ರಾಜ್ಯ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಳ, ಶಿಕ್ಷಕರ ಸಂಖ್ಯೆ ಮಾತ್ರ ಕಡಿಮೆ: ವರದಿ

​​​​​​​2020-21ಕ್ಕೆ ಹೋಲಿಸಿದರೆ ಶಾಲಾ ಶಿಕ್ಷಣದ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಉನ್ನತ ಮಾಧ್ಯಮಿಕ ಮಟ್ಟದಲ್ಲಿ 2021-22 ರಲ್ಲಿ ಜಿಇಆರ್ (ಒಟ್ಟು ದಾಖಲಾತಿ ಅನುಪಾತ ) ಸುಧಾರಿಸಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ​​​​​​​2020-21ಕ್ಕೆ ಹೋಲಿಸಿದರೆ ಶಾಲಾ ಶಿಕ್ಷಣದ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಉನ್ನತ ಮಾಧ್ಯಮಿಕ ಮಟ್ಟದಲ್ಲಿ 2021-22 ರಲ್ಲಿ ಜಿಇಆರ್ (ಒಟ್ಟು ದಾಖಲಾತಿ ಅನುಪಾತ ) ಸುಧಾರಿಸಿದೆ ಎಂದು ವರದಿಯಿಂದ ತಿಳಿದುಬಂದಿದೆ

ಶಿಕ್ಷಣ ಇಲಾಖೆ ಏಕೀಕೃತ ಜಿಲ್ಲಾ ಶಿಕ್ಷಣ ವ್ಯವಸ್ಥೆ (ಯುಡಿಎಸ್ಇ+) ವರದಿಯನ್ನು ಬಿಡುಗಡೆ ಮಾಡಿದ್ದು, ವರದಿಯಲ್ಲಿ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಿದ್ದರೂ ಶಿಕ್ಷಕರ ಸಂಖ್ಯೆ ಮಾತ್ರ ಕಡಿಮೆಯಿದೆ ಎಂದು ಹೇಳಿದೆ.

ರಾಜ್ಯದಲ್ಲಿ ಒಟ್ಟು 76,450 ಶಾಲೆಗಳಿದ್ದು, ಇದರಲ್ಲಿ 49,679 ಸರ್ಕಾರಿ ಶಾಲೆಗಳು, 7,110 ಸರ್ಕಾರಿ ಅನುದಾನಿತ ಮತ್ತು 19,650 ಖಾಸಗಿ ಅನುದಾನರಹಿತ ಮಾನ್ಯತೆ ಪಡೆದಿವೆ. ರಾಜ್ಯದ ಶಾಲೆಗಳಲ್ಲಿ ಕಳೆದ ವರ್ಷ 1.18 ಕೋಟಿಯಷ್ಟಿದ್ದ ಒಟ್ಟು ದಾಖಲಾತಿ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ 1.20 ಕೋಟಿಯಾಗಿದೆ. 2021-22ನೇ ಸಾಲಿನಲ್ಲಿ 8 ಲಕ್ಷಕ್ಕೂ ಹೆಚ್ಚು ಹೊಸ ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. 2021-22ನೇ ಸಾಲಿನಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಸಿಡಬ್ಲ್ಯೂಎಸ್ಎನ್ ಅಡಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದೆ.

ಇದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಹೊಸ ದಾಖಲಾತಿಗಳೊಂದಿಗೆ ಸರ್ಕಾರಿ ಶಾಲಾ ದಾಖಲಾತಿ 50.31 ಲಕ್ಷದಿಂದ 54.45 ಲಕ್ಷಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾತಿಯು ಕಳೆದ ವರ್ಷದಿಂದ ಸುಮಾರು ಎರಡು ಲಕ್ಷದಷ್ಟು 53.17 ಲಕ್ಷದಿಂದ 51.53 ಲಕ್ಷಕ್ಕೆ ಇಳಿದಿದೆ ಎಂದು ತಿಳಿಸಿದೆ.

2020-21 ಯುಡಿಐಎಸ್ಇ+ ವರದಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ 2.08 ಲಕ್ಷದಿಂದ 1.99 ಲಕ್ಷಕ್ಕೆ ಇಳಿದಿದೆ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಈ ಸಂಖ್ಯೆಯು 45,573 ರಿಂದ 42,772 ಕ್ಕೆ ಇಳಿದಿವೆ. ಇದು ವಿದ್ಯಾರ್ಥಿ ಶಿಕ್ಷಕರ ಅನುಪಾತದಲ್ಲಿ (ಪಿಟಿಆರ್) ಏರಿಳಿತಕ್ಕೆ ಕಾರಣವಾಗಿದೆ. ಪ್ರಸ್ತುತ, ಪ್ರಾಥಮಿಕ ಹಂತದಲ್ಲಿ ಒಬ್ಬ ಶಿಕ್ಷಕರಿಗೆ ಸುಮಾರು 23 ವಿದ್ಯಾರ್ಥಿಗಳಿದ್ದು, ಕಳೆದ ವರ್ಷಕ್ಕೆ 21 ವಿದ್ಯಾರ್ಥಿಗಳಿದ್ದರು ಎಂದು ಮಾಹಿತಿ ನೀಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2018-19ನೇ ಸಾಲಿನಲ್ಲಿ ಶಾಲೆಗಳಿಂದ ಆನ್ ಲೈನ್ ದತ್ತಾಂಶ ಸಂಗ್ರಹಣೆಯ ಯುಡಿಐಎಸ್ಇ + ವ್ಯವಸ್ಥೆಯನ್ನು ಕಾಗದದ ಸ್ವರೂಪದಲ್ಲಿ ಹಸ್ತಚಾಲಿತ ದತ್ತಾಂಶ ಭರ್ತಿ ಮಾಡುವ ಹಿಂದಿನ ಅಭ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಅಭಿವೃದ್ಧಿಪಡಿಸಿದೆ.

ಯುಡಿಐಎಸ್ಇ + ವ್ಯವಸ್ಥೆಯಲ್ಲಿ, ವಿಶೇಷವಾಗಿ ದತ್ತಾಂಶ ಸೆರೆಹಿಡಿಯುವಿಕೆ, ದತ್ತಾಂಶ ಮ್ಯಾಪಿಂಗ್ ಮತ್ತು ದತ್ತಾಂಶ ಪರಿಶೀಲನೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com