ಪ್ರಧಾನಿ, ಸಿಎಂ ಜತೆ ನವೀನ್ ಗ್ಯಾನ ಗೌಡರ್ ಕುಟುಂಬ
ಪ್ರಧಾನಿ, ಸಿಎಂ ಜತೆ ನವೀನ್ ಗ್ಯಾನ ಗೌಡರ್ ಕುಟುಂಬ

ಬೆಂಗಳೂರು: ಉಕ್ರೇನ್ ನಲ್ಲಿ ಮೃತಪಟ್ಟಿದ್ದ ನವೀನ್ ಕುಟುಂಬ ಭೇಟಿ ಮಾಡಿದ ಪ್ರಧಾನಿ ಮೋದಿ

ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ನಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಗ್ಯಾನ ಗೌಡರ್ ಅವರ ಕುಟುಂಬವನ್ನು ಸೋಮವಾರ ಭೇಟಿ ಮಾಡಿದರು.

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ನಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಗ್ಯಾನ ಗೌಡರ್ ಅವರ ಕುಟುಂಬವನ್ನು ಸೋಮವಾರ ಭೇಟಿ ಮಾಡಿದರು.

ಇಂದು ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ಹಿಂಭಾಗದಲ್ಲಿ ಹಾವೇರಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನ ಗೌಡರ್ ಕುಟುಂಬವನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಇದ್ದರು.

ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ನಲ್ಲಿದ್ದ ನವೀನ್ ಗ್ಯಾನಗೌಡರ್ ಅವರು ರಷ್ಯಾ, ಉಕ್ರೇನ್ ಮೇಲೆ ಯುದ್ಧ ಸಾರಿದ ಪರಿಣಾಮ ರಷ್ಯಾ ದಾಳಿ ವೇಳೆ ಮೃತಪಟ್ಟಿದ್ದರು.

ಖಾರ್ಕೀವ್‌ನಲ್ಲಿ ರಷ್ಯಾ ನಡೆಸಿದ್ದ ಶೆಲ್‌ ದಾಳಿಯಲ್ಲಿ ಮಾರ್ಚ್‌ 1ರಂದು ನವೀನ್‌ ಗ್ಯಾನಗೌಡರ್‌ ಮೃತಪಟ್ಟಿದ್ದರು. ಖಾರ್ಕೀವ್‌ನ ನ್ಯಾಷನಲ್‌ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ನಾಲ್ಕನೇ ಸೆಮಿಸ್ಟರ್‌ ಓದುತ್ತಿದ್ದ ನವೀನ್ ದಿನಸಿ ಖರೀದಿಗೆಂದು ತಾವಿದ್ದ ಸ್ಥಳದಿಂದ ಹೊರಗೆ ಬಂದಿದ್ದಾಗ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದರು. ನವೀನ್ ಸಾವನ್ನಪ್ಪಿದ ಮೂರು ದಿನಗಳ ಬಳಿಕ ಉಕ್ರೇನ್ನಲ್ಲಿ ನವೀನ್ ಮೃತ ದೇಹದ ಗುರುತು ಪತ್ತೆಯಾಗಿತ್ತು. 20 ದಿನದ ಬಳಿಕ ನವೀನ್ ಮೃತದೇಹವನ್ನು ತಾಯ್ನಾಡಿಗೆ ತರಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com