ಕನ್ನಡ ಸಾಹಿತ್ಯ ಸಮ್ಮೇಳನ: ಸಮಸ್ಯೆ ರಹಿತ ವಸತಿಗಾಗಿ ಶೀಘ್ರದಲ್ಲೇ ನೋಂದಾವಣಿ ಆರಂಭ; ಅಧಿಕಾರಿಗಳು

ಸರ್ವಜ್ಞನ ನಾಡು ಹಾವೇರಿಯಲ್ಲಿ ಜ.6ರಿಂದ 8ರ ನಡುವೆ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಬ್ಬಳ್ಳಿ: ಸರ್ವಜ್ಞನ ನಾಡು ಹಾವೇರಿಯಲ್ಲಿ ಜ.6ರಿಂದ 8ರ ನಡುವೆ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಮೂರು ದಿನಗಳ ಕಾಲ ನಡೆಯುವ ಕನ್ನಡ ಹಬ್ಬಕ್ಕೆ ಮೂರು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಈ ಬಾರಿ ಹೆಚ್ಚಿನ ಜನಸಂದಣಿಯನ್ನು ಆಡಳಿತ ಮಂಡಳಿ ನಿರೀಕ್ಷಿಸುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಹೋಟೆಲ್‌ಗಳು ಕಡಿಮೆ ಇರುವುದರಿಂದ ವಸತಿ ನಿಲಯಗಳು ಮತ್ತು ಸಮುದಾಯ ಭವನಗಳನ್ನು ವಸತಿ ಸ್ಥಳಗಳನ್ನಾಗಿ ಪರಿವರ್ತಿಸಲು ಆಡಳಿತ ಮಂಡಳಿ ಮುಂದಾಗಿದೆ.

ಸಮ್ಮೇಳನಕ್ಕೆ ಬರುವ ಜನರಿಗೆ ವಸತಿ ಕಲ್ಪಿಸಲು ಹೋಟೆಲ್‌ಗಳಷ್ಟೇ ಅಲ್ಲದೆ, ಸಮುದಾಯ ಭವನಗಳು ಮತ್ತು ಹಾಸ್ಟೆಲ್‌ಗಳನ್ನು ನಾವು ಗುರುತಿಸಲಾಗಿದೆ. ಭಾಗವಹಿಸುವವರ ಅಗತ್ಯತೆಗಳಿಗೆ ಅನುಗುಣವಾಗಿ ಹೆಚ್ಚುವರಿ ಶೌಚಾಲಯಗಳು, ಸ್ನಾನಗೃಹಗಳು ಮತ್ತು ಹಾಸಿಗೆಗಳನ್ನು ವ್ಯವಸ್ಥೆಗಳನ್ನು ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ವಸತಿ ಸ್ಥಳಗಳ ಸುತ್ತಲೂ ತಾತ್ಕಾಲಿಕ ಶೌಚಾಲಯಗಳನ್ನು ಒದಗಿಸಲಾಗುವುದು. ಸಮ್ಮೇಳನದಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ತಂಗುವ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗುವುದು ಎಂದು ಆಡಳಿತದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಿಸೆಂಬರ್ ಮೊದಲ ವಾರದೊಳಗೆ ನೋಂದಣಿಯನ್ನು ಆರಂಭಿಸುವ ನಿರೀಕ್ಷೆಯಿದೆ. ಸಮ್ಮೇಳನದ ಸಮಯದಲ್ಲಿ ಸಮಸ್ಯೆ ರಹಿತತೆಯನ್ನು ಖಚಿತಪಡಿಸಿಕೊಳ್ಳಲು ಭಾಗವಹಿಸುವವರು ಶೀಘ್ರದಲ್ಲೇ ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಶೀಘ್ರದಲ್ಲೇ ಕಸಾಪ ಸದಸ್ಯರು ಮತ್ತು ಹಿರಿಯ ಸಾಹಿತಿಗಳು ಸಭೆ ನಡೆಸಿ ವಿವಿಧ ಹಂತಗಳ ಹೆಸರುಗಳು ಮತ್ತು ಸಮ್ಮೇಳನದ ಪ್ರವೇಶ ಕುರಿತು ನಿರ್ಧರಿಸುತ್ತಾರೆಂದು ತಿಳಿಸಿದ್ದಾರೆ.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತು ಈಗಾಗಲೇ ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ.

ರಾಣೆಬೆನ್ನೂರು ಮತ್ತು ಹಂಗಲ್‌ನಲ್ಲಿರುವ ಹೋಟೆಲ್‌ಗಳನ್ನು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಮೀಸಲಿಡಲಾಗಿದೆ. ಸಮ್ಮೇಳನದ ಸಮಯದಲ್ಲಿ ಆಗಾಗ್ಗೆ ವಸತಿ ಸ್ಥಳದಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ ಬಸ್ ಸೇವೆಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾವೇರಿಯ ಕಸಾಪ ಸದಸ್ಯರೊಬ್ಬರು ಮಾತನಾಡಿ, ನೋಂದಣಿ ಸಂಖ್ಯೆ ಹೆಚ್ಚಾದರೆ ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲೂ ಹೋಟೆಲ್‌ಗಳನ್ನು ಬುಕ್ ಮಾಡಲಾಗುವುದು. ಹುಬ್ಬಳ್ಳಿ, ಶಿರಸಿ, ದಾವಣಗೆರೆ, ರಾಣೇಬೆನ್ನೂರಿನಲ್ಲಿ ವಸತಿಗಾಗಿ ಮೂರು ತಿಂಗಳ ಹಿಂದೆ ಸಮೀಕ್ಷೆ ನಡೆಸಿದ್ದೆವು. ಪ್ರಸ್ತುತ ಹಾಸ್ಟೆಲ್‌ಗಳು ಮತ್ತು ಸಮುದಾಯ ಭವನಗಳಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲು ಆಡಳಿತ ಮುಂದಾಗಿದೆ. ಭಾಗವಹಿಸುವವರ ಸಂಖ್ಯೆ ಹೆಚ್ಚಿದ್ದರೆ ದಾವಣಗೆರೆಯಲ್ಲೂ ಹೋಟೆಲ್‌ಗಳನ್ನು ಬಳಸಿಕೊಳ್ಳುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com