
ಮಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪದ ಬಗ್ಗೆ ತನಿಖೆಯಾಗಲಿದೆ. ಕಾಂಗ್ರೆಸ್ ನವರ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಹೀಗಾಗಿ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು. ವೋಟರ್ ಅಕ್ರಮ ಆರೋಪದ ಬಗ್ಗೆ ತನಿಖೆಯಾಗಲಿದೆ. ಮತದಾರರ ಗುರುತಿನ ಚೀಟಿಯಲ್ಲಿ ಸೇರ್ಪಡೆ ಮಾಡುವುದು, ಹೆಸರು ತೆಗೆಯುವುದು, ತಿದ್ದುಪಡಿ ಮಾಡುವುದನ್ನು ಚುನಾವಣಾ ಆಯೋಗ ಮಾಡುತ್ತಿರುತ್ತದೆ. ಮತದಾರರ ಪರಿಷ್ಕರಣೆಯನ್ನು ಆಯೋಗ ಪ್ರತಿವರ್ಷ ಮಾಡುತ್ತದೆ. ನಾಗರಿಕರು ವಿದೇಶಕ್ಕೆ ಹೋಗಿರುತ್ತಾರೆ, ಬೇರೆಡೆಗೆ ವಾಸ್ತವ್ಯ ವರ್ಗಾವಣೆಯಾಗಿರುತ್ತದೆ. ಎರಡೆರಡು ಕಡೆ ಹೆಸರು ನಮೂದು ಆಗಿರುತ್ತದೆ, ಆಗ ಅವರ ಗುರುತಿನ ಚೀಟಿಯ ಪರಿಷ್ಕರಣೆ ಮಾಡಬೇಕಾಗುತ್ತದೆ, ಅದರಲ್ಲೇನೂ ವಿಶೇಷವಿಲ್ಲ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಕಾನೂನುಬದ್ಧವಾಗಿ ನೀಡಿದ ಕಂಪೆನಿ ಮಾಡಿರುವ ತಪ್ಪಿನ ಬಗ್ಗೆ ತನಿಖೆಯಾಗುತ್ತದೆ.
ಸಂಸದ ನಳಿನ್ ಕುಮಾರ್ ಕಟೀಲು ಆರೋಗ್ಯ ವಿಚಾರಣೆ: ಇಂದು ಮಂಗಳೂರು ಪ್ರವಾಸದ ಸಂದರ್ಭದಲ್ಲಿ ಎ.ಜೆ. ಆಸ್ಪತ್ರೆಗೆ ಮುಖ್ಯಮಂತ್ರಿಗಳು ಭೇಟಿ ನೀಡಿ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆರೋಗ್ಯ ವಿಚಾರಿಸಿದರು.
Advertisement