ನನ್ನ ಉತ್ತರಾಧಿಯಾಗಿ ಬೆಳೆಯುತ್ತಿದ್ದ ಚಂದ್ರುಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ: ಎಂ.ಪಿ. ರೇಣುಕಾಚಾರ್ಯ

ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಇನ್ನೂ ಸತ್ಯಾಂಶ ಹೊರಗೆ ಬಂದಿಲ್ಲ.
ಶಾಸಕ ಎಂ. ರೇಣುಕಾಚಾರ್ಯ, ಚಂದ್ರಶೇಖರ್
ಶಾಸಕ ಎಂ. ರೇಣುಕಾಚಾರ್ಯ, ಚಂದ್ರಶೇಖರ್

ಹೊನ್ನಾಳಿ: ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಇನ್ನೂ ಸತ್ಯಾಂಶ ಹೊರಗೆ ಬಂದಿಲ್ಲ.

ಈ ಮಧ್ಯೆ ನನ್ನ ಉತ್ತರಾಧಿಕಾರಿಯಾಗಿ ಬೆಳೆಯುತ್ತಿದ್ದ ಸಹೋದರನ ಮಗ ಚಂದ್ರಶೇಖರ್ ಗೆ ಚಿತ್ರಹಿಂಸೆ ಕೊಟ್ಟು ಕ್ರೂರವಾಗಿ ಕೊಲೆ ಮಾಡಲಾಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.

ಈ ಕೊಲೆಯಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಶಾಸಕರ ಮಗನಿಗೆ ರಕ್ಷಣೆ ಇಲ್ಲ ಎಂದಾದರೆ ಸಾರ್ವಜನಿಕರಿಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. 

ನನ್ನ ಕಾರ್ಯಕರ್ತರು, ಪಕ್ಷದ ಮುಖಂಡರು ಚಂದ್ರು ಕಾರನ್ನು ಡ್ರೋನ್ ಬಳಸಿ ಪತ್ತೆ ಹಚ್ಚಿದ್ದಾರೆ. ಇಷ್ಟೆಲ್ಲಾ ಮಾಡಿದ್ದು ನನ್ನ ಕ್ಷೇತ್ರದ ಜನರೇ ಹೊರತು ಪೊಲೀಸರಲ್ಲ. ಚಂದ್ರು ಕೊನೆಯದಾಗಿ ಇದದ್ದು ಕಿರಣ್ ಜೊತೆ. ಆತನನ್ನು ನನ್ನ ಜೊತೆಯಲ್ಲಿದ್ದವರೇ ಪೊಲೀಸರಿಗೆ ಒಪ್ಪಿಸಿರುವುದಾಗಿ ಅವರು ತಿಳಿಸಿದ್ದಾರೆ. 

ನನಗೆ ಕೊಲೆ ಬೆದರಿಕೆ ಬಂದು ಒಂದು ವರ್ಷ ಆಗಿದೆ. ಆದರೂ ಪೊಲೀಸರು ಯಾವುದೇ ರೀತಿಯ ತನಿಖೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಚಂದ್ರಶೇಖರ್ ಕೊಲೆಯಾಗಿದ್ದು, ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com