ ತಂಡ ಹದಿನೈದು ದಿನ ಶ್ರಮಿಸಿದೆ. ಇದೊಂದು ಸವಾಲಿನ ಕೆಲಸವಾಗಿತ್ತು. ದೊಡ್ಡ ಕಾರ್ಯಕ್ರಮಕ್ಕಾಗಿ  ​​ಬೃಹತ್ ಮೈದಾನವನ್ನು ಸಮತಟ್ಟು ಮಾಡಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಳೆ ಹೆಚ್ಚಾಗಿತ್ತು ಎಂದರು.

ಜರ್ಮನಿ ಮತ್ತು ಚೀನಾದ ಬಟ್ಟೆಯಿಂದ ತಯಾರಿಸಲಾದ ವಿಸ್ತಾರವಾದ ಶಾಮಿಯಾನವು 700 ಮೀಟರ್ ಉದ್ದ ಮತ್ತು 280 ಮೀಟರ್ ಅಗಲವನ್ನು ಹೊಂದಿದೆ. ಒಟ್ಟು 40,000 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಸಾಮಾನ್ಯ ಆಸನಗಳ ಜೊತೆಗೆ ಅತ್ಯಾಧುನಿಕ ಆಸನಗಳ ಸಂಯೋಜನೆಯಾಗಿದೆ ಇಪ್ಪತ್ತು ಬೃಹತ್ ಎಲ್ಇಡಿ ಪರದೆಗಳು, ಲೈಟಿಂಗ್ ಮತ್ತು ಸ್ಟೇಜ್ ಕಾರ್ಪೆಟಿಂಗ್ ಸೇರಿದಂತೆ ಎಲ್ಲವನ್ನೂ ಸಂಸ್ಥೆ ವಹಿಸಿಕೊಂಡಿದೆ ಎಂದು ಅವರು ತಿಳಿಸಿದರು. 

 ಇದು ತನಗೆ ಹೊಸದೇನಲ್ಲ ಎಂದು ಹೇಳುವ ರಾಜಾ, ನಾವು 30 ವರ್ಷಗಳಿಂದ ವ್ಯಾಪಾರದಲ್ಲಿದ್ದೇವೆ. ಈ ಹಿಂದೆ ಪ್ರಧಾನಿ ಮೋದಿ,  ಮಂಗಳೂರು, ಕೊಯಮತ್ತೂರು, ಧಾರಾಪುರಂ ಮತ್ತು ಬೆಂಗಳೂರಿನಲ್ಲಿ ಮೂರು ಬಾರಿ ಭಾಗವಹಿಸಿದ್ದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾಗಿ ತಿಳಿಸಿದರು. ಎಲ್ಲಾ ವ್ಯವಸ್ಥೆಗೆ ತಗಲುವ ವೆಚ್ಚದ ಬಗ್ಗೆ ತಾಂತ್ರಿಕವಾಗಿ ಇನ್ನೂ ಲೆಕ್ಕ ಹಾಕಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com