ಜೆಎಸ್‌ಡಬ್ಲ್ಯು ಗ್ರೂಪ್ ನಿಂದ ಕರ್ನಾಟಕದಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ

ರಾಜ್ಯದಲ್ಲಿ ಇದುವರೆಗೆ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಜೆಎಸ್‌ಡಬ್ಲ್ಯೂ ಗ್ರೂಪ್, ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎಲ್ಲಾ ವ್ಯವಹಾರಗಳಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ...
ನವೀನ್ ಜಿಂದಾಲ್
ನವೀನ್ ಜಿಂದಾಲ್

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಜೆಎಸ್‌ಡಬ್ಲ್ಯೂ ಗ್ರೂಪ್, ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎಲ್ಲಾ ವ್ಯವಹಾರಗಳಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ ಎಂದು ಬುಧವಾರ ತಿಳಿಸಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಜೆಎಸ್‌ಡಬ್ಲ್ಯು ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರು, ಉಕ್ಕು, ಹಸಿರು ಇಂಧನ, ಸಿಮೆಂಟ್ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದಾಗಿ ತಿಳಿಸಿದರು.

ಇದೇ ವೇಳೆ ಖನಿಜ ಸಂಪನ್ಮೂಲಗಳ ಹರಾಜನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು ಎಂದು ಸಜ್ಜನ್ ಜಿಂದಾಲ್ ಮನವಿ ಮಾಡಿದರು.

"ಖನಿಜ ಹರಾಜುಗಳು ಉತ್ಪಾದನಾ ವಲಯದಲ್ಲಿ ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಕರ್ನಾಟಕದ ಬೆಳವಣಿಗೆಯ ಪಥವನ್ನು ಬೆಂಬಲಿಸುತ್ತದೆ" ಎಂದು ಅವರು ಹೇಳಿದರು.

ವಿಜಯನಗರದಲ್ಲಿರುವ JSW ಸ್ಟೀಲ್ 90 ರ ದಶಕದ ಮಧ್ಯಭಾಗದಲ್ಲಿ ನಮ್ಮ ಗ್ರೂಪ್ ಸ್ವಾಧೀನಪಡಿಸಿಕೊಂಡಾಗ ಒಣ ಮತ್ತು ಬಂಜರು ಭೂಮಿಯಾಗಿತ್ತು. ಈಗ ರಾಜ್ಯ ಮತ್ತು ಇಲ್ಲಿನ ಜನರ ಬೆಂಬಲದೊಂದಿಗೆ, ನಾವು ಅದನ್ನು ಭಾರತದ ಅತಿದೊಡ್ಡ ಉಕ್ಕಿನ ಸ್ಥಾವರವಾಗಿ ಪರಿವರ್ತಿಸಿದ್ದೇವೆ ಮತ್ತು  ಶೀಘ್ರದಲ್ಲೇ ಅದು ವಿಶ್ವದ ಅತಿದೊಡ್ಡ ಉಕ್ಕಿನ ಸ್ಥಾವರವಾಗಲಿದೆ" ಎಂದು ಜಿಂದಾಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com