ಬೆಳ್ತಂಗಡಿ: ದಲಿತ ಕಾರ್ಯಕರ್ತ ಪಿ. ಡೀಕಯ್ಯ ಸಾವಿನ ಬಗ್ಗೆ ಸಿಒಡಿ ತನಿಖೆಗೆ ಸರ್ಕಾರ ಆದೇಶ

ದಲಿತ ಹೋರಾಟಗಾರ ಪಿ. ಡೀಕಯ್ಯ ಅವರ ಸಾವಿನ ಕುರಿತು ಕರ್ನಾಟಕ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಂಗಳೂರು: ದಲಿತ ಹೋರಾಟಗಾರ ಪಿ. ಡೀಕಯ್ಯ ಅವರ ಸಾವಿನ ಕುರಿತು ಕರ್ನಾಟಕ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜುಲೈ 6 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಅವರ ಮನೆಯಲ್ಲಿ ತಲೆಗೆ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಡೀಕಯ್ಯ ಪತ್ತೆಯಾಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ.

ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಜು. 8 ರಂದು ಮೃತಪಟ್ಟಿದ್ದರು.

ಅವರ ಅಂಗಾಂಗಗಳನ್ನು ದಾನ ಮಾಡಿದ ನಂತರ ಮೃತದೇಹವನ್ನು ಅವರ ಹುಟ್ಟೂರಾದ ಕಾಣಿಯೂರಿನಲ್ಲಿ ಸಮಾಧಿ ಮಾಡಲಾಯಿತು. ನಂತರ ಅವರ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ಸಾವಿನ ಹಿಂದೆ ದುಷ್ಕೃತ್ಯವಿದೆ ಎಂದು ಶಂಕಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜು.18ರಂದು ಬೆಳ್ತಂಗಡಿ ತಹಶೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆಯಲಾಯಿತು.

ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಡೀಕಯ್ಯನ ಕುಟುಂಬ ಸದಸ್ಯರು ಸಿಐಡಿ ತನಿಖೆಗೆ ಒತ್ತಾಯಿಸಿದ್ದರು.

ರಾಜ್ಯ ಸರ್ಕಾರವು ನವೆಂಬರ್ 4 ರಂದು ತನ್ನ ಆದೇಶದಲ್ಲಿ ಪ್ರಕರಣದ ಕಡತವನ್ನು ಸಿಐಡಿಗೆ ಹಸ್ತಾಂತರಿಸುವಂತೆ ಬೆಳ್ತಂಗಡಿ ಪೊಲೀಸರನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com