
ಕೋಲಾರ: ಕೆಂಪೇಗೌಡರ ರಥಯಾತ್ರೆ ಸ್ವಾಗತ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ನಲ್ಲಿ ನಡೆದಿದೆ.
ಮಾಜಿ ಶಾಸಕ ಮಂಜುನಾಥ್ ಗೌಡ, ಹೂಡಿ ವಿಜಯ್ ಕುಮಾರ್ ಬಣಗಳ ನಡುವೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಮುಖಂಡ ಹೂಡಿ ವಿಜಯ್‌ಕುಮಾರ್ ನೇತೃತ್ವದ ಒಂದು ಗುಂಪು ಹಾಗೂ ಮಾಜಿ ಶಾಸಕ ಕೋಡಿಹಳ್ಳಿ ಮಂಜುನಾಥ್ ಗೌಡ ನೇತೃತ್ವದಲ್ಲಿ ಮತ್ತೊಂದು ಗುಂಪು ಮಾಲೂರು ತಾಲೂಕಿಗೆ ಯಾತ್ರೆಯನ್ನು ಬರಮಾಡಿಕೊಳ್ಳಲು ಕಾದು ಕುಳಿತಿತ್ತು.
ಎರಡೂ ಗುಂಪುಗಳು ಏಕಕಾಲದಲ್ಲಿ ಯಾತ್ರೆಯನ್ನು ಸ್ವೀಕರಿಸಲು ಯತ್ನಿಸಿದ ಪರಿಣಾಮ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಸಮ್ಮುಖದಲ್ಲಿ ಗದ್ದಲ ಉಂಟಾಯಿತು.
ಈ ವೇಳೆ ಮಂಜುನಾಥ ಗೌಡರು ರಥಯಾತ್ರೆ ವಾಹನವನ್ನು ಏರಿ ಚಾಲಕನನ್ನು ಕೆಳಗೆ ತಳ್ಳಿದ್ದಾರೆ. ಬಳಿಕ ವಿಜಯ್ ಕುಮಾರ್ ಬಣದ ಗುಂಪು ವಾಹನ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಗದ್ದಲ ಉಂಟಾಗಿದ್ದು, ಮಧ್ಯೆ ಪ್ರವೇಶಿಸಿದ ಪೊಲೀಸರು ಲಾಠಿಚಾರ್ಚ್ ಮಾಡಿ ಸ್ಥಳದಲ್ಲಿದ್ದ ಗದ್ದಲದ ವಾತಾವರಣ ತಿಳಿಗೊಳ್ಳುವಂತೆ ಮಾಡಿದರು.
Advertisement